ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ಸಿಬ್ಬಂದಿಗೆ ಹೆಚ್ಚುವರಿ ಕೋವಿಡ್ ಲಸಿಕೆ ನೀಡುವಂತೆ ಐಎಂಎ ಒತ್ತಾಯ

|
Google Oneindia Kannada News

ನವದೆಹಲಿ, ಡಿಸೆಂಬರ್ 06: ಕೊರೊನಾವೈರಸ್‌ನ ಹೊಸ ರೂಪಾಂತರಿ ಓಮಿಕ್ರಾನ್ ಆತಂಕ ಮತ್ತಷ್ಟು ಹೆಚ್ಚಿಸಿದೆ.

ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರಿಗೆ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೆ ಕೋವಿಡ್ ಲಸಿಕೆಯ ಹೆಚ್ಚುವರಿ ಡೋಸ್‌ಗಳನ್ನು ಘೋಷಿಸುವಂತೆ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಸೋಮವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಜಗತ್ತಿನಲ್ಲಿ ಓಮಿಕ್ರಾನ್ ಪತ್ತೆಯಾದ ರಾಷ್ಟ್ರಗಳ ಪಟ್ಟಿ: ಭಾರತಕ್ಕೆ ಎಷ್ಟನೇ ಸ್ಥಾನ?ಜಗತ್ತಿನಲ್ಲಿ ಓಮಿಕ್ರಾನ್ ಪತ್ತೆಯಾದ ರಾಷ್ಟ್ರಗಳ ಪಟ್ಟಿ: ಭಾರತಕ್ಕೆ ಎಷ್ಟನೇ ಸ್ಥಾನ?

ಈ ಮಧ್ಯೆ ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಯಾಗಿದೆ. 12 ರಿಂದ 18 ವರ್ಷ ವಯಸ್ಸಿನವರಿಗೆ ಕೋವಿಡ್ ಲಸಿಕೆ ಹಾಕುವ ಪ್ರಸ್ತಾವನೆಯನ್ನು ಸರ್ಕಾರ ತ್ವರಿತಗೊಳಿಸಬೇಕು ಎಂದು ಒತ್ತಾಯಿಸಿರುವ ಐಎಂಎ, ಕೊರೋನಾ ವೈರಸ್‌ನ ಇತ್ತೀಚಿನ ರೂಪಾಂತರಿ ಪ್ರಕರಣಗಳು ಭಾರತದ ಹಲವಾರು ಪ್ರಮುಖ ರಾಜ್ಯಗಳಿಂದ ವರದಿಯಾಗಿವೆ ಮತ್ತು ಅವುಗಳ ಸಂಖ್ಯೆಯು ಹೆಚ್ಚಾಗಲಿದೆ ಎಂದು ವೈದ್ಯರ ಸಂಘ ಹೇಳಿದೆ.

IMA Urges Additional Covid-19 Vaccine Doses For Healthcare, Frontline Workers

ಲಭ್ಯವಿರುವ ವೈಜ್ಞಾನಿಕ ಪುರಾವೆಗಳು ಮತ್ತು ಹೊಸ ರೂಪಾಂತರಿ ಪತ್ತೆಯಾಗಿರುವ ದೇಶದ ಅನುಭವದ ಪ್ರಕಾರ, ಓಮಿಕ್ರಾನ್ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ ಮತ್ತು ಹೆಚ್ಚಿನ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಐಎಂಎ ಹೇಳಿದೆ.

ಕೊರೊನಾ ವೈರಸ್​ನ ಎರಡನೇ ಅಲೆಯಿಂದ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದ ಭಾರತ ಇದೀಗ ಚೇತರಿಸಿಕೊಂಡಿದೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರಿ ಸೋಂಕು ಓಮಿಕ್ರಾನ್​​ ಭಯ ಶುರುವಾಗಿದ್ದು, ದೇಶದಲ್ಲಿ ಈಗಾಗಲೇ 23 ಪ್ರಕರಣ ದಾಖಲಾಗಿವೆ.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​ ಮುಖ್ಯಸ್ಥ ಡಾ. ಜೆಎ ಜಯಲಾಲ್​ ಮಾತನಾಡಿ, ಹೊಸ ರೂಪಾಂತರಿಯಿಂದಲೇ ಭಾರತದಲ್ಲಿ ಕೋವಿಡ್​​​ 3ನೇ ಅಲೆ ಲಗ್ಗೆ ಹಾಕಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಓಮಿಕ್ರಾನ್​​ನಿಂದ ಪಾಶ್ಚಿಮಾತ್ಯ ದೇಶಗಳು ಈಗಾಗಲೇ ತೊಂದರೆ ಅನುಭವಿಸುತ್ತಿದ್ದು, ನಮ್ಮ ದೇಶದಲ್ಲೂ ದಿನದಿಂದ ದಿನಕ್ಕೆ ಹೆಚ್ಚಿನ ಸೋಂಕು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ, ಅದರ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿವೆ. ಇದೀಗ ಜನರು ಇದರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ದೇಶದಲ್ಲಿ ಲಸಿಕೆ​​ ನೀಡುವ ಪ್ರಕ್ರಿಯೆ ಮತ್ತಷ್ಟು ವೇಗಗೊಳಿಸಬೇಕು ಎಂದಿರುವ ಅವರು, ಕೋವಿಡ್​​-19 ಎಲ್ಲ ವೈರಸ್​​ಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಅದಕ್ಕೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಓಮಿಕ್ರಾನ್​​ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಸಾಮೂಹಿಕ ಸಮಾರಂಭ ಹಾಗೂ ಅನಗತ್ಯ ಪ್ರವಾಸದ ಮೇಲೆ ಕಡಿವಾಣ ಹಾಕುವಂತೆ ಡಾ. ಜಯಲಾಲ್ ಸಲಹೆ ನೀಡಿದ್ದಾರೆ.

ಹೊಸ ರೂಪಾಂತರ ಮಕ್ಕಳಲ್ಲಿ ಹೆಚ್ಚಿನ ಅಪಾಯವನ್ನುಂಟು ಮಾಡುವ ಕಾರಣ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅದಷ್ಟು ಬೇಗ ಕೋವಿಡ್​-19 ಲಸಿಕೆ ನೀಡುವ ಬಗ್ಗೆ ಕೇಂದ್ರ ನಿರ್ಧಾರ ಕೈಗೊಳ್ಳಬೇಕು ಎಂದರು.

ಭಾರತದಲ್ಲಿ ಈಗಾಗಲೇ 23 ಓಮಿಕ್ರಾನ್​ ಪ್ರಕರಣ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಕರಣ ದಾಖಲಾಗುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಕೋವಿಡ್​​-19ರ ಡೆಲ್ಟಾ ರೂಪಾಂತರಕ್ಕಿಂತಲೂ ಓಮಿಕ್ರಾನ್​ ವೇಗವಾಗಿ ಹರಡಲಿದೆ ಎಂಬ ಎಚ್ಚರಿಕೆ ನೀಡಿದರು.

Recommended Video

ವಿಭಿನ್ನವಾಗಿ ಶ್ರದ್ಧಾಂಜಲಿ ಹೇಳಿದ ವಾರ್ನರ್ | Oneindia Kannada

English summary
The Indian Medical Association (IMA) on Monday urged the government to announce "additional" doses of Covid vaccine for healthcare, frontline workers and immunocompromised individuals amid concerns over the Omicron variant of coronavirus, 21 cases of which been detected in India so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X