ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಭಾಷಣ: ಹರ್ಭಜನ್, ವೀಣಾ ಮಲಿಕ್ ನಡುವೆ ರಂಪ ರಾಮಾಯಣ

|
Google Oneindia Kannada News

ನವದೆಹಲಿ, ಅ 8: ವಿಶ್ವಸಂಸ್ಥೆಯ ಸಾಮಾನ್ಯ ಶೃಂಗಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಭಾರತದ ಪ್ರಧಾನಿ ಮೋದಿ ಮಾಡಿದ ಭಾಷಣವನ್ನು ತುಲನೆ ಮಾಡಲಾಗಿತ್ತು. ಮತ್ತು, ಇಮ್ರಾನ್ ಭಾಷಣ ವ್ಯಾಪಕ ಟೀಕೆಗೂ ಗುರಿಯಾಗಿತ್ತು.

ಇಮ್ರಾನ್ ಖಾನ್ ಭಾಷಣದ ವಿಚಾರದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಪಾಕಿಸ್ತಾನದ ನಟಿ ವೀಣಾ ಮಲಿಕ್ ನಡುವೆ ಟ್ವೀಟ್ ಸಮರವೇ ನಡೆಯುತ್ತಿದೆ.

BPCL ಮಾರಾಟಕ್ಕೆ ಮುಂದಾದ ಸರ್ಕಾರ, ಮೋದಿ ಅಧಿಕಾರದಲ್ಲಿರುವುದು ದುರಂತBPCL ಮಾರಾಟಕ್ಕೆ ಮುಂದಾದ ಸರ್ಕಾರ, ಮೋದಿ ಅಧಿಕಾರದಲ್ಲಿರುವುದು ದುರಂತ

ಹರ್ಭಜನ್ ತಮ್ಮ ಟ್ವೀಟ್ ನಲ್ಲಿ ಹೀಗೆ ಬರೆದುಕೊಂಡಿದ್ದರು, " ವಿಶ್ವಸಂಸ್ಥೆಯಲ್ಲಿನ ಭಾಷಣದಲ್ಲಿ ಸಂಭಾವ್ಯ ಪರಮಾಣು ಯುದ್ಧದ ಸೂಚನೆಗಳು ಇದ್ದವು. ವಿಶ್ವದ ಒಬ್ಬ ಪ್ರಮುಖ ಕ್ರೀಡಾಪಟುವಾಗಿ ಇಮ್ರಾನ್ ತಮ್ಮ ಭಾಷಣದುದ್ದಕ್ಕೂ 'ರಕ್ತದೋಕುಳಿ, 'ಕೊನೆಯವರೆಗೆ ಹೋರಾಡಿ' ಎನ್ನುವ ಪದವನ್ನು ಬಳಸಿದರು".

Imran Khan UNGA Speech: Twitter War Between Harbhajan Singh And Veena Malik

"ಇದು ಉಭಯ ರಾಷ್ಟ್ರಗಳ ನಡುವೆ ದ್ವೇಷವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಒಬ್ಬ ಕ್ರೀಡಾಪಟುವಾಗಿ ಇಮ್ರಾನ್ ಖಾನ್ ಶಾಂತಿಗೆ ಹೆಚ್ಚಿನ ಒತ್ತನ್ನು ನೀಡಬೇಕು" ಎಂದು ಹರ್ಭಜನ್ ತಮ್ಮ ಟ್ವೀಟ್ ನಲ್ಲಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ವೀಣಾ ಮಲಿಕ್, "ಪಿಎಂ ಇಮ್ರಾನ್ ಖಾನ್ ಅವರು ತಮ್ಮ ಭಾಷಣದಲ್ಲಿ ಶಾಂತಿಯ ಬಗ್ಗೆ ಮಾತನಾಡಿದ್ದಾರೆ. ಕರ್ಫ್ಯೂ ಸಡಿಲಿಸಿದಾಗ ಸಂಭವಿಸಬಹುದಾದ ವಾಸ್ತವತೆಯ ಬಗ್ಗೆ ಅವರು ಮಾತನಾಡಿದರು".

" ಅವರು ಅತ್ಯಂತ ಸ್ಪಷ್ಟವಾಗಿ ಹೇಳುವಂತೆ ಇದು ಬೆದರಿಕೆ ಅಲ್ಲ ನಿಮಗೆ ಇಂಗ್ಲಿಷ್ ಅರ್ಥವಾಗುವುದಿಲ್ಲವೇ" ಎಂದು ವೀಣಾ ಮಲಿಕ್, ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದರು.

ಇದಕ್ಕೆ ಹರ್ಭಜನ್ ರಿಪ್ಲೈ ಹೀಗಿತ್ತು, "ಇವರ ಇಂಗ್ಲಿಷ್ ನೋಡಿ. ಇಂಗ್ಲಿಷ್‌ನಲ್ಲಿ ಏನನ್ನಾದರೂ ಹಾಕುವ ಮೊದಲು ಓದಿ ನಂತರ ಪೋಸ್ಟ್ ಮಾಡಿ" ಎಂದು ಹರ್ಭಜನ್ ಸಿಂಗ್ ತಿರುಗೇಟು ನೀಡಿದ್ದಾರೆ. Surely ಪದವನ್ನು ವೀಣಾ ಮಲಿಕ್ ತಪ್ಪಾಗಿ ಬರೆದಿದ್ದರು.

English summary
Pak Prime MInister Imran Khan UNGA Speech: Twitter War Between Former Indian Cricketer Harbhajan Singh And Pak Actress Veena Malik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X