ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಆಸ್ತಿ ಗಳಿಕೆ : ಚಿದಂಬರಂ ಪುತ್ರ ಕಾರ್ತಿ ಜನ್ಮ ಜಾಲಾಡಿದ 'ಇಡಿ'

By Mahesh
|
Google Oneindia Kannada News

ನವದೆಹಲಿ, ಮಾ. 02: ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿದ್ದು, ತನಿಖಾ ತಂಡಗಳು ಅವ್ಯವಹಾರಗಳ ಕಂತೆಯನ್ನು ಬಿಚ್ಚಿಟ್ಟಿವೆ. ಕಾರ್ತಿ ಪ್ರಕರಣ ಸಂಸತ್ತಿನ ಸಮಯವನ್ನು ಹಾಳುಗೆಡವಿದೆ. ಕಾರ್ತಿ ಅವ್ಯವಹಾರ ವಿವರ ಮುಂದಿದೆ.

ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯ ತನಿಖಾ ತಂದ ಹೊರ ಹಾಕಿರುವ ಇತ್ತೀಚಿನ ಮಾಹಿತಿ ಪ್ರಕಾರ, ಕಾರ್ತಿ ಚಿದಂಬರಂ ಅವರು ವಿದೇಶಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿದ್ದಾರೆ.

Illegal Assets Case:Enforcement Directorate, IT Department exposes Karthi Chidambaram

ಇಂಗ್ಲೆಂಡ್, ಅಮೆರಿಕ, ದಕ್ಷಿಣ ಆಫ್ರಿಕಾ,ಯುಎಸ್ಎ, ಫಿಲಿಪೈನ್ಸ್, ಶ್ರೀಲಂಕಾ, ಫ್ರಾನ್ಸ್, ಸ್ಪೇನ್ ಸೇರಿ 14 ದೇಶಗಳಲ್ಲಿ ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದಾರೆ. [ಪಿ ಚಿದಂಬರಂ ಪುತ್ರ ಕಾರ್ತಿ ಕಚೇರಿ ಮೇಲೆ 'ಇಡಿ' ದಾಳಿ][

ಏರ್​ಸೆಲ್- ಮ್ಯಾಕ್ಸಿಸ್ ಡೀಲ್ ಸಂಬಂಧಿಸಿದಂತೆ ತಮಿಳುನಾಡಿನಲ್ಲಿರುವ ಕಾರ್ತಿಯ ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯ ಹಾಗೂ 2ಜಿ ಹಗರಣ ತನಿಖಾ ತಂಡದ ಅಧಿಕಾರಿಗಳು ದಾಳಿ ನಡೆಸಿದಾಗ ಈ ಮಾಹಿತಿ ಸಿಕ್ಕಿದೆ. ಲಂಡನ್, ಸಿಂಗಾಪುರ, ದುಬೈ ಮುಂತಾದ ನಗರಗಳಲ್ಲಿನ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕಾರ್ತಿ ಹೂಡಿಕೆ ಮಾಡಿದ್ದಾರೆ.

ಏರ್​ಸೆಲ್- ಮ್ಯಾಕ್ಸಿಸ್ ಡೀಲ್ ನಿರ್ವಹಿಸಿದ್ದ ಕಾರ್ತಿಯ ಕಂಪನಿಯೂ ಅವ್ಯವಹಾರದಲ್ಲಿ ಭಾಗಿಯಾಗಿದೆ. 14 ದೇಶಗಳ ತನಿಖಾ ಏಜೆನ್ಸಿಗಳ ನೆರವು ಪಡೆದು ಇನ್ನಷ್ಟೂ ಮಾಹಿತಿ ಸಂಗ್ರಹಿಸಲು ಜಾರಿ ನಿರ್ದೇಶನಾಲಯ ಮುಂದಾಗಿದೆ. ಅಲ್ಲದೆ, 2ಜಿ ಪ್ರಕರಣ ಕುರಿತ ವಿಶೇಷ ಕೋರ್ಟ್ ಈ ಬಗ್ಗೆ ಸಿಂಗಪುರಕ್ಕೆ ಪತ್ರ ಬರೆದಿದ್ದು, 2006 ರಿಂದ 2014ರ ನಡುವಿನ ಕಾರ್ತಿ ವಹಿವಾಟು ಕುರಿತು ಮಾಹಿತಿ ಕೋರಿದೆ.

English summary
Illegal Assets Case: The Enforcement Directorate (ED) and investigation wing of the Income Tax Department found found Former Union minister P Chidambaram's son Karthi has made investments in real estate assets and other businesses in many countries; AIADMK raises the issue in Rajya Sabha forcing adjournment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X