ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಾರಿ ಸಾಮಾನ್ಯ ಮುಂಗಾರು, ರೈತರಿಗೆ ಸಂತಸ ತಂದ ಮುನ್ಸೂಚನೆ

|
Google Oneindia Kannada News

ನವದೆಹಲಿ, ಏಪ್ರಿಲ್ 15 : ಈ ಬಾರಿಯ ಮುಂಗಾರಿನಲ್ಲಿ ಸಾಮಾನ್ಯದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮೇ ತಿಂಗಳ ಅಂತ್ಯಕ್ಕೆ ಭಾರತದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆ ಇದೆ.

ಭಾರತೀಯ ಹವಾಮಾನ ಇಲಾಖೆ 2019ನೇ ಸಾಲಿನ ಮುಂಗಾರಿನ ಬಗ್ಗೆ ವಿವರಣೆ ನೀಡಿದೆ. ಈ ಬಾರಿಯ ಮುಂಗಾರಿನಲ್ಲಿ ಸಾಮಾನ್ಯ ಮಳೆಯಾಗಲಿದ್ದು, ನೈಋತ್ಯ ಮಾನ್ಸೂನ್ ಮಾರುತಗಳಿಂದಲೂ ಸಾಮಾನ್ಯ ಮಳೆಯಾಗಲಿದೆ ಎಂದು ಹೇಳಿದೆ.

ದಟ್ಟ ಕಾನನಕ್ಕೆ ಉಲ್ಲಾಸ ತುಂಬುವಂಥ ಮಳೆಗೆ ಬೆಂದ ಬೆಂಗಳೂರು ಕೂಡ ಕಾಯುತ್ತಿದೆದಟ್ಟ ಕಾನನಕ್ಕೆ ಉಲ್ಲಾಸ ತುಂಬುವಂಥ ಮಳೆಗೆ ಬೆಂದ ಬೆಂಗಳೂರು ಕೂಡ ಕಾಯುತ್ತಿದೆ

ಮುಂಗಾರು ಮಾರುತಗಳು ದೇಶದ ಮಳೆಗೆ ಶೇ 70ರಷ್ಟು ಕೊಡುಗೆ ನೀಡುತ್ತವೆ. ಈ ಬಾರಿ ಮೇ ಅಂತ್ಯದಲ್ಲಿಯೆ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆ ಇದೆ. ದೇಶದ ಎಲ್ಲಾ ಪ್ರದೇಶಗಳಲ್ಲೂ ಸಾಮಾನ್ಯ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಬಂಡೀಪುರಕ್ಕೆ ಕೃಪೆ ತೋರಿದ ವರುಣ: ನಿಟ್ಟುಸಿರುಬಿಟ್ಟ ಜೀವಸಂಕುಲಬಂಡೀಪುರಕ್ಕೆ ಕೃಪೆ ತೋರಿದ ವರುಣ: ನಿಟ್ಟುಸಿರುಬಿಟ್ಟ ಜೀವಸಂಕುಲ

IMD predicts normal monsoon in 2019

ಕಳೆದ ಕೆಲವು ವರ್ಷಗಳಿಂದ ಎಲ್‌ ನಿನೋ ಮಾರುತಗಳು ಮುಂಗಾರಿಗೆ ಅಡ್ಡಿ ಮಾಡುತ್ತಿತ್ತು. ಫೆಸಿಫಿಕ್ ಸಾಗರದಲ್ಲಿ ಎಲ್‌ ನಿನೋ ಮಾರುತಗಳು ರಚನೆಯಾಗಲಿದ್ದು, ಆ ಬಾರಿಯ ಮುಂಗಾರಿಗೆ ಅವು ಅಡ್ಡಿಪಡಿಸುವ ಸಾಧ್ಯತೆ ಕಡಿಮೆ ಇದೆ ಎಂದು ಅಂದಾಜಿಸಲಾಗಿದೆ.

ಹವಾಮಾನ ವೈಪರೀತ್ಯ: 2018ರಲ್ಲಿ 1,425ಕ್ಕೂ ಹೆಚ್ಚು ಬಲಿಹವಾಮಾನ ವೈಪರೀತ್ಯ: 2018ರಲ್ಲಿ 1,425ಕ್ಕೂ ಹೆಚ್ಚು ಬಲಿ

ಭೂ ವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವ್ ನಾಯರ್ ಅವರು, 'ಎಲ್‌ ನಿನೋ ಮಾರುತಗಳು ಮುಂಗಾರಿನ ಮೇಲೆ ಪ್ರಭಾವ ಬೀರುವ ಕುರಿತು ಐಎಂಡಿ ಯಾವುದೇ ಮುನ್ಸೂಚನೆ ನೀಡಿಲ್ಲ' ಎಂದು ಹೇಳಿದ್ದಾರೆ.

ಹವಾಮಾನ ಮನ್ಸೂಚನೆ ನೀಡುವ ಖಾಸಗಿ ಸಂಸ್ಥೆ ಸ್ಕೈ ಮ್ಯಾಟ್ ಈ ಬಾರಿಯ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹೇಳಿತ್ತು. ಶೇ 93ರಷ್ಟು ಮಳೆಯಾಗಲಿದೆ ಎಂದು ಹೇಳಿತ್ತು. ಹವಾಮಾನ ಇಲಾಖೆ ಶೇ 96ರಷ್ಟು ಮಳೆಯಾಗಲಿದೆ ಎಂದು ಸೋಮವಾರ ಹೇಳಿದೆ.

ಈ ಬಾರಿ ಎಲ್‌ ನಿನೋ ಮಾರುತಗಳು ಶಕ್ತಿಶಾಲಿಯಾದರೆ ಆಸ್ಟ್ರೇಲಿಯಾ, ದಕ್ಷಿಣ ಏಷ್ಯಾ, ಅಮೆರಿಕದ ಕೆಲವು ಭಾಗ, ಬ್ರೆಜಿಲ್ ದೇಶದಲ್ಲಿ ಬರದ ಪರಿಸ್ಥಿತಿ ಉಂಟಾಗಲಿದೆ ಎಂದು ಸ್ಕೈ ಮ್ಯಾಟ್ ಹೇಳಿದೆ.

2018ರ ಮುಂಗಾರಿನಲ್ಲಿ ದೇಶದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿತ್ತು. ಕೇರಳದಲ್ಲಿ ಪ್ರವಾಹದಿಂದಾಗಿ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಮಳೆಯ ಜೊತೆ ಭೂ ಕುಸಿತ ಉಂಟಾಗಿ ಜನರು ಮನೆ. ಆಸ್ತಿ ಕಳೆದುಕೊಂಡಿದ್ದರು.

English summary
India Meteorological Department (IMD) predicted that monsoons will be normal in 2019. The south-west monsoon makes its onset over India around May end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X