ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಮತ್ತೆ ಹೆಚ್ಚಾಯ್ತು ರಣಬಿಸಿಲು : ಆರೆಂಜ್ ಅಲರ್ಟ್‌ ಘೋಷಣೆ

|
Google Oneindia Kannada News

ದೆಹಲಿ, ಜೂನ್ 6: ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ದೆಹಲಿಗೆ ಇತ್ತೀಚೆಗೆ ಸುರಿದ ಮಳೆ ಕೊಂಚ ತಂಪೆರೆದಿತ್ತು. ಇದೀಗ ರಾಷ್ಟ್ರರಾಜಧಾನಿಯಲ್ಲಿ ಮತ್ತೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದೆ.

ಭಾನುವಾರ ದೆಹಲಿಯಲ್ಲಿ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ನಿಂದ 47 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಾಗಿದೆ. ಈ ನಡುವೆ, ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

Heatwave in India : ದೇಶದಲ್ಲಿ ತಾಪಮಾನ ಹೆಚ್ಚಳ, 5 ರಾಜ್ಯಗಳಿಗೆ ಅರೆಂಜ್ ಅಲರ್ಟ್‌ ಘೋಷಿಸಿದ ಐಎಂಡಿHeatwave in India : ದೇಶದಲ್ಲಿ ತಾಪಮಾನ ಹೆಚ್ಚಳ, 5 ರಾಜ್ಯಗಳಿಗೆ ಅರೆಂಜ್ ಅಲರ್ಟ್‌ ಘೋಷಿಸಿದ ಐಎಂಡಿ

ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶಗಳಲ್ಲಿ ತೀವ್ರ ಶಾಖದ ಅಲೆಗಾಗಿ 'ಆರೆಂಜ್ ಅಲರ್ಟ್‌' ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ತಿಳಿಸಿದೆ. ಹವಾಮಾನ ಇಲಾಖೆ ಈಗಾಗಲೇ ದೆಹಲಿಯಲ್ಲಿ 'ಹಳದಿ ಅಲರ್ಟ್' ಘೋಷಿಸಿತ್ತು.

IMD Issues Orange Alert over Severe heatwave in Delhi, Punjab and Other States

ದೆಹಲಿಯಲ್ಲಿ ಆರೆಂಜ್ ಅಲರ್ಟ್. ಹರಿಯಾಣ, ಪಂಜಾಬ್, ದೆಹಲಿ, ಯುಪಿ ಮತ್ತು ಮಧ್ಯಪ್ರದೇಶ, ರಾಜಸ್ಥಾನದ ಕೆಲವು ಭಾಗಗಳಲ್ಲಿ ಜೂನ್ 4 ರಿಂದ ತೀವ್ರ ಶಾಖದ ಅಲೆ ಉಂಟಾಗುವ ಸಾಧ್ಯತೆ ಇದೆ. ಇನ್ನೂ ನಾಲ್ಕು ದಿನಗಳವರೆಗೆ 44 ಡಿಗ್ರಿ ಸೆಲ್ಸಿಯಸ್‌ನಿಂದ 47 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಮುಂದುವರಿಯುತ್ತದೆ. ಶಾಖದ ಪ್ರಮಾಣ ತುಂಬಾ ತೀವ್ರವಾಗಿರುವುದರಿಂದ ಜನರು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಲಾಗಿದೆ"ಎಂದು ಐಎಂಡಿ ಹಿರಿಯ ವಿಜ್ಞಾನಿ ರಾಜೇಂದ್ರ ಕುಮಾರ್ ಜೆನಮಣಿ ಹೇಳಿದ್ದಾರೆ.

ದೆಹಲಿ ಸೇರಿದಂತೆ ಇತರ ರಾಜ್ಯಗಳ ಹವಾಮಾನ ಪರಿಸ್ಥಿತಿ ತಿಳಿಯಿರಿದೆಹಲಿ ಸೇರಿದಂತೆ ಇತರ ರಾಜ್ಯಗಳ ಹವಾಮಾನ ಪರಿಸ್ಥಿತಿ ತಿಳಿಯಿರಿ

ಉತ್ತರ ಭಾರತದಲ್ಲಿ ಇನ್ನೂ ಮುಂಗಾರು ಪ್ರಾರಂಭವಾಗಿಲ್ಲ, ನಾವು ಈ ಕುರಿತು ಅಧ್ಯಯನ ನಡೆಸುತ್ತಿದ್ದೇವೆ, ದೆಹಲಿಗೆ ಮುಂಗಾರು ಪ್ರಾರಂಭಿಸಲು ಇನ್ನೂ ಸಮಯ ಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಜೂನ್ 10ರವರೆಗೆ ರಣಬಿಸಿಲು

ಮಳೆಯಿಂದ ಕೊಂಚ ಚೇತರಿಕೆ ಕಂಡಿದ್ದ ದೆಹಲಿ ಜನತೆಗೆ ಕಳೆದ ಎರಡು ದಿನಗಳಿಂದ ಮತ್ತೆ ರಣಬಿಸಿಲಿನ ದರ್ಶನವಾಗಿದೆ. ಭಾನುವಾರ ದೆಹಲಿಯಲ್ಲಿ 44.8 ಡಿಗ್ರಿಗಿಂತ ಹೆಚ್ಚಿನ ತಾಪಮಾನ ದಾಖಲಾದರೆ, ಅಕ್ಷರಧಾಮದ ಕ್ರೀಡಾ ಸಂಕೀರ್ಣದಲ್ಲಿ 46.6 ಡಿಗ್ರಿ ಸೆಲ್ಸಿಯಸ್, ನಜಫ್‌ಗಢ 46.3, ಪಿತಾಂಪುರ 46.2, ರಿಡ್ಜ್‌ 45.7 ಮತ್ತು ಜಾಫರ್ ಪುರದಲ್ಲಿ 45.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಜೂನ್ 10 ರವರೆಗೆ ತಾಪಮಾನ ಕಡಿಯಾಗುವ ಸಾಧ್ಯತೆಯಿಲ್ಲ ಎಂದು ಐಎಂಡಿ ಹೇಳಿದೆ, ನಂತರ ದೆಹಲಿಯಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

IMD Issues Orange Alert over Severe heatwave in Delhi, Punjab and Other States

ಮಂಗಳವಾರದಿಂದ ಈಶಾನ್ಯ ಮತ್ತು ದಕ್ಷಿಣ ಪರ್ಯಾಯ ದ್ವೀಪದಲ್ಲಿ ಮಳೆಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. "ಈಶಾನ್ಯ ಭಾಗಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದೆ" ಎಂದು ಜೆನಮಣಿ ಹೇಳಿದ್ದಾರೆ.

"ಮುಂದಿನ ಐದು ದಿನಗಳಲ್ಲಿ ಈಶಾನ್ಯ ಭಾರತ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ" ಎಂದು ಐಎಂಡಿ ಹಿಂದಿನ ಟ್ವೀಟ್‌ನಲ್ಲಿ ತಿಳಿಸಿದೆ.

ಸತತವಾಗಿ ಎರಡು ದಿನಗಳ ಕಾಲ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಅಥವಾ ಸಾಮಾನ್ಯ ತಾಪಮಾನಕ್ಕಿಂತ 4.5 ಡಿಗ್ರಿಗಳಷ್ಟು ಹೆಚ್ಚಾಗಿದ್ದರೆ ಅದನ್ನು ಬಿಸಿ ಗಾಳಿ ಎಂದು ಘೋಷಿಸಲಾಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Indian Meterologcial Department Issues Orange Alert over Severe heatwave in Delhi, Punjab and Other States days after rain bringing relief in capital city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X