ರಾಮ್ ರಹೀಮ್ ಸಿಂಗ್ ಆಶ್ರಮ ನೋಡಿ ಬೆಚ್ಚಿಬಿದ್ದ ಪೊಲೀಸರು

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಚಂಡೀಗಢ, ಸೆಪ್ಟೆಂಬರ್ 11 : ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಮ್ ರಹೀಮ್ ಸಿಂಗ್ ಆಶ್ರಮ ನೋಡಿ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಬಾಬಾ ಆಶ್ರಮದಲ್ಲಿ ರಹಸ್ಯ ಸುರಂಗ, ಎಕೆ 47 ಬಂದೂಕಿನ ಗುಂಡುಗಳು ಪತ್ತೆಯಾಗಿವೆ.

ರಾಮ್ ರಹೀಮ್ ಕಾಮ ಗುಹೆಯಿಂದ ಹೊರಬರುತ್ತಿರುವ ನಿಗೂಢ ರಹಸ್ಯಗಳು

ರಹಸ್ಯ ಸುರಂಗ, ಅಕ್ರಮವಾದ ಪಟಾಕಿ ಕಾರ್ಖನೆ, ಎಕೆ 47 ಬಂದೂಕಿನ ಗುಂಡು ಮುಂತಾದವು ರಾಮ್ ರಹೀಮ್ ಸಿಂಗ್ ಡೇರಾ ಸಚ್ಚಾಸೌಧ ಆಶ್ರಮದಲ್ಲಿ ಪತ್ತೆಯಾಗಿವೆ. ಆಶ್ರಮದಲ್ಲಿರುವ ಆಸ್ಪತ್ರೆಯಲ್ಲಿ ಸತ್ತ ವ್ಯಕ್ತಿಗಳ ಕುರಿತು ಸರಿಯಾದ ದಾಖಲೆಗಳನ್ನು ಇಟ್ಟಿಲ್ಲ.

Illegal firecracker factory see what cops found at Dera Sacha Sauda HQ

ಯಾವುದೇ ಅನುಮತಿಯನ್ನು ಪಡೆಯದೇ ಆಶ್ರಮದಲ್ಲಿ ಚರ್ಮ ಬ್ಯಾಂಕ್ ಆರಂಭಿಸಿರುವುದು ಬೆಳಕಿಗೆ ಬಂದಿದೆ. ಆಸ್ಪತ್ರೆ ನಿರ್ಮಾಣ ಮಾಡುವಾಗಲೂ ರಾಮ್ ರಹೀಮ್ ಸಿಂಗ್ ಯಾವುದೇ ಕಾನೂನು ಪಾಲಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಬಾಬಾ ರಾಮ್ ರಹೀಮ್ ಸಿಂಗ್ ಜೈಲು ಸೇರಿದ ಬಳಿಕ ಆಶ್ರಮದಲ್ಲಿ ಹುಡುಕಾಟವನ್ನು ನಡೆಸಲಾಗುತ್ತಿದೆ. ಆಶ್ರಮದ ಕಾರ್ಯಕರ್ತರಿಗೆ ಎಲ್ಲಿಗೂ ತೆರಳದಂತೆ ನಿರ್ಬಂಧವಿದ್ದು, ಸಾಮಾನ್ಯ ಜನರ ಓಡಾಟಕ್ಕೆ ಅನುಕೂಲ ಒದಗಿಸಲಾಗಿದೆ.

ನ್ಯಾಯಾಲಯದ ಆದೇಶ ಅನ್ವಯ ಸೆಪ್ಟೆಂಬರ್ 8 ರಿಂದ 10ರ ತನಕ ಆಶ್ರಮದಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಶ್ರಮದ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ್ದು, ಅನುಮತಿ ಇಲ್ಲದೆ ಚರ್ಮ ಬ್ಯಾಂಕ್ ಆರಂಭಿಸಿರುವುದು ಆಗ ಬೆಳಕಿಗೆ ಬಂದಿದೆ.

ಪೊಲೀಸರು ಎರಡು ರಹಸ್ಯ ಸುರಂಗ ಮಾರ್ಗವನ್ನು ಆಶ್ರಮದಲ್ಲಿ ಪತ್ತೆ ಹಚ್ಚಿದ್ದಾರೆ. ಅದರಲ್ಲಿ ಒಂದು ಸುರಂಗ ರಾಮ್ ರಹೀಮ್ ಸಿಂಗ್ ಮನೆಯಿಂದ ಮಹಿಳಾ ವಸತಿ ಗೃಹಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಮತ್ತೊಂದು ಅಕ್ರಮವಾಗಿ ನಿರ್ಮಾಣ ಮಾಡಿದ್ದ ಪಟಾಕಿ ಕಾರ್ಖನೆಗೆ ಸಂಪರ್ಕಿಸುತ್ತಿತ್ತು.

ಕಂಪ್ಯೂಟರ್ ಹಾರ್ಡ್ ಡಿಸ್ಕ್, ಲಕ್ಸುರಿ ಕಾರು, 7 ಸಾವಿರ ನಿಷೇಧಿತ ನೋಟು, 12 ಸಾವಿರ ನಗದು, ವಾಕಿಟಾಕಿ ಮುಂತಾದವುಗಳನ್ನು ಆಶ್ರಮದಿಂದ ವಶಕ್ಕೆ ಪಡೆಯಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Secret tunnels, an empty box of AK-47 cartridges and an illegal firecracker factory were some of the things found during the search operation at the Dera Sacha Sauda headquarters.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ