ವೈದ್ಯರ ಮುಷ್ಕರ, ಮಂಗಳವಾರ ದೇಶಾದ್ಯಂತ 'ಒಪಿಡಿ' ಬಂದ್

Subscribe to Oneindia Kannada

ನವದೆಹಲಿ, ಜನವರಿ 1: ಭಾರತೀಯ ವೈದ್ಯಕೀಯ ಸಂಘ (ಐಎಂಎ) ದೇಶಾದ್ಯಂತ ಮಂಗಳವಾರ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದೆ. ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್ಎಂಸಿ) ಮಸೂದೆ ವಿರೋಧಿಸಿ ಈ ಬಂದ್ ಗೆ ಕರೆ ನೀಡಿದೆ.

ಹುಬ್ಬಳ್ಳಿಯಲ್ಲಿ ವೈದ್ಯರ ಮುಷ್ಕರ, ನಾಳೆ ಒಪಿಡಿ ಬಂದ್

ಇದಕ್ಕೂ ಮೊದಲು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, 'ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ'ದ ಬದಲು ಬೇರೆ ಸಂಸ್ಥೆ ಸ್ಥಾಪಿಸಲು ಈ ಮಸೂದೆ ಮಂಡಿಸಲಾಗುತ್ತಿದೆ. ಇದರಿಂದ ಹಲವು ಸಮಸ್ಯೆಗಳು ಎದುರಾಗಲಿವೆ ಎಂದಿದ್ದರು. ಈ ಮಸೂದೆಯನ್ನು ಸಂಸತ್ ಸ್ಥಾನೀಯ ಸಮಿತಿಗೆ ವರ್ಗಾಯಿಸುವಂತೆ ಅವರು ಆಗ್ರಹಿಸಿದ್ದಾರೆ.

IMA to call for one-day strike against National Medical Commission bill tomorrow

'ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ'ದ ಬದಲು ಪಾರದರ್ಶಕತೆಗಾಗಿ ಬೇರೆಯದೇ ಸಂಸ್ಥೆಯನ್ನು ತೆರೆಯಲು ಕೇಂದ್ರ ಸರಕಾರ ಕೆಲವು ದಿನಗಳ ಹಿಂದೆ ಲೋಕಸಭೆಯಲ್ಲಿ ಈ ಮಸೂದೆ ಮಂಡಿಸಿದೆ. ಈ ಮಸೂದೆ ಪ್ರಕಾರ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ ವೈದ್ಯರು ತಾವು ವೃತ್ತಿ ಆರಂಭಿಸುವ ಮೊದಲು 'ಬ್ರಿಡ್ಜ್ ಕೋರ್ಸ್' ಮಾಡಬೇಕಾಗಿದೆ.

ಈ ಮಸೂದೆ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲಿದೆ ಎಂದುಕೊಳ್ಳಲಾಗಿದೆ. ಈಗಾಗಲೇ ವೈದ್ಯಕೀಯ ಶಿಕ್ಷಣ ಕ್ಷೇತ್ರ ಭ್ರಷ್ಟಾಚಾರ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂಬ ದೂರಿನ ನಡುವೆ ಈ ಮಸೂದೆಯನ್ನು ಮಂಡಿಸಲಾಗಿದೆ.

ಆದರೆ ಇದು ವೈದ್ಯರ ಕಣ್ಣು ಕೆಂಪಗಾಗಿಸಿದ್ದು ಮಂಗಳವಾರ ಅಂದರೆ ಜನವರಿ 2ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರಗೆ ದೇಶದ ಎಲ್ಲಾ ಹೊರ ರೋಗಿ ವಿಭಾಗಗಳನ್ನು ಬಂದ್ ಮಾಡಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ನಿರ್ಧರಿಸಿದೆ. ಇದರಿಂದ ದೇಶದಾದ್ಯಂತ ರೋಗಿಗಳು ಅಗತ್ಯ ಚಿಕಿತ್ಸೆಗಾಗಿ ಪರದಾಡಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian Medical Association (IMA) has called for a one-day strike against National Medical Commission (NMC) bill on Tuesday.Earlier Congress leader Jairam Ramesh said, the bill that seeks to replace the apex medical education regulator, the Medical Council of India (MCI), with a new body, has "many problematic" provisions and demanded that the bill be referred to a parliamentary standing committee.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ