ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಮ್ರಾನ್ ಖಾನ್ ಪ್ರಮಾಣ ವಚನದಲ್ಲಿ ಸಿದ್ದು: ಭಾರತದ ಸ್ವಾಭಿಮಾನಕ್ಕಾದ ಧಕ್ಕೆ?

|
Google Oneindia Kannada News

ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಪಿಟಿಐ (ಪಾಕಿಸ್ತಾನ್ ತೆಹ್ರಿಕ್ ಇನ್ಸಾಫ್) ಪಕ್ಷದ ಮುಖಂಡ ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪಕ್ಕದಲ್ಲೇ ಇದ್ದರೂ, ಭಾರತ ಸೇರಿ ಸಾರ್ಕ್ ದೇಶದ ಯಾವುದೇ ಮುಖಂಡರಿಗೆ ಕರೆನೀಡದ ಇಮ್ರಾನ್, ಕಪಿಲ್ ದೇವ್, ಗವಾಸ್ಕರ್ ಮತ್ತು ನವಜೋತ್ ಸಿದ್ದುಗೆ ಮಾತ್ರ ಆಹ್ವಾನ ನೀಡಿದ್ದರು. ಅದರಲ್ಲಿ, ಸಿದ್ದು ಪ್ರಮಾಣವಚನ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಪಕ್ಷಾತೀತವಾಗಿ ಎಲ್ಲರೂ ಮೆಚ್ಚುವ ಮಾಜಿ ಪ್ರಧಾನಿ ವಾಜಪೇಯಿಯವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸದೇ, ಇಮ್ರಾನ್ ಖಾನ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿದ್ದು ಹೋದಾಗಲೇ, ಪಂಜಾಬ್ ಕಾಂಗ್ರೆಸ್ ಘಟಕದಲ್ಲೇ ಸಿದ್ದು ನಿಲುವಿಗೆ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್ ಸರಕಾರದಲ್ಲಿ ಸಿದ್ದು, ಸ್ಥಳೀಯಾಡಳಿತ, ಪ್ರವಾಸೋದ್ಯಮ ಖಾತೆಯ ಸಚಿವರು.

ಅಭಿಮಾನದ ರಾಯಭಾರಿಯಾಗಿ ಪಾಕಿಸ್ತಾನಕ್ಕೆ: ನವಜೋತ್ ಸಿಂಗ್ ಸಿಧುಅಭಿಮಾನದ ರಾಯಭಾರಿಯಾಗಿ ಪಾಕಿಸ್ತಾನಕ್ಕೆ: ನವಜೋತ್ ಸಿಂಗ್ ಸಿಧು

ವಾಘಾ ಗಡಿ ದಾಟಿ ಪಾಕಿಸ್ತಾನ ಪ್ರವೇಶಿಸಿದ್ದ ಸಿದ್ದುಗೆ ಪ್ರಮಾಣವಚನ ಸಮಾರಂಭದಲ್ಲಿ ಫ್ರಂಟ್ ಸೀಟ್ ಮರ್ಯಾದೆ ಸಿಕ್ಕಿದರೂ, ಹಲವಾರು ಕಾರಣಗಳಿಂದ ಸಿದ್ದು ಪಾಕ್ ಪ್ರವಾಸ ತೀರಾ ವಿವಾದಕ್ಕೆ ಗುರಿಯಾಗಿದೆ. ಮೂಲತಃ ಕ್ರಿಕೆಟ್ ಆಟಗಾರರಾಗಿರುವ ಇಮ್ರಾನ್, ಪಾಕಿಸ್ತಾನ ಕಂಡ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರು.

ಅದರಂತೇ, ಭಾರತದಲ್ಲಿ ತಮ್ಮ ಸಮಕಾಲೀನ ಕ್ರಿಕೆಟರುಗಳಲ್ಲಿ ಮೂವರಿಗೆ ಆಹ್ವಾನ ನೀಡಿದ್ದರು, ಅದರಲ್ಲಿ ಕಪಿಲ್ ಮತ್ತು ಗವಾಸ್ಕರ್ ಗೈರಾಗಿದ್ದರು. ಮೋದಿ ತಮ್ಮ ಪ್ರಮಾಣವಚನಕ್ಕೆ ಪಾಕ್ ಪ್ರಧಾನಿಯನ್ನು ಕರೆಯಬಹುದು, ನವಾಜ್ ಷರೀಪ್ ಮಗಳ ಮದುವೆಗೆ ಮೋದಿ ಹೋಗಬಹುದು. ಆದರೆ, ಸಿದ್ದು ಹೋದರೆ ತಪ್ಪಾ ಎನ್ನುವ ಪ್ರಶ್ನೆ ಈಗಾಗಲೇ ಬಂದಿದೆಯಾದರೂ, ಸಿದ್ದು 'ಅಪ್ಪುಗೆ ವೃತ್ತಾಂತ' ಇದಕ್ಕೆ ಉತ್ತರ ನೀಡುತ್ತದೆ.

ಪಕ್ಕದ ಪಾಕಿಸ್ತಾನ್, ಅದಕ್ಕೆ ಇಮ್ರಾನ್ ಖಾನ್- ಜ್ಯೋತಿಷ್ಯ ವಿಶ್ಲೇಷಣೆಪಕ್ಕದ ಪಾಕಿಸ್ತಾನ್, ಅದಕ್ಕೆ ಇಮ್ರಾನ್ ಖಾನ್- ಜ್ಯೋತಿಷ್ಯ ವಿಶ್ಲೇಷಣೆ

ಕಪಿಲ್ ಶರ್ಮಾ ಅವರ ಜನಪ್ರಿಯ ಕಾಮಿಡಿ ಶೋನಲ್ಲಿ ಅಗತ್ಯಕ್ಕಿಂತ ಜಾಸ್ತಿ ನಕ್ಕು, ಹೆಚ್ಚುಕಮ್ಮಿ ವೀಕ್ಷಕರಿಗೂ ಬೇಸರ ತರಿಸುವ ಸಿಕ್ಸರ್ ಸಿದ್ದು, ಪ್ರಮುಖ ರಾಷ್ಟ್ರೀಯ ಸುದ್ದಿವಾಹಿನಿಗಳು ಬಿತ್ತರಿಸುವ ಸುದ್ದಿಯ ಪ್ರಕಾರ, ಅನಗತ್ಯವಾಗಿ ಪಾಕ್ ಭೂಸೇನಾ ಮುಖ್ಯಸ್ಥರನ್ನು ಆಲಂಗಿಸಿಕೊಂಡಿದ್ದಾರೆ. ಇದನ್ನು ಪಂಜಾಬ್ ನಲ್ಲಿ ಅವರದೇ ಸರಕಾರದ ಸಿಎಂ ಖಂಡಿಸಿದ್ದಾರೆ. ಏನದು ಘಟನೆ, ಮುಂದಿದೆ...

ಉಡುವ ತೊಡುಗೆಯಲ್ಲಿ ಶಿಸ್ತಿನಲ್ಲಿರುವ ನವಜೋತ್ ಸಿಂಗ್ ಸಿದ್ದು

ಉಡುವ ತೊಡುಗೆಯಲ್ಲಿ ಶಿಸ್ತಿನಲ್ಲಿರುವ ನವಜೋತ್ ಸಿಂಗ್ ಸಿದ್ದು

ಬಹುತೇಕ ತಾವು ಉಡುವ ತೊಡುಗೆಯಲ್ಲಿ ಶಿಸ್ತಿನಲ್ಲಿರುವ ನವಜೋತ್ ಸಿಂಗ್ ಸಿದ್ದು, ರಾಯಲ್ ನೀಲಿ ಮತ್ತು ಪಿಂಕ್ ಟರ್ಬನ್ ಧರಿಸಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಕಾರ್ಯಕ್ರಮದ ಆಯೋಜಕರು, ಮೊದಲ ಸಾಲಿನಲ್ಲೇ ಸಿದ್ದುಗೆ ಆಸನ ನೀಡಿದ್ದರು. ಸಿದ್ದು ಪಕ್ಕದಲ್ಲೇ, ಪಿಓಕೆ (ಪಾಕಿಸ್ತಾನ್ ಆಕ್ರಮಿತ ಕಾಶ್ಮೀರ) ಸೇನಾ ಮುಖ್ಯಸ್ಥರು ಸಿದ್ದು ಜೊತೆಗೆ ಕೂತಿದ್ದರು. ಇದು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರ ಕೆಂಗಣ್ಣಿಗೂ ಗುರಿಯಾಯಿತು.

ಪಾಕಿಸ್ತಾನದ ಮುಖ್ಯಸ್ಥ ಜನರಲ್ ಬಜ್ವಾ

ಪಾಕಿಸ್ತಾನದ ಮುಖ್ಯಸ್ಥ ಜನರಲ್ ಬಜ್ವಾ

ಸಚಿವ ಸಿದ್ದು, ಪಾಕಿಸ್ತಾನದ ಮುಖ್ಯಸ್ಥ ಜನರಲ್ ಬಜ್ವಾ ಅವರನ್ನು ಕಾರ್ಯಕ್ರಮದಲ್ಲಿ ಆಲಂಗಿಸಿದ್ದರು, ವಿಡಿಯೋ ಫುಟೇಜ್ ಅನ್ನು ನೋಡುವುದಾದರೆ, ಸಿದ್ದು ಬಲವಂತವಾಗಿ ಬಜ್ವಾ ಅವರನ್ನು ಆಲಂಗಿಸಿದ್ದು ಕಂಡುಬರುತ್ತದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಪ್ರತೀದಿನ ನಮ್ಮ ಯೋಧರು ಹುತಾತ್ಮರಾಗುತ್ತಿದ್ದಾರೆ. ಇದನ್ನು ಪ್ರತಿಯೊಬ್ಬ ಮನುಷ್ಯನೂ ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದು ವಿರುದ್ದ ಕಿಡಿಕಾರಿದ್ದಾರೆ.

ಆತಂಕದಲ್ಲಿ ಸಿಧು, ಕಾಡುತ್ತಿದೆ 30 ವರ್ಷ ಹಳೆ ಕೇಸ್ಆತಂಕದಲ್ಲಿ ಸಿಧು, ಕಾಡುತ್ತಿದೆ 30 ವರ್ಷ ಹಳೆ ಕೇಸ್

ಇಮ್ರಾನ್ ಸೌಜನ್ಯಕ್ಕಾದರೂ ಸಿದ್ದು ಕಡೆ ಮುಖ ಮಾಡುವುದಿಲ್ಲ

ಇಮ್ರಾನ್ ಸೌಜನ್ಯಕ್ಕಾದರೂ ಸಿದ್ದು ಕಡೆ ಮುಖ ಮಾಡುವುದಿಲ್ಲ

ಇನ್ನೊಂದು ಘಟನೆಯಲ್ಲಿ, ಇಮ್ರಾನ್ ಖಾನ್ ಅವರಿಗೆ ಸಿದ್ದು ಶಾಲು ಹೊದಿಸುವಾಗ, ಇಮ್ರಾನ್ ಸೌಜನ್ಯಕ್ಕಾದರೂ ಸಿದ್ದು ಕಡೆ ಮುಖ ಮಾಡುವುದಿಲ್ಲ. ಪಕ್ಕದಲ್ಲೇ ಇರುವ ಇತರರತ್ತ ಕೈಬೀಸುತ್ತಾ, ಹಸ್ತಲಾಘವ ಮಾಡುವ ಇಮ್ರಾನ್ ಖಾನ್, ಸಿದ್ದು ಅವರನ್ನು ಕಡೆಗಣಿಸಿರುವುದು ಸ್ಪಷ್ಟವಾಗುತ್ತದೆ. ಇದರಿಂದ ಸಿದ್ದು ಕೊಂಚ ಮುಜುಗರಕ್ಕೀಡಾಗಿರುವುದೂ ಕಾಣುತ್ತದೆ.

ಮಸೂದ್ ಖಾನ್ ಜೊತೆ ಕೂತಿದ್ದೂ, ಸಾಕಷ್ಟು ಟೀಕೆಗೆ ಗುರಿಯಾಗಿದೆ

ಮಸೂದ್ ಖಾನ್ ಜೊತೆ ಕೂತಿದ್ದೂ, ಸಾಕಷ್ಟು ಟೀಕೆಗೆ ಗುರಿಯಾಗಿದೆ

ಇದಲ್ಲದೇ ಸಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗದ ಅಧ್ಯಕ್ಷ ಮಸೂದ್ ಖಾನ್ ಜೊತೆ ಕೂತಿದ್ದೂ, ಸಾಕಷ್ಟು ಟೀಕೆಗೆ ಗುರಿಯಾಗಿದೆ. ವಿದೇಶ ಗಣ್ಯರ ಜೊತೆ ಸಿದ್ದುಗೆ ಆಸನ ವ್ಯವಸ್ಥೆ ಮಾಡುವ ಬದಲು, ಪಾಕಿಸ್ತಾನ ಸರಕಾರ ಮಸೂದ್ ಖಾನ್ ಜೊತೆ ಸೀಟ್ ವ್ಯವಸ್ಥೆ ಮಾಡಿತ್ತು. ಪಾಕ್ ಅಧ್ಯಕ್ಷರ ಐವಾನ್-ಇ-ಸದರ್ ನಿವಾಸದಲ್ಲಿ ಪ್ರಮಾಣವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು. (ಚಿತ್ರ: ಪಿಟಿಐ)

ಇಬ್ಬರು ಸೈನಿಕರು ಹುತಾತ್ಮರಾಗಿದ್ದರು

ಇಬ್ಬರು ಸೈನಿಕರು ಹುತಾತ್ಮರಾಗಿದ್ದರು

ಕೆಲವೇ ತಿಂಗಳ ಹಿಂದೆ ಸಿಖ್ ರೆಜೆಮೆಂಟಿನ ಮೇಜರ್ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದರು, ಪ್ರತೀದಿನ ಜವಾನರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ, ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ. ಸಿದ್ದು ಪಾಕಿಸ್ತಾನಕ್ಕೆ ಹೋಗಿದ್ದು ಅದು ವೈಯಕ್ತಿಕ ವಿಚಾರ, ಅದಕ್ಕೂ ಪಂಜಾಬ್ ಸರಕಾರಕ್ಕಾಗಲಿ, ಕಾಂಗ್ರೆಸ್ ಪಕ್ಷಕ್ಕಾಗಲಿ ಸಂಬಂಧವಿಲ್ಲ - ಪಂಜಾಬ್ ಸಿಎಂ

English summary
Punjab Minsiter and Congress leader Navjot Singh Sidhu hugs Pak Army chief, sits next to PoK head at Imran Khan’s oath ceremony. Instead of seating with other foreign dignitaries, the Pakistan government positioned him next to Masood Khan (PoK President) in Imran Khan’s swearing-in ceremony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X