ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಭಾರತದಾದ್ಯಂತ ಇನ್ನೊಂದು ದಿನದೊಳಗೆ ಉಷ್ಣಗಾಳಿ ತಗ್ಗುವ ಸಾಧ್ಯತೆ

|
Google Oneindia Kannada News

ನವದೆಹಲಿ, ಮೇ 28: ಉತ್ತರಭಾರತದಾದ್ಯಂತ ಕಳೆದ ಒಂದುವಾರದಿಂದ ಜನರಿಗೆ ಬೆಂಕಿಯಂತೆ ಎರಗುತ್ತಿರುವ ಬಿಸಿಗಾಳಿಯು ಇನ್ನೊಂದು ದಿನದೊಳಗೆ ಕಡಿಮೆ ಆಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಭಾರತ ಹಾಗೂ ಮಧ್ಯಭಾರತದ ಕೆಲವೆಡೆ ಗರಿಷ್ಠ ಉಷ್ಣಾಂಶ 47 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಚುರುವಿನಲ್ಲಿ ಗರಿಷ್ಠ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು ಅದು ಇದೀಗ 49.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ. ಗಂಗಾನಗರ, ಬಿಕಾನೇರ್, ರಾಜಸ್ಥಾನದಲ್ಲಿ , 48.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಿದೆ.

ತೆಲಂಗಾಣಕ್ಕೆ ನೀಡಿದ್ದ ಉಷ್ಣಗಾಳಿ ಎಚ್ಚರಿಕೆ ಹಿಂಪಡೆದ ಹವಾಮಾನ ಇಲಾಖೆತೆಲಂಗಾಣಕ್ಕೆ ನೀಡಿದ್ದ ಉಷ್ಣಗಾಳಿ ಎಚ್ಚರಿಕೆ ಹಿಂಪಡೆದ ಹವಾಮಾನ ಇಲಾಖೆ

ಪಂಜಾಬ್‌ನ ಬಟಿಂಡಾದಲ್ಲಿ 47.5 ಡಿಗ್ರಿ ಸೆಲ್ಸಿಯಸ್, ದೆಹಲಿಯಲ್ಲಿ 47.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

IMD Predicts Heatwave Likely To Recede From May 28 In North India

ಮೇ 28-29 ರಂದು ದೇಶದ ವಿವಿಧೆಡೆ ಮಳೆಯಾಗುವ ನಿರೀಕ್ಷೆ ಇರುವುದರಿಂದ ಗರಿಷ್ಠ ಉಷ್ಣಾಂಶವೂ ಕೂಡ ತಗ್ಗುವ ಸಾಧ್ಯತೆ ಇದೆ. ಮೆಡಿಟರೇನಿಯನ್ ಸಮುದ್ರದ ಬಳಿ ಚಂಡಮಾರುತ ಆರಂಭವಾಗುವ ನಿರೀಕ್ಷೆ ಇದೆ. ಬಂಗಾಳಕೊಲ್ಲಿ, ಅಂಡಮಾನ್ ,ನಿಕೋಬಾರ್ ದ್ವೀಪಗಳಲ್ಲಿ ಮಳೆಯಾಗಲಿದೆ.

ತೆಲಂಗಾಣಕ್ಕೆ ನೀಡಿದ್ದ ಉಷ್ಣಗಾಳಿ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಹಿಂಪಡೆದಿದೆ.ಮುಂದಿನ 48 ಗಂಟೆಗಳಲ್ಲಿ ತೆಲಂಗಾಣಕ್ಕೆ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ ಇದೀಗ ಕಡಿಮೆ ತಾಪಮಾನದಲ್ಲಿ ಟ್ರಫ್(ವಾತಾವರಣದಲ್ಲಿ ಗಾಳಿಯ ಚಲನೆಯಿಂದ ಉಂಟಾಗುವ ಪರಿಣಾಮ)

ರಾಜಸ್ಥಾನ ವಿಶ್ವದ ಹಾಟೆಸ್ಟ್‌ ಸಿಟಿ: ಎಲ್ಲೆಲ್ಲಿ ಗರಿಷ್ಠ ಉಷ್ಣಾಂಶ ಎಷ್ಟಿದೆ?ರಾಜಸ್ಥಾನ ವಿಶ್ವದ ಹಾಟೆಸ್ಟ್‌ ಸಿಟಿ: ಎಲ್ಲೆಲ್ಲಿ ಗರಿಷ್ಠ ಉಷ್ಣಾಂಶ ಎಷ್ಟಿದೆ?

ನಿರ್ಮಾಣವಾಗುತ್ತಿದೆ. ಆದರೆ ಟ್ರಫ್ ನಿರ್ಮಾಣವಾಗಲು ಒಂದೆರೆಡು ದಿನಗಳು ಬೇಕು ಎಂದು ಮಹೇಶ್ ಪಲಾವಟ್ ಹೇಳಿದ್ದಾರೆ.

ಮೇ 30 ಹಾಗೂ 31ರಂದು ಬಿರುಗಾಳಿ, ಗುಡುಗು ಸಹಿತ ಬಾರಿ ಮಳೆಯಾಗಲಿದೆ.ಈಗಾಗಲೇ ನಗರದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ. ನಗರದಲ್ಲಿ ಕನಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಸಾಮಾನ್ಯ ಉಷ್ಣಾಂಶಕ್ಕಿಂತ ನಾಲ್ಕೈದು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ. 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಸಾಮಾನ್ಯವಾಗಿ ಆಗಸ್ಟ್ ತಿಂಗಳಿನಲ್ಲಿರುತ್ತದೆ.

English summary
The maximum temperatures are likely to recede from Thursday in north India, which is reeling under a severe heatwave, the India Meteorological Department said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X