ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಹೆಚ್ಚು ಬಿಸಿಲು ಹಾಗೂ ಹೆಚ್ಚು ತಂಪಾದ ಐದು ಪ್ರದೇಶಗಳಿವು...

|
Google Oneindia Kannada News

ನವದೆಹಲಿ, ಜೂನ್ 23: ಒಳ್ಳೆ ಹವಾಮಾನಕ್ಕೆ ಭಾರತ ಹೆಸರುವಾಸಿ. ಇದೀಗ ಮುಂಗಾರು ಪ್ರವೇಶದ ನಂತರ ಬಿರುಸು ಮಳೆಯಾಗಿ ದೇಶದ ಕೆಲವು ಭಾಗಗಳಲ್ಲಿ ಬಿಸಿಲು ಕೂಡ ಕಾಣಿಸಿಕೊಳ್ಳುತ್ತಿದೆ.

ಭಾರತದಲ್ಲಿ ಸಾಮಾನ್ಯವಾಗಿ ಮಾರ್ಚ್‌ನಿಂದ ಬೇಸಿಗೆ ಆರಂಭವಾಗಿ ಸೆಪ್ಟೆಂಬರ್‌ವರೆಗೂ ಬಿಸಿಲು ಮುಂದುವರೆಯುತ್ತದೆ. ಈ ಸಮಯದಲ್ಲಿ ವಿದ್ಯುತ್ ಕಡಿತ, ನೀರಿನ ಅಭಾವದಿಂದ ಸೆಕೆ ಅನುಭವ ಇನ್ನಷ್ಟು ಹೆಚ್ಚಾಗಿಯೇ ಆಗುತ್ತದೆ. ಭಾರತೀಯ ಹವಾಮಾನ ಇಲಾಖೆ ಐದು ಅತಿ ಹೆಚ್ಚು ಉಷ್ಣಾಂಶ ದಾಖಲಾದ ಹಾಗೂ ಕನಿಷ್ಠ ಉಷ್ಣಾಂಶ ದಾಖಲಾದ ಪ್ರದೇಶಗಳನ್ನು ಪಟ್ಟಿ ಮಾಡಿದೆ.

ರಾಜ್ಯದಲ್ಲಿ ಕ್ಷೀಣಿಸಿದ ಮುಂಗಾರು; ಜಲಾಶಯಗಳ ನೀರಿನ ಮಟ್ಟ ಹೀಗಿದೆ...ರಾಜ್ಯದಲ್ಲಿ ಕ್ಷೀಣಿಸಿದ ಮುಂಗಾರು; ಜಲಾಶಯಗಳ ನೀರಿನ ಮಟ್ಟ ಹೀಗಿದೆ...

ರಾಜಸ್ಥಾನದ ಚುರು ನಗರದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಇಲ್ಲಿ ಗರಿಷ್ಠ ಉಷ್ಣಾಂಶ 42.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜಸ್ಥಾನದ ಪಿಳನಿಯಲ್ಲಿ ಕೂಡ ಹೆಚ್ಚಿನ ಬಿಸಿಲಿದ್ದು, 41.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಸವಾಯ್ ಮಾಧೊಪುರದಲ್ಲಿ 41.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಹಾಗೂ ಅಲ್ವಾರ್‌ನಲ್ಲಿ 41.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

IMD Lists 5 Hottest And Coldest Places In India

ಉತ್ತರ ಪ್ರದೇಶದ ಆಗ್ರಾ ಕೂಡ ಗರಿಷ್ಠ ತಾಪಮಾನ ದಾಖಲಾದ ಪ್ರದೇಶಗಳಲ್ಲಿ ಐದನೇ ಸ್ಥಾನದಲ್ಲಿದೆ. ಇಲ್ಲಿ 41.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಅತಿ ಹೆಚ್ಚು ತಂಪಾದ ಪ್ರದೇಶಗಳಲ್ಲಿ ಲೇಹ್ ಲಡಾಖ್, ಒಂದಾಗಿದೆ. ಇಲ್ಲಿ ಕನಿಷ್ಠ 6.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಜಮ್ಮು ಹಾಗೂ ಕಾಶ್ಮೀರದ ಪಹಲ್ಗಾಂನಲ್ಲಿ ಕನಿಷ್ಠ ತಾಪಮಾನ 7.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

IMD Lists 5 Hottest And Coldest Places In India

ಜಮ್ಮು ಹಾಗೂ ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ 9.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಹಾಗೂ ಕುಪ್ವಾರದಲ್ಲಿ 11.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹಿಮಾಚಲ ಪ್ರದೇಶದ ಕಲ್ಪಾದಲ್ಲಿ 11.6 ಕನಿಷ್ಠ ತಾಪಮಾನವಿದೆ.

English summary
According to the India Meteorological Department (IMD), these places are the hottest on June 23
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X