ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ, ದೆಹಲಿಯಲ್ಲಿ ಮುಂಗಾರು ಚುರುಕು ಪ್ರವಾಹದಂಥಾ ಮಳೆ

|
Google Oneindia Kannada News

ನವದೆಹಲಿ, ಜುಲೈ 21: ಮುಂಬೈ ಹಾಗೂ ದೆಹಲಿಯಲ್ಲಿ ಮುಂಗಾರು ಚುರುಕಾಗಿದೆ. ಕಳೆದ ಒಂದು ವಾರದಿಂದ ವಿಪರೀತ ಮಳೆಯಾಗುತ್ತಿದ್ದು ಪ್ರವಾಹದಂಥಾ ಪರಿಸ್ಥಿತಿ ನಿರ್ಮಾಣವಾಗಿದೆ.

ಜುಲೈ 21 ರಿಂದ 23ರವರೆಗೆ ಮುಂಬೈನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎನ್ನಲಾಗಿದೆ. ಬುಧವಾರದಿಂದ ಶುಕ್ರವಾರದವರೆಗೂ ಭಾರಿ ಮಳೆಯಾಗಲಿದೆ.

ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 100 ಮಿ.ಮೀ ಮಳೆ ಸುರಿದಿದೆ. ಮುಂಗಾರು ಆರಂಭವಾದ ಬಳಿಕ ಮೊದಲ ದೊಡ್ಡ ಮಳೆ ಇದು ಎನ್ನಲಾಗಿದೆ.

ಚೀನಾದಲ್ಲಿ ಪ್ರವಾಹ : ಮೆಟ್ರೋ ಸುರಂಗಕ್ಕೆ ನೀರು ನುಗ್ಗಿ 12 ಮಂದಿ ಸಾವುಚೀನಾದಲ್ಲಿ ಪ್ರವಾಹ : ಮೆಟ್ರೋ ಸುರಂಗಕ್ಕೆ ನೀರು ನುಗ್ಗಿ 12 ಮಂದಿ ಸಾವು

ಮಳೆಯಿಂದಾಗಿ ರೈಲ್ವೇ ಹಳಿಗಳು ಸಹ ಮುಳುಗಡೆಯಾಗಿವೆ. ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ಬಸ್‌ಗಳ ಮಾರ್ಗ ಬದಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಲವೆಡೆ ಭೂಕುಸಿತ ಉಂಟಾಗಿದ್ದು, ಹಲವು ಕಾರುಗಳು ಸಿಲುಕಿಕೊಂಡಿವೆ.

ಗುರುಗ್ರಾಮದಲ್ಲೂ ಮಳೆ

ಗುರುಗ್ರಾಮದಲ್ಲೂ ಮಳೆ

ದೆಹಲಿ, ಗುರುಗ್ರಾಮ, ನೋಯ್ಡಾದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಘುತ್ತಿದೆ. ಮುಂದಿನ ಒಂದು ವಾರಗಳ ಕಾಲ ಹೀಗೆ ಮಳೆ ಮುಂದುವರೆಯುವ ಸಾಧ್ಯತೆ ಇದೆ. 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 25 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ದೆಹಲಿ ಎನ್‌ಸಿಆರ್, ಬಹದ್ದೂರ್‌ಗಢ, ಗುರುಗ್ರಾಮ, ಮಾಣೆಸರ್, ಫರೀದಾಬಾದ್, ಭಲ್ಲಭಗಢ, ಲೋನಿ, ಘಾಜಿಯಾಬಾದ್, ದಾದ್ರಿಯಲ್ಲಿ ಮುಂದಿನ ಒಣದೆರೆಡು ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಲಾಗಿದೆ. ಹರ್ಯಾಣದಲ್ಲಿ ಆಂಬಿಯನ್ಸ್ ಮಾಲ್ ಕುಸಿದುಬಿದ್ದಿರುವ ಘಟನೆ ನಡೆದಿದೆ.

 ಕೂಲೆಸ್ಟ್‌ ಜುಲೈ

ಕೂಲೆಸ್ಟ್‌ ಜುಲೈ

ಕಳೆದ 7 ವರ್ಷಗಳಲ್ಲೇ ಇದು ಅತಿ ಕೂಲೆಸ್ಟ್‌ ಜುಲೈ ಎಂದು ಹೇಳಲಾಗಿದೆ. ಸಫ್ತರ್‌ಜಂಗ್‌ನಲ್ಲಿ 69.6 ಮಿ.ಮೀ ಮಳೆಯಾಗಿದೆ. ಪಲಂನಲ್ಲಿ 66.6 ಮಿ.ಮೀ, ನರೇಲಾ 104 ಮಿ.ಮೀ ಮಳೆಯಾಗಿತ್ತು. 26.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

 ಯೆಲ್ಲೋ ಅಲರ್ಟ್ ಘೋಷಣೆ

ಯೆಲ್ಲೋ ಅಲರ್ಟ್ ಘೋಷಣೆ

ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಪ್ರವಾಹಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಿದರು. ಭಾರೀ ಮಳೆಯ ನಂತರ ಭಾರತ ಹವಾಮಾನ ಇಲಾಖೆ (ಐಎಂಡಿ) ಮುಂಬೈಗೆ ಯೆಲ್ಲೋ​ ಅಲರ್ಟ್​ ಘೋಷಿಸಿದೆ. ಇಲಾಖೆ ಕೆಲವು ಸ್ಥಳಗಳಲ್ಲಿ "ಅತಿ ಹೆಚ್ಚು" ಮಳೆಯಾಗುವ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನಗಳಲ್ಲಿ ಮುಂಬೈನಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಭಾರೀ ಮಳೆಯಾಗಿರುವುದರಿಂದ ಮುಂಬೈಗೆ ನೀರು ಪೂರೈಸುವ ಪ್ರಮುಖ ತಾಣಗಳಲ್ಲಿ ಒಂದಾದ ಭಂಡಪ್ ನೀರು ಶುದ್ಧೀಕರಣ ಸಂಕೀರ್ಣವನ್ನು ನಿಲ್ಲಿಸಿರುವುದರಿಂದ ಕುಡಿಯುವ ನೀರನ್ನು ಕುದಿಸಿ ಕುಡಿಯುವಂತೆ ಬಿಎಂಸಿ ನಾಗರಿಕರಿಗೆ ತಿಳಿಸಿದೆ.

 ರೈಲ್ವೆ ಹಳಿಗಳಲ್ಲಿ ನಿಂತ ನೀರು

ರೈಲ್ವೆ ಹಳಿಗಳಲ್ಲಿ ನಿಂತ ನೀರು

ಮಳೆಯಿಂದಾಗಿ ರೈಲ್ವೇ ಹಳಿಗಳು ಸಹ ಮುಳುಗಡೆಯಾಗಿವೆ. ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ಬಸ್‌ಗಳ ಮಾರ್ಗ ಬದಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Recommended Video

Manish Pandey ಅವರ ಟೈಮ್ ಯಾಕೋ ಸರಿ ಇಲ್ಲ | Oneindia Kannada
 ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ಭಾರಿ ಮಳೆಯು ಮಹಾನಗರದ ಹಲವಾರು ಪ್ರದೇಶಗಳ ಜಲಾವೃತಕ್ಕೆ ಕಾರಣವಾಯಿತು. ಚುನಭಟ್ಟಿ, ಸಿಯಾನ್, ದಾದರ್, ಮತ್ತು ಗಾಂಧಿ ಮಾರುಕಟ್ಟೆ, ಚೆಂಬೂರು ಮತ್ತು ಕುರ್ಲಾ ಎಲ್ಬಿಎಸ್ ರಸ್ತೆ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ನೀರು ನುಗ್ಗಿದೆ.

2019 ರಲ್ಲಿ ನಗರವು ಜುಲೈ 2 ರಂದು 375.2 ಮಿ.ಮೀ ದಾಖಲಿಸಿದ್ದು, 2010 ರಿಂದ ಜುಲೈನಲ್ಲಿ ಅತಿ ಹೆಚ್ಚು 24 ಗಂಟೆಗಳ ಮಳೆಯಾಗಿದೆ.

English summary
Indian Meteorological Department predicted that Heavy To Very Heavy Rains In Mumbai And Delhi Next 2 Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X