ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ್‌ದೇವ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್

|
Google Oneindia Kannada News

ನವದೆಹಲಿ, ಮೇ 23: ಅಲೋಪತಿ ವೈದ್ಯಕೀಯ ಪದ್ದತಿಯ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ ಆರೋಪದ ಹಿನ್ನೆಲೆಯಲ್ಲಿ ಯೋಗಗುರು ಬಾಬಾ ರಾಮ್‌ದೇವ್‌ಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ರಾಮ್‌ದೇವ್ ಮಾತನಾಡಿದ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಇದರಲ್ಲಿ ಅಲೋಪತಿ ಮತ್ತು ವೈಜ್ಞಾನಿಕ ವೈದ್ಯಕೀಯ ಪದ್ದತಿಗೆ ಅವಮಾನಕರ ಮಾತುಗಳನ್ನು ಆಡಿದ್ದಾರೆ ಎಂದು ಲೀಗಲ್ ನೋಟಿಸ್ ಕಳುಹಿಸಲಾಗಿದೆ.

ವೈರಲ್ ಆದ ವಿಡಿಯೋದಲ್ಲಿ ಬಾಬಾ ರಾಮ್‌ದೇವ್ ಅಲೋಪತಿ ಚಿಕಿತ್ಸೆಯನ್ನು 'ಮೂರ್ಖತನದ ವಿಜ್ಞಾನ' ಎಂದು ಜರಿದಿದ್ದರು. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದಿಸಿದ ರೆಮ್‌ಡಿಸಿವಿರ್, ಫೆವಿಫ್ಲೂ ಮತ್ತು ಇತರ ಔಷಧಿಗಳು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ವಿಫಲವಾಗಿವೆ ಎಂಬ ಮಾತುಗಳು ಈ ವಿಡಿಯೋದಲ್ಲಿದೆ. ಇದಕ್ಕೂ ಮುನ್ನ ರಾಮ್‌ದೇವ್ ಆಧುನಿಕ ವೈದ್ಯಕೀಯ ಸಿಬ್ಬಂದಿಗಳನ್ನು "ಕೊಲೆಗಾರರು" ಎಂಬ ಹೇಳಿಕೆಯನ್ನು ನೀಡಿದ್ದರು.

ಭಯಪಡಬೇಡಿ, ವೈಟ್ ಫಂಗಸ್ ಎಂಬ ಸೋಂಕೇ ಇಲ್ಲ ಎಂದ ವೈದ್ಯರುಭಯಪಡಬೇಡಿ, ವೈಟ್ ಫಂಗಸ್ ಎಂಬ ಸೋಂಕೇ ಇಲ್ಲ ಎಂದ ವೈದ್ಯರು

ಈ ಹೇಳಿಕೆಗಳು ಭಾರತದಲ್ಲಿ ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು. ಐಎಂಎ ಜೊತೆಗೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ವೈದ್ಯರ ಸಂಘಗಳು, ಸಫ್ದರ್ಜಂಗ್ ಆಸ್ಪತ್ರೆಯ ಆರ್‌ಡಿಎ ಮತ್ತು ಇತರ ವೈದ್ಯಕೀಯ ಸಂಸ್ಥೆಗಳು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಲ್ಲಿ ರಾಮ್‌ದೇವ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿನಂತಿಸಿವೆ. ಕೊರೊನಾ ವೈರಸ್ ವಿರುದ್ಧದ ಚಿಕಿತ್ಸೆಯ ಸಂದರ್ಭದಲ್ಲಿ ರಾಮ್‌ದೇವ್ ಸಾರ್ವಜನಿಕರ ಹಾದಿ ತಪ್ಪಿಸುತ್ತಾರೆ ಎಂದು ರಾಮ್‌ದೇವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವರಲ್ಲಿ ಮನವಿಯನ್ನು ಮಾಡಲಾಗಿದೆ.

 IMA Sends Legal Notice to Ramdev on statement against Allopathy in Viral Video

ಆದರೆ ಅಲೋಪತಿ ಹಾಗೂ ವೈಜ್ಞಾನಿಕ ವೈದ್ಯಕೀಯ ಪದ್ದತಿ ವಿರುದ್ಧ ರಾಮ್‌ದೇವ್ ಮಾತುಗಳನ್ನಾಡಿದ್ದಾರೆ ಎಂಬ ಆರೋಪಗಳನ್ನು ಪತಂಜಲಿ ಯೋಗಪೀಠ ಟ್ರಸ್ಟ್ ನಿರಾಕರಿಸಿದೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಹಗಲು ರಾತ್ರಿ ಶ್ರಮಿಸುತ್ತಿರುವ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿಗಳ ಬಗ್ಗೆ ಅಪಾರವಾದ ಗೌರವ ಹೊಂದಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ಈ ಮಧ್ಯೆ ನಿಕಿತಾ ಪನ್‌ವಾರ್ ಎಂಬ ವೈದ್ಯಕೀಯ ವಿದ್ಯಾರ್ಥಿನಿ ಟ್ವಿಟ್ಟರ್‌ನಲ್ಲಿ "ನನಗೆ 24 ವರ್ಷ, ಐಸಿಯುನಲ್ಲಿ ಕಾರ್ಯನಿರ್ವಹಿಸುತ್ತಿದ್ದು ನಿತ್ಯವೂ 80-10 ಹೊಸ ಬ್ಲ್ಯಾಕ್ ಫಂಗಸ್ ಪ್ರಕರಣಗಳು, ವೈರಸ್ ಪ್ರಕರಣಗಳ ಒತ್ತಡಗಳೊಂದಿಗೆ ನಮ್ಮ ಜೀವವನ್ನು ರೋಗಿಗಳ ಚಿಕಿತ್ಸೆಗೆ ನಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದೇವೆ. ಹೀಗಿರುವಾಗ ರಾಮ್‌ದೇವ್ ಅವರಂತವರ ಹೇಳಿಕೆಗಳು ನಮ್ಮನ್ನು ಸಾಕಷ್ಟು ದುರ್ಬಲರನ್ನಾಗಿಸುತ್ತದೆ. ನಾವು ನಿಮ್ಮ ರೀತಿ ಹಣಕ್ಕಾಗಿ ಕೆಲಸ ಮಾಡುತ್ತಿಲ್ಲ ಬಾಬಾ. ತಿಂಗಳಿಗೆ ಕೇವಲ 12 ಸಾವಿರಕ್ಕೆ ದುಡಿಯುತ್ತಿದ್ದೇವೆ. ನಾಚಿಕೆಯಾಗಬೇಕು ನಿಮಗೆ" ಎಂದು ಟ್ವೀಟ್ ಮಾಡಿರುವುದು ಸಾಕಷ್ಟು ವೈರಲ್ ಆಗಿದೆ. #ArrestQuackRamdev ಹ್ಯಾಶ್‌ಟ್ಯಾಗ್‌ ಮೂಲಕ ರಾಮ್‌ದೇವ್ ಬಂಧನಕ್ಕೆ ಸಾಕಷ್ಟು ಜನರು ಆಗ್ರಹಿಸುತ್ತಿದ್ದಾರೆ.

English summary
IMA Sends Legal Notice to Ramdev on statement against Allopathy in Viral Video; Patanjali reject Allegations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X