• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿಯಿಂದ PIVOT; ಕ್ಯಾನ್ಸರ್‌ಕಾರಕ ಜೀನ್ ಪತ್ತೆ ಮಾಡುತ್ತೆ ಈ ಟೂಲ್

|
Google Oneindia Kannada News

ಚೆನ್ನೈ, ಜುಲೈ 7: ಇನ್ಮುಂದೆ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಸುಲಭವಾಗಬಹುದು. ಐಐಟಿ ಮದ್ರಾಸ್‌ನವರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಹಾಯದಿಂದ ಪೈವೋಟ್ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದು ಕ್ಯಾನ್ಸರ್‌ಕಾರಕ ಜೀನ್‌ಗಳು ಇರುವ ಸಾಧ್ಯತೆಯನ್ನು ಪತ್ತೆ ಮಾಡಬಲ್ಲುದಂತೆ.

ಇದರಿಂದ ಕ್ಯಾನ್ಸರ್ ರೋಗಕ್ಕೆ ವೈದ್ಯರು ನಿರ್ದಿಷ್ಟವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಮದ್ರಾಸ್ ಇಂಡಿಯನ್ ಇನ್ಸ್‌ಟಿಟ್ಯೂಟ್ ಅಫ್ ಟೆಕ್ನಾಲಜಿಯ ಸಂಶೋಧಕರ ತಂಡ ಈ ಸಾಧನ ಅಬಿವೃದ್ಧಿಪಡಿಸಿದೆ.

ಡ್ರಗ್ ಪ್ರಯೋಗದಿಂದ ಕ್ಯಾನ್ಸರ್ ಮುಕ್ತವಾದ ಯುಕೆ ಮಹಿಳೆಡ್ರಗ್ ಪ್ರಯೋಗದಿಂದ ಕ್ಯಾನ್ಸರ್ ಮುಕ್ತವಾದ ಯುಕೆ ಮಹಿಳೆ

ಇದು ಮೂರು ವಿಧದ ಕ್ಯಾನ್ಸರ್ ರೋಗಗಳಿಗೆ ಉಪಯುಕ್ತವಾಗಲಿದೆ. ಲಂಗ್ ಅಡಿನೋಕಾರ್ಸಿನೋಮಾ, ಬ್ರೆಸ್ಟ್ ಇನ್ವೇಸಿವ್ ಕಾರ್ಸಿನೋಮಾ ಮತ್ತು ಕಾಲನ್ ಅಡಿನೋಕಾರ್ಸಿನೋಮಾ ಎಂಬ ವಿಧದ ಕ್ಯಾನ್ಸರ್ ರೋಗಗಳ ಪತ್ತೆಗೆಂದು ಈ ಎಐ ಮಾಡೆಲ್ ಆಧಾರಿತ ಪೈವೋಟ್ ಸಾಧನ ತಯಾರಿಸಲಾಗಿದೆಯಂತೆ.

ಏನಿದು PIVOT?
ಕ್ಯಾನ್ಸರ್‌ಗೆ ಕಾರಣವಾಗುವ ವಂಶವಾಹಿ (ಜೀನ್) ಯನ್ನು ಗುರುತಿಸಲು ಈ ಸಾಧನ ಸಹಾಯವಾಗುತ್ತದೆ. ವಂಶವಾಹಿ ಮಾರ್ಪಾಡು, ಜೀನ್ ಎಕ್ಸ್‌ಪ್ರೆಷನ್‌ನ ದತ್ತಾಂಶವನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಾಧನದ ಸಹಾಯದಿಂದ ಬಳಸಲಾಗುತ್ತದೆ. ವಂಶವಾಹಿಗಳ ವ್ಯತ್ಯಾಸ, ವಂಶವಾಹಿ ಅಭಿವ್ಯಕ್ತತೆಯ ಮಾರ್ಪಾಡಿನಿಂದಾಗಿ ಜೈವಿಕ ಜಾಲದಲ್ಲಿ ಉಂಟಾಗುವ ವ್ಯತ್ಯಯಗಳನ್ನು ಇದು ಗುರುತಿಸುತ್ತದೆ. ಈ ಮೂಲಕ ಕ್ಯಾನ್ಸರ್‌ಕಾರಕ ಜೀನ್‌ಗಳು ಯಾವುವು ಎಂದು ಇದು ಅಂದಾಜು ಮಾಡಬಲ್ಲುದು.

IIT Madras Researchers Develop PIVOT Tool To Diagnose Cancer

ಎಲ್ಲಾ ಕ್ಯಾನ್ಸರ್ ರೋಗಿಗಳಿಗೂ ಒಂದೇ ರೀತಿಯಲ್ಲಿ ಚಿಕಿತ್ಸೆ ನೀಡಲಾಗುವುದಿಲ್ಲ. ಪ್ರತಿಯೊಬ್ಬರಿಗೂ ಕ್ಯಾನ್ಸರ್ ಕಾಯಿಲೆ ವಿಭಿನ್ನವಾಗಿರುತ್ತದೆ. ಚಿಕಿತ್ಸೆಯೂ ಕೂಡ ಬೇರೆಯೇ ನೀಡಬೇಕಾಗುತ್ತದೆ. ಇದರಿಂದಾಗಿ ಐಐಟಿ ಮದ್ರಾಸ್‌ನವರು ಅಭಿವೃದ್ಧಿಪಡಿಸಿರುವ ಪೈವೋಟ್ ಸಾಧನ ಉಪಯುಕ್ತ ಎನಿಸುವ ನಿರೀಕ್ಷೆ ಇದೆ. ಈ ಸಾಧನವು ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಮತ್ತು ಕ್ಯಾನ್ಸರ್ ಹರಡಲು ಕಾರಣವಾಗುವ ಜೀನ್‌ಗಳನ್ನು ಪತ್ತೆ ಮಾಡಲು ನೆರವಾಗುತ್ತದೆ. ಇದರಿಂದ ಬಹಳ ನಿರ್ದಿಷ್ಟವಾಗಿ ರೋಗಿಗೆ ಚಿಕಿತ್ಸೆ ನೀಡಬಹುದು.

(ಒನ್ಇಂಡಿಯಾ ಸುದ್ದಿ)

English summary
Researchers at IIT Madras have developed a tool based on AI technology. This can predict cancer causing genes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X