ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಮ್ರಾನ್ ಪ್ರಧಾನಿಯಲ್ಲ, ಒಬ್ಬ ಚಪ್ರಾಸಿ ಅಷ್ಟೆ : ಸ್ವಾಮಿ ಟೀಕೆ

|
Google Oneindia Kannada News

Recommended Video

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಟೀಕಿಸಿದ ಸುಬ್ರಮಣಿಯನ್ ಸ್ವಾಮಿ | Oneindia Kannada

ನವದೆಹಲಿ, ಅಕ್ಟೋಬರ್ 01 : ಪಾಕಿಸ್ತಾನದ ಪ್ರಧಾನಿ, ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಎನ್ನುವುದಕ್ಕಿಂತ ಒಬ್ಬ ಚಪ್ರಾಸಿ ಎಂದು ಕರೆಯಬಹುದು ಎಂದು ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.

ಇಸ್ಲಾಮಾಬಾದ್ ನಲ್ಲಿ ಈಗ ಮಿಲಿಟರಿ, ಐಎಸ್ ಐ ಮತ್ತು ಭಯೋತ್ಪಾದಕರು ಆಡಳಿತ ನಡೆಸುತ್ತಿದ್ದಾರೆ. ಇವರ ಸಂದೇಶ ವಾಹಕನಾಗಿ ಇಮ್ರಾನ್ ಖಾನ್ ಇದ್ದಾರೆ ಅಷ್ಟೇ ಎಂದು ಸ್ವಾಮಿ ಹೇಳಿದ್ದಾರೆ.

ಇಮ್ರಾನ್ ಗೆ ತಾಲಿಬಾನ್ ಖಾನ್ ಎಂಬ ಅಡ್ಡಹೆಸರು ಏಕೆ? ಇಮ್ರಾನ್ ಗೆ ತಾಲಿಬಾನ್ ಖಾನ್ ಎಂಬ ಅಡ್ಡಹೆಸರು ಏಕೆ?

'ಬಲೂಚಿಗಳಿಗೆ ಪಾಕಿಸ್ತಾನದ ಭಾಗವಾಗೋದು ಇಷ್ಟವಿಲ್ಲ, ಸಿಂಧಿಗಳಿಗೂ ಅಷ್ಟೇ. ಪಶ್ತುನ್ಸ್ ಗಳಿಗೂ ಇಚ್ಛೆ ಇಲ್ಲ. ಆ ನಿಟ್ಟಿನಲ್ಲಿ ಪಾಕಿಸ್ತಾನವನ್ನು ನಾಲ್ಕು ಭಾಗ( ಬಲೂಚ್, ಸಿಂಧ್, ಪಶ್ತುನ್ ಹಾಗೂ ಪಶ್ಚಿಮ ಭಾಗದ ಪಂಜಾಬ್) ವಾಗಿ ಬೇರೆ ಬೇರೆ ಮಾಡುವುದೊಂದೆ ಪಾಕಿಸ್ತಾನಕ್ಕೆ ಇರುವ ಏಕೈಕ ಪರಿಹಾರ' ಎಂದಿದ್ದಾರೆ.

Imran Khan nothing but chaprasi, says Subramanian Swamy

ಇಮ್ರಾನ್ ಖಾನ್ ಪ್ರಧಾನಿ ಆಗಿರುವುದರಿಂದ ಭಾರತ-ಪಾಕ್ ನಡುವೆ ಯುದ್ಧ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಸ್ವಾಮಿ ಅವರು ಅನೇಕ ವೇದಿಕೆಗಳಲ್ಲಿ ಹೇಳಿದ್ದಾರೆ. ತ್ರಿಪುರಾದಲ್ಲಿ ನಡೆದಿರುವ ಸಾಂಸ್ಕೃತಿಕ್ ಗೌರವ ಸಂಸ್ಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಾಮಿ ಅವರು ಪಾಕಿಸ್ತಾನದ ಪ್ರಧಾನಿ ವಿರುದ್ಧ ಕಿಡಿಕಾರಿದರು.

ಕ್ರಿಕೆಟ್, ರಾಜಕೀಯ, ವಿವಾಹ ವಿಚ್ಛೇದನ : ವಿಕ್ಷಿಪ್ತವ್ಯಕ್ತಿ ಇಮ್ರಾನ್ ಖಾನ್ ಕ್ರಿಕೆಟ್, ರಾಜಕೀಯ, ವಿವಾಹ ವಿಚ್ಛೇದನ : ವಿಕ್ಷಿಪ್ತವ್ಯಕ್ತಿ ಇಮ್ರಾನ್ ಖಾನ್

65 ವರ್ಷದ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1996ರಲ್ಲಿ ಪಾಕಿಸ್ತಾನ್-ತೆಹ್ರಿಕ್-ಇ-ಇನ್ಸಾಫ್ ಪಕ್ಷವನ್ನು ಸ್ಥಾಪನೆ ಮಾಡುವ ಮೂಲಕ ಅವರು ರಾಜಕಾರಣ ಬದುಕು ಆರಂಭಿಸಿದ ಮಾಜಿ ಕ್ರಿಕೆಟ್ ನಾಯಕ ಇಮ್ರಾನ್ ಅವರನ್ನು ಪಾಕಿಸ್ತಾನಿ ಮಿಲಿಟರಿಯ ಕೈಗೊಂಬೆ ಎಂದೇ ಕರೆಯಲಾಗುತ್ತದೆ.

English summary
BJP leader Subramanian Swamy spoke about the newly-elected Pakistan PM Imran Khan at an event in Agartala. Swamy said, “Imran Khan is nothing but a ‘chaprasi’ (peon). Pakistan is run by the ISI, military and terrorists. Imran Khan may be called the Prime Minister but he just one of the peons of the Pakistan government.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X