• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಛತ್ತೀಸ್‌ಗಢದಲ್ಲಿ ಪೊಲೀಸರಿಗೆ ಶರಣಾದ 6 ಮಂದಿ ನಕ್ಸಲರು

|

ದಾಂತೇವಾಡ,ಫೆಬ್ರವರಿ 19: ಛತ್ತೀಸ್‌ಗಢದಲ್ಲಿ 6 ಮಂದಿ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ.

ಅದರಲ್ಲಿ ಓರ್ವ ದಂಪತಿ ಕೂಡ ಇದ್ದಾರೆ.ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ಅವರು, 'ಮಾವೊವಾದಿಗಳ ಪೊಳ್ಳು ತತ್ವಗಳಿಂದ ನಿರಾಶೆಗೊಂಡಿದ್ದ ನಕ್ಸಲರು ಇದೀಗ ಶರಣಾಗಿದ್ದಾರೆ. ಪೊಲೀಸರು ಮೊದಲಿನಿಂದಲೂ ನಕ್ಸಲರು ಮರಳಿ ಮನೆಗೆ ಬರಲು ಪ್ರೋತ್ಸಾಹ ನೀಡುತ್ತಿದ್ದರು.

ಪ್ರೇಮಿಗಳ ದಿನದಂದು ಹೊಸ ಬದುಕಿಗೆ ಕಾಲಿಟ್ಟ 15 ಶರಣಾಗತ ನಕ್ಸಲರು: ಸಾಮೂಹಿಕ ವಿವಾಹಪ್ರೇಮಿಗಳ ದಿನದಂದು ಹೊಸ ಬದುಕಿಗೆ ಕಾಲಿಟ್ಟ 15 ಶರಣಾಗತ ನಕ್ಸಲರು: ಸಾಮೂಹಿಕ ವಿವಾಹ

ಇವರು ಕಳೆದ 15 ವರ್ಷಗಳಿಂದ ನಿಷೇಧಿತ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು ಮತ್ತು ಇವರ ಮಾಹಿತಿ ನೀಡಿದವರಿಗೆ ಪೊಲೀಸರು 15 ಲಕ್ಷ ರೂ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು.

ದಾಂತೇವಾಡ ಜಿಲ್ಲೆಯಲ್ಲಿ ಶುಕ್ರವಾರ ಇಬ್ಬರು ದಂಪತಿ ಸಹಿತ ಆರು ಮಂದಿ ನಕ್ಸಲರು ಶರಣಾಗತರಾಗಿದ್ದು, ಶರಣಾಗತ ನಕ್ಸಲರ ಮೇಲೆ ಒಟ್ಟು 15 ಲಕ್ಷ ರೂ ಬಹುಮಾನ ಘೋಷಣೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ ಮಾವೋವಾದಿಗಳ ಇಂದ್ರಾವತಿ ಪ್ರದೇಶ ಸಮಿತಿಯ ಕಮ್ಲು ಅಲಿಯಾಸ್ ಸಂತೋಷ್ ಪೋಡಿಯಮ್ (25 ವರ್ಷ), ಆತನ ಪತ್ನಿ ಪಾಯ್ಕೆ ಕೊವಾಸಿ (22 ವರ್ಷ), ಪೂರೈಕೆ ತಂಡದ ಸದಸ್ಯರಾದ ಲಿಂಗಾ ರಾಮ್ ಯುಕಿ (36 ವರ್ಷ), ಆತನ ಪತ್ನಿ ಭೂಮೆಯುಕಿ (28 ವರ್ಷ), ಕಾಟೆಕೇಲ್ಯನ್‌ ಪ್ರದೇಶ ಸಮಿತಿಯ ಕುಮಾರಿ ಜೋಗಿ (36 ವರ್ಷ), ಚೇತನಾ ನಾಟ್ಯ ಮಂಡಿಯ ಪಾಂಡೆ ಕವಾಸಿ ಶರಣಾದವರೆಂದು ತಿಳಿದುಬಂದಿದೆ.

ಪೊಲೀಸರ 'ಲೋನ್‌ ವರೋತು'(ಮರಳಿ ಮನೆಗೆ) ಅಭಿಯಾನ ನಮ್ಮನ್ನು ಹಿಂಸೆ ತೊರೆಯುವಂತೆ ಪ್ರೇರೇಪಿಸಿದೆ ಎಂದು ಹೇಳಿರುವ ನಕ್ಸಲ್ ಕಾರ್ಯಕರ್ತರು ಸಿಆರ್‌ಪಿಎಫ್ ಅಧಿಕಾರಿಗಳ ಎದುರು ಶರಣರಾಗತರಾದರು ಎಂದು ಹೇಳಿದ್ದಾರೆ.

English summary
Six Naxals, five of them collectively carrying a reward of Rs 15 lakh on their heads, surrendered in Chhattisgarh's Dantewada district on Friday, a police official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X