ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ 10 ದಿನದಲ್ಲಿ ಗುಜರಾತ್ ಸಿಎಂ ರೂಪಾಣಿ ರಾಜೀನಾಮೆ: ಹಾರ್ದಿಕ್

By Sachhidananda Acharya
|
Google Oneindia Kannada News

Recommended Video

ಗುಜರಾತಿನ ಮುಂದಿನ ಮುಖ್ಯಮಂತ್ರಿ ಕ್ಷತ್ರಿಯ ಅಥವಾ ಪಾಟೀದಾರ್ ಸಮುದಾಯದವರು : ಹಾರ್ದಿಕ್ ಪಟೇಲ್ | Oneindia Kannada

ಅಹಮದಾಬಾದ್, ಜೂನ್ 15: ಗುಜರಾತ್ ಮುಖ್ಯಮಂತ್ರಿ ಬಿಜೆಪಿಯ ವಿಜಯ್ ರೂಪಾಣಿ ಇನ್ನು 10 ದಿನದಲ್ಲಿ ರಾಜೀನಾಮೆ ನೀಡಲಿದ್ದಾರೆ. ಹೀಗೊಂದು ಸ್ಪೋಟಕ ಸುದ್ದಿಯನ್ನು ಪಾಟೀದಾರ್ ಮೀಸಲಾತಿ ಹೋರಾಟದ ಮುಂದಾಳು ಹಾರ್ದಿಕ್ ಪಟೇಲ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಈ ಹಿಂದಿನ ಮುಖ್ಯಮಂತ್ರಿ "ಆನಂದಿಬೆನ್ ಪಟೇಲ್ ಅವರಿಗೆ ರಾಜೀನಾಮೆ ನೀಡಲು ಹೇಳಿದಂತೆ ನಿನ್ನೆಯ (ಬುಧವಾರ) ಸಂಪುಟ ಸಭೆಯಲ್ಲಿ ವಿಜಯ್ ರೂಪಾಣಿಯವರಿಗೆ ರಾಜೀನಾಮೆ ನೀಡಲು ಹೇಳಲಾಗಿದೆ," ಎಂದು ತಿಳಿಸಿದ್ದಾರೆ.

ಹಾರ್ದಿಕ್ ಪಟೇಲ್ ಗೆ ಮಧ್ಯ ಪ್ರದೇಶದಲ್ಲಿ ಮೊಟ್ಟೆ, ಕಲ್ಲೇಟಿನ ಸ್ವಾಗತ ಹಾರ್ದಿಕ್ ಪಟೇಲ್ ಗೆ ಮಧ್ಯ ಪ್ರದೇಶದಲ್ಲಿ ಮೊಟ್ಟೆ, ಕಲ್ಲೇಟಿನ ಸ್ವಾಗತ

"ಮುಂದಿನ 10 ದಿನಗಳಲ್ಲಿ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗುತ್ತದೆ. ಮುಂದಿನ ಮುಖ್ಯಮಂತ್ರಿ ಕ್ಷತ್ರಿಯ ಅಥವಾ ಪಾಟೀದಾರ್ ಸಮುದಾಯದವರು ಆಗಲಿದ್ದಾರೆ ಎಂದು ನಾನು ನಂಬಿದ್ದೇನೆ," ಎಂದು ಹೇಳಿದ್ದಾರೆ.

In 10 days Gujarat CM Vijay Rupani will resign says Hardik Patel

ಒಂದೊಮ್ಮೆ ಹಾರ್ದಿಕ್ ಪಟೇಲ್ ಹೇಳಿದಂತೆ ವಿಜಯ್ ರೂಪಾಣಿ ರಾಜೀನಾಮೆ ನೀಡಲಿದ್ದಾರಾ? ರಾಜೀನಾಮೆ ನೀಡಿದರೆ ಅವರೇ ಹೇಳಿದಂತೆ ಪಟೇಲ್ ಸಮುದಾಯವರು ಸಿಎಂ ಕುರ್ಚಿ ಏರಲಿದ್ದಾರಾ? ಹಿರಿಯ ಮುಖಂಡ ಹಾಲಿ ಉಪಮುಖ್ಯಮಂತ್ರಿ ನಿತಿನ್ ಭಾಯಿ ಪಟೇಲ್ ಅವರಿಗೆ ಅದೃಷ್ಟ ಒಲಿಯಲಿದೆಯಾ? ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ.

English summary
“The way Anandiben Patel was asked to resign, similarly Vijay Rupani was asked to resign in cabinet meeting yesterday. In 10 days the resignation will be accepted. I believe someone from 'Kshatriya' or 'Patidar' community will be the next CM," said Hardik Patel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X