ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಹವಾಮಾನ ಇಲಾಖೆಯಿಂದ ಪಾಕಿಸ್ತಾನ ಹವಾಮಾನ ವರದಿ

|
Google Oneindia Kannada News

ನವದೆಹಲಿ, ಮೇ 7: ಭಾರತೀಯ ಹವಾಮಾನ ಇಲಾಖೆಯು ಈಗ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳದ ಹವಾಮಾನ ವರದಿಯನ್ನೂ ಕೂಡ ನೀಡಲಿದೆ.

ರಾಷ್ಟ್ರೀಯ ಬುಲೆಟಿನ್‌ ಅಲ್ಲಿ ಬೇರೆ ದೇಶಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಕಳೆದ ಎರಡು ದಿನಗಳಿಂದ ಆ ಪ್ರದೇಶಗಳನ್ನು ಮಾನಿಟರ್ ಮಾಡಲು ಆರಂಭಿಸಿದ್ದೇವೆ ಎಂದು ಐಎಂಡಿ ಡಿಜಿ ಎಂ ಮೋಹಪಾತ್ರ ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯು ಜಮ್ಮು ಮತ್ತು ಕಾಶ್ಮೀರ, ಲಡಾಖ್ ಹವಾಮಾನ ವರದಿಯನ್ನೂ ನೀಡಲಿದೆ. ಅದರ ಜೊತೆಗೆ ಗಿಲ್ಗಿಟ್, ಬಲೂಚಿಸ್ತಾನ್, ಮುರಾದಾಬಾದ್ ಪ್ರದೇಶಗಳ ಮಾಹಿತಿಯೂ ಲಭ್ಯವಾಗಲಿದೆ.

IMD Has Been Issuing Severe Weather Forecast For Pakistan

ಸುಮಾರು ವರ್ಷಗಳ ಬಳಿಕ ಐಎಂಡಿ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳದ ವರದಿಯನ್ನು ನೀಡಲು ಮುಂದಾಗಿದೆ.

ಭಾರತೀಯ ಹವಾಮಾನ ಇಲಾಖೆಯಿಂದ ಪಿಒಕೆ ಭಾಗದ ವರದಿ ಬೇಡ ಎಂದ ಪಾಕಿಸ್ತಾನಭಾರತೀಯ ಹವಾಮಾನ ಇಲಾಖೆಯಿಂದ ಪಿಒಕೆ ಭಾಗದ ವರದಿ ಬೇಡ ಎಂದ ಪಾಕಿಸ್ತಾನ

ಅಷ್ಟೇ ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದ ಹವಾಮಾನ ವರದಿಯೂ ಲಭ್ಯವಾಗಲಿದೆ. ಐಎಂಡಿ ವಾಯುವ್ಯ ಕಾಶ್ಮೀರದಲ್ಲಿ 9 ವಿಭಾಗಗಳಿವೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲಪ್ರದೇಶ, ಉತ್ತರಾಖಂಡ್, ದೆಹಲಿ-ಚಂಡೀಗಢ,-ಹರ್ಯಾಣ,ಪಂಜಾಬ್ , ಪೂರ್ವ ಉತ್ತರ ಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ಪೂರ್ವ ರಾಜಸ್ಥಾನ, ಪಶ್ಚಿಮ ರಾಜಸ್ಥಾನ ಹೀಗೆ ಒಂಬತ್ತು ವಿಭಾಗಗಳನ್ನಾಗಿ ಮಾಡಲಾಗಿದೆ.

ಮುಂದಿನ ಐದು ದಿನಗಳಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಮಾಲ್ಡೀವ್ಸ್, ಶ್ರೀಲಂಕಾ, ಥೈಲೆಂಡ್, ಮಯನ್ಮಾರ್, ನೇಪಾಳ, ಭೂತಾನ್ ಕುರಿತು ಹವಾಮಾನ ವರದಿ ಲಭ್ಯವಾಗಲಿದೆ.

English summary
For a long time, IMD has been issuing severe weather forecast for Pakistan, Afghanistan, Bangladesh, Nepal etc. We were mentioning this information in our national bulletin. For past 2 days,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X