ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿ ಎಂಜಿನಿಯರ್‌ಗಳಿಗೆ ಉದ್ಯೋಗದ ಆಫರ್‌ಗಳೇ ಬರುತ್ತಿಲ್ಲ

|
Google Oneindia Kannada News

ನವದೆಹಲಿ, ಏಪ್ರಿಲ್ 25: ಕೊರೊನಾ ಲಾಕ್‌ಡೌನ್‌ನಿಂದಾಗಿ ಐಐಟಿ ಎಂಜಿನಿಯರ್‌ಗಳ ಪ್ಲೇಸ್‌ಮೆಂಟ್‌ಗೆ ತಡೆ ಬಿದ್ದಿದೆ ಅಷ್ಟೇ ಅಲ್ಲದೆ ಹತ್ತರಲ್ಲಿ ಮೂರು ಮಂದಿಗೆ ಉದ್ಯೋಗವೇ ದೊರೆಯುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಐಐಟಿಯು ಹಲವು ಕಂಪನಿಗಳ ಜೊತೆಗೆ ಸಂಪರ್ಕವನ್ನು ಹೊಂದಿದೆ. ಆ ಕಂಪನಿಗಳಲ್ಲಿ ಮಾರ್ಚ್ ಅಥವಾ ಏಪ್ರಿಲ್‌ನಲ್ಲ ಮಾತ್ರ ನೇಮಕಾತಿ ನಡೆಯುತ್ತದೆ. ಅವರು ಈಗಾಗಲೇ ಜಾಬ್ ಆಫರ್‌ಗಳನ್ನು ನೀಡಿದ್ದಾರೆ.

Covid Toes: ಇಟಲಿ, ಅಮೆರಿಕದಲ್ಲಿ ಕೊರೊನಾದ ಹೊಸ ರೋಗ ಲಕ್ಷಣ Covid Toes: ಇಟಲಿ, ಅಮೆರಿಕದಲ್ಲಿ ಕೊರೊನಾದ ಹೊಸ ರೋಗ ಲಕ್ಷಣ

ಐಐಟಿ ಖಾನ್‌ಪುರ್ ಸ್ಟೂಡೆಂಟ್ ಪ್ಲೇಸ್‌ಮೆಂಟ್ ಆಫೀಸ್ ಚೇರ್‌ಮೆನ್ ಕಾಂತೇಶ್ ಬಾಲಾನಿ ಮಾತನಾಡಿ, ಐಐಟಿಯು ವಿದ್ಯಾರ್ಥಿಳಿಗೆ ಉದ್ಯೋಗವನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲದೆ ಸ್ಟಾರ್ಟ್‌ ಅಪ್‌ಗಳನ್ನು ಆರಂಭಿಸುವವರಿಗೂ ನೆರವಾಗುತ್ತಿದೆ ಎಂದು ತಿಳಿಸಿದ್ದಾರೆ.

IIT Placement Season No Job Offers Drying Up

ಮದ್ರಾಸ್, ದೆಹಲಿ, ಖಾನ್‌ಪುರ, ಗುವಾಹಟಿ ಹಾಗೂ ಬಾಂಬೆ ಐಐಟಿಯು ಕೆಲವು ಆಫರ್‌ಗಳನ್ನು ಹಿಂತೆಗೆದುಕೊಂಡಿದೆ. ಗುವಾಹಟಿ, ಖಾನ್‌ಪುರ್, ಬಾಂಬೆ , ಮದ್ರಾಸ್ ಐಐಟಿಗಳು ಆನ್‌ಲೈನ್‌ ಮೂಲಕ ಪ್ಲೇಸ್‌ಮೆಂಟ್ ಮಾಡುತ್ತಿದೆ. ಅವರಗಳು ಜುಲೈ ತಿಂಗಳಲ್ಲಿ ಆಫರ್ ನೀಡಲು ಸಿದ್ಧವಾಗಿವೆ. ಆದರೆ ಆನ್‌ಲೈನ್ ಮೂಲಕ ಪ್ಲೇಸ್‌ಮೆಂಟ್ ಮಾಡುವುದು ಉತ್ತಮವಲ್ಲ ಎಂದು ಅಭಿಪ್ರಾಯ ಪಡಲಾಗಿದೆ.

ಐಐಟಿ ಮದ್ರಾಸ್ 1331ರಲ್ಲಿ 924 ವಿದ್ಯಾರ್ಥಿಗಳಿಗೆ ಕೆಲಸ ಕೊಡಿಸಿದೆ. ಕಂಪನಿಗಳು ಆನ್‌ಲೈನ್ ಮೂಲಕ ಸಂದರ್ಶನ ನೀಡುವಂತೆ ಕೇಳುತ್ತಿದ್ದಾರೆ. ಕೆಲವು ಕಂಪನಿಗಳು ಜಾಯಿನಿಂಗ್ ದಿನಾಂಕವನ್ನು ಮುಂದೂಡುತ್ತಿದ್ದಾರೆ.

ಇನ್ನು ಕೆಲವು ಐಐಟಿಗಳು ಯಾವುದೇ ಆಫರ್‌ಗಳನ್ನು ನೀಡಿಲ್ಲ ಎಂದು ತಿಳಿದುಬಂದಿದೆ. ಐಐಟಿ ಗಾಂಧಿನಗರದಲ್ಲೂ ಕೂಡ ಶೇ.25ರಷ್ಟು ವಿದ್ಯಾರ್ಥಿಗಳು ಮೊದಲ ಆಫರ್‌ಗಾಗಿ ಕಾಯುತ್ತಿದ್ದಾರೆ.

English summary
The lockdown isn’t sparing IITs’ sought-after engineers — in the final phase of the placement season and it’s estimated that 3 out of 10 do not have job offers yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X