ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಾರಿಯೂ 'ಸಾಮಾನ್ಯ ಮುಂಗಾರು': ಹವಾಮಾನ ಇಲಾಖೆ

|
Google Oneindia Kannada News

ನವದೆಹಲಿ, ಏಪ್ರಿಲ್ 17: ಈ ಬಾರಿಯ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂದಾಜಿಸಿದೆ. ತನ್ನ ಮೊದಲ ಹಂತದ ಲಾಂಗ್ ರೇಂಜ್ ಫೋರ್‌ಕಾಸ್ಟ್‌ನಲ್ಲಿ (ಎಲ್‌ಆರ್‌ಎಫ್) ಅದು ಈ ಮಾಹಿತಿ ನೀಡಿದೆ.

ಈ ವರದಿ ನಿಖರವಾದರೆ, ದೇಶದಲ್ಲಿ ಸತತ ಮೂರನೇ ವರ್ಷ ಸಾಮಾನ್ಯ ಮುಂಗಾರು ಉಂಟಾಗಲಿದೆ. ನಾಲ್ಕು ತಿಂಗಳ ಕಾಲ ಭಾರತದಲ್ಲಿ ಮಳೆ ಸುರಿಸಲಿರುವ ನೈಋತ್ಯ ಮುಂಗಾರು ತನ್ನ ವಾರ್ಷಿಕ ಸರಾಸರಿ ಮಳೆಯಲ್ಲಿ ಶೇ 70ರಷ್ಟುನ್ನು ಸುರಿಸಲಿದೆ. ಐಎಂಡಿ ವರ್ಷಕ್ಕೆ ಎರಡು ಬಾರಿ, ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ ಎಲ್‌ಆರ್‌ಎಫ್ ಬಿಡುಗಡೆ ಮಾಡುತ್ತದೆ.

 ಏಪ್ರಿಲ್ 17ರವರೆಗೂ ರಾಜ್ಯದ ಹಲವೆಡೆ ಮಳೆ; ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆ ಸೂಚನೆ ಏಪ್ರಿಲ್ 17ರವರೆಗೂ ರಾಜ್ಯದ ಹಲವೆಡೆ ಮಳೆ; ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆ ಸೂಚನೆ

ಜೂನ್‌ನಿಂದ ಸೆಪ್ಟೆಂಬರ್ ಅವಧಿಯ ಪರಿಮಾಣಾತ್ಮಕ ಮಳೆಯು ದೀರ್ಘಾವಧಿ ಸರಾಸರಿಯ (ಎಪಿಎ) ಶೇ 98ರಷ್ಟು ಇರಲಿದೆ. ಇದು 'ಸಾಮಾನ್ಯ ಮಳೆ'ಯ ವರ್ಗಕ್ಕೆ ಬರುತ್ತದೆ ಎಂದು ಐಎಂಡಿ ಪ್ರಧಾನ ನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.

IMD Predicts Normal Monsoon This Year With 70 Percent Of Annual Rainfall

ನೈಋತ್ಯ ಮುಂಗಾರು ಅವಧಿಯ ಎಲ್‌ಪಿಎಯನ್ನು 1961-2010ರವರೆಗಿನ 50 ವರ್ಷಕ್ಕೂ ಹೆಚ್ಚಿನ ಸಮಯದಿಂದ ಸರಾಸರಿ 880 ಮಿಮೀ ಮಳೆಯಲ್ಲಿ ಲೆಕ್ಕಾಚಾರ ಮಾಡಲಾಗಿದೆ.

ದೇಶಾದ್ಯಂತ ಒಟ್ಟಾರೆ ಮಳೆ ಸಾಮಾನ್ಯವಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಜಮ್ಮು ಮತ್ತು ಕಾಶ್ಮೀರ, ಲಡಾಖ್, ದೆಹಲಿ, ಪೂರ್ವ ಉತ್ತರ ಪ್ರದೇಶ ಮತ್ತು ಅದರ ಸುತ್ತಲಿನ ಬಿಹಾರ, ಜಾರ್ಖಂಡ್, ಒಡಿಶಾದ ಒತ್ತರ ಭಾಗಗಳು, ಛತ್ತೀಸಗಡ ಮತ್ತು ಪಶ್ಚಿಮ ಬಂಗಾಳದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.

English summary
IMD has predicted the third straight year normal monsoon, about 70 percent of annual rainfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X