ಐಐಟಿ ಕೋರ್ಸ್ ಶುಲ್ಕ 2 ಲಕ್ಷ ರು ತನಕ ಏರಿಕೆ!

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 7: ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳಲ್ಲಿನ (ಐಐಟಿ) ಪದವಿಪೂರ್ವ ಕೋರ್ಸ್​ಗಳ ವಾರ್ಷಿಕ ಶುಲ್ಕವನ್ನು ಏರಿಸಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಪರಿಷ್ಕೃತ ದರ ಪಟ್ಟಿ ಜಾರಿಗೊಳ್ಳಲಿದೆ. ಇದು ಎಲ್ಲಾ 23 ಕೇಂದ್ರಗಳಲ್ಲಿ ಪದವಿ ಪೂರ್ವ ಕೋರ್ಸ್ ಗಳಿಗೆ ಅನ್ವಯವಾಗಲಿದೆ ಎಂದು ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿದೆ.

ಐಐಟಿ ವಾರ್ಷಿಕ ಶುಲ್ಕವನ್ನು 90,000 ರೂಪಾಯಿಗಳಿಂದ 2 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.
ಐಐಟಿಗಳ ಶುಲ್ಕವನ್ನು ಮೂರುಪಟ್ಟು ಏರಿಸುವ ಪ್ರಸ್ತಾಪಕ್ಕೆ ಕಳೆದ ತಿಂಗಳಲ್ಲೇ ಐಐಟಿ ಸಮಿತಿ ಸಮ್ಮತಿ ನೀಡಿತ್ತು. [ಪೇಢಾ ನಗರದಲ್ಲಿಯೇ ಐಐಟಿಯಂತೆ, ವಿದ್ಯಾಕಾಶಿಗೆ ಮತ್ತೊಂದು ಗರಿ]

IIT undergraduate course fees raised from Rs. 90,000 to Rs. two lakh

ವಿದೇಶಿ ವಿದ್ಯಾರ್ಥಿಗಳಿಗೂ ಬೆಲೆ ಏರಿಕೆ ಬಿಸಿ: ಎಸ್​ಸಿಐಸಿಯ ಶಿಫಾರಸುಗಳು ಅಂಗೀಕಾರವಾದರೆ, ವಿದೇಶಿ ವಿದ್ಯಾರ್ಥಿ/ನಿಯರ ವಾರ್ಷಿಕ ಶುಲ್ಕಗಳು ಕೂಡಾ ಪರಿಷ್ಕರಣೆಗೆ ಒಳಪಡಲಿದೆ. ಸದ್ಯ 4000 ಅಮೆರಿಕನ್ ಡಾಲರ್​ಗಳಷ್ಟಿರುವ ಶುಲ್ಕ 10,000 ಡಾಲರ್​ಗಳಿಗೆ ಏರಿಕೆಯಾಗಲಿದೆ.[ಜಾಗತಿಕ ಟಾಪ್ 200ರೊಳಗೆ ನಮ್ಮ ಐಐಎಸ್ಸಿಗೆ ಸ್ಥಾನ!]

ಐಐಟಿ ಕೌನ್ಸಿಲ್ ಸ್ಥಾಯಿ ಸಮಿತಿಯ (ಎಸ್​ಸಿಐಸಿ) ಇನ್ನೊಂದು ಪ್ರಮುಖ ಶಿಫಾರಸು ಪ್ರಕಾರ 2017ರಿಂದ ಯೋಗ್ಯತಾ ಪರೀಕ್ಷೆಗಾಗಿ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದಿಂದ (ಎನ್​ಎಟಿ) ಪ್ರವೇಶ ಪರೀಕ್ಷೆ ನಡೆಸುವ ಹೊಸ ಪ್ರಸ್ತಾಪವನ್ನೂ ಮಾಡಲಾಗಿದೆ.

ಈ ಮಧ್ಯೆ ದೇಶಾದ್ಯಂತ ಐಐಟಿಗಳಲ್ಲಿ ಅಧ್ಯಯನ ಮಾಡುತ್ತಿರುವ ದಲಿತ, ದಿವ್ಯಾಂಗ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಳಗಳ ವಿದ್ಯಾರ್ಥಿಗಳ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಭರವಸೆ ನೀಡಿದ್ದಾರೆ. ಸದ್ಯ ಐಐಟಿಯಲ್ಲಿ ಎಸ್ ಸಿಗಳಿಗೆ ಶೇ15, ಎಸ್ಟಿಗಳಿಗೆ ಶೇ 7.5 ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಶೇ27ರಷ್ಟು ಕೋಟಾ ಲಭ್ಯವಿದೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The annual fee for undergraduate courses in all 23 branches of the Indian Institute of Technology will be hiked from Rs 90,000 to Rs 2 lakh from the upcoming academic year, Ministry of Human Resource Development officials told PTI.
Please Wait while comments are loading...