ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಾರಿಯ ಮುಂಗಾರು ಹೇಗಿರುತ್ತೆ? ಹವಾಮಾನ ಇಲಾಖೆ ಹೇಳುವುದೇನು

|
Google Oneindia Kannada News

ನವದೆಹಲಿ, ಏಪ್ರಿಲ್ 15: ಈ ಬಾರಿಯ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ನೈಋತ್ಯ ಮುಂಗಾರು ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಇರಲಿದ್ದು, 95/104% ರಷ್ಟಿರಲಿದೆ ಎಂದು ಹೇಳಿದೆ. ಇದು ಮುಂಗಾರಿನ ಮೊದಲ ಹಂತದ ಮಾಹಿತಿಯಾಗಿದೆ.

ಜೂನ್‌ನಿಂದ ಸೆಪ್ಟೆಂಬರ್ ವರೆಗೆ ದೀರ್ಘಕಾಲದ ಮುಂಗಾರು ಸರಾಸರಿ ಶೇ.100 ರಷ್ಟು ಇರಲಿದೆ. ಈ ಅವಧಿಯಲ್ಲಿ 1961ರಿಂದ 2010ರವರೆಗೆ 83 ಸೆಂ.ಮೀಯಷ್ಟು ಮಳೆಯಾಗಿತ್ತು.ಜೂನ್ ಮೊದಲ ವಾರದಲ್ಲಿ ಮತ್ತೊಂದು ಹಂತದ ಮಾಹಿತಿ ಲಭ್ಯವಾಗಲಿದ್ದು, ಸಂಪೂರ್ಣ ಮಾಹಿತಿ ಸಿಗಲಿದೆ.

IMD Forecats Monsoon Rainfall To Be Normal This Year

ಸಮುದ್ರದ ಮೇಲ್ಮೈ ಉಷ್ಣಾಂಶವು ಪೆಸಿಫಿಕ್ ಹಾಗೂ ಇಂಡಿಯನ್ ಮಹಾಸಾಗರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಸೂಚಿಸುತ್ತಿದೆ. ಮೇ ಕೊನೆಯ ವಾರದಲ್ಲಿ ಮೊದಲ ವರದಿ ಜೂನ್ ಮೊದಲ ವಾರದಲ್ಲಿ ಎರಡನೇ ವರದಿಯನ್ನು ಹವಾಮಾನ ಇಲಾಖೆ ಒದಗಿಸಲಿದೆ.

ಭಾರತದ ಮಾನ್ಸೂನ್ ವಾಯುಗುಣದ ಮುನ್ಸೂಚನೆ ನೀಡಲು ಪರಿಗಣಿಸಲಾಗಿರುವ 16 ಅಂಶಗಳಲ್ಲಿ ಎಲ್ ನಿನೋ ಪ್ರಭಾವವನ್ನು ಪ್ರಧಾನವಾಗಿ ಗಮನಿಸಲಾಗುತ್ತಿದೆ.
ಭಾರತದಲ್ಲಿ ಮಾನ್ಸೂನ್ ಮಾರುತಗಳ ಆಗಮನ, ಮಳೆಯ ಪ್ರಮಾಣ, ಬರಗಾಲ ಮೊದಲಾದವುಗಳಿಗೆ ಸಮೀಕರಿಸಿ ವಿವರಿಸಲಾಗುತ್ತಿದೆ.

ಎಲ್ ನಿನೋ (ElNiNo) ಎಂದರೆ ' ಮಗು ಕ್ರಿಸ್ತ ' (Baby Christ) ಎಂದರ್ಥ. ಇದು ಸ್ಪಾನಿಷ್ ಭಾಷೆಯಿಂದ ಬಳಕೆಗೆ ಬಂದಿದೆ. ದಕ್ಷಿಣ ಅಮೆರಿಕದ ಪಶ್ಚಿಮ ತೀರದಲ್ಲಿ ಸಾಮಾನ್ಯವಾಗಿ ಪೆರು ದೇಶದ ಪಶ್ಚಿಮ ತೀರದಲ್ಲಿ ಕ್ರಿಸ್ ಮಸ್ ಅವಧಿಯಲ್ಲಿ ಕಾಣಿಸಿಕೊಳ್ಳುವ ಉಷ್ಣೋದಕ ಪ್ರವಾಹವನ್ನು ಈ ಎಲ್ ನಿನೋ ಹೆಸರಿನಿಂದ ಕರೆಯಲಾಗಿದೆ. ಇದನ್ನು ಸುಮಾರು ಕ್ರಿ.ಶ 1567ರಲ್ಲಿ ಮೊದಲು ಗಮನಿಸಲಾಯಿತು.

ಫೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ ನೀರಿನ ಎತ್ತರ ಹೆಚ್ಚಾಗಿದ್ದು, ಈ ಹೆಚ್ಚುಉಷ್ಣಾಂಶದ ನೀರು ಪೂರ್ವದ ಕಡೆಗೆ ನಾಲಿಗೆಯಂತೆ ಚಾಚಿ ಮುಂದುವರಿಯುವುದು. ಈ ಹೆಚ್ಚು ನೀರಿನ ಉಷ್ಣಾಂಶದ ನೀರು ಪೂರ್ವದ ಕಡೆಗೆ ಮುಂದುವರಿದಂತೆ 'ಥರ್ಮೋಕ್ಲೈನ್' (Thermocline) ನ ಆಳವು ಸಹ ಹೆಚ್ಚುವುದು.

ಇದಕ್ಕಿಂತ ಕೆಳಭಾಗದಲ್ಲಿ ಸಾಗರದ ನೀರಿನ ಉಷ್ಣಾಂಶವು ಅತಿ ಕಡಿಮೆ. ಥರ್ಮೋಕ್ಲೈನ್ ಹೆಚ್ಚು ಆಳದಲ್ಲಿರುವುದರಿಂದ ಹೆಚ್ಚು ಉಷ್ಣಾಂಶ ಹಾಗೂ ಕೆಳಭಾಗದ ಕಡಿಮೆ ಉಷ್ಣಾಂಶದ ನೀರಿನ ಮಿಶ್ರಣವು ಕಡಿಮೆಯಿದ್ದು, ಹೆಚ್ಚು ಉಷ್ಣಾಂಶದ ಅಗಾಧ ಪ್ರಮಾಣದ ನೀರು ಪೂರ್ವದ ಕಡೆಗೆ ಹರಿಯುವುದು. ಇದೇ ಎಲ್ ನಿನೋ.

English summary
The India Meteorological Department (IMD) today announced that it expects monsoon rainfall to be normal this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X