• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಐಟಿ ವಿದ್ಯಾರ್ಥಿಯಿಂದ ಅಧ್ಯಾಪಕಿ ನಗ್ನಚಿತ್ರ ಅಪ್ ಲೋಡ್

By Srinath
|

ಖರಗಪುರ, ಫೆ.18: ಇಲ್ಲಿನ ಐಐಟಿ ವಿದ್ಯಾರ್ಥಿಯೊಬ್ಬ ಅಧ್ಯಾಪಕಿಯ ನಗ್ನಚಿತ್ರಗಳನ್ನು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದಾನೆ. ಇತ್ತೀಚೆಗೆ IIT ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯರ ಚಿತ್ರಗಳನ್ನು ಇಂಟರ್ನೆಟ್ ಗೆ ಅಪ್ ಲೋಡ್ ಮಾಡುತ್ತಿದ್ದಾನೆ ಎಂಬ ಗಾಳಿಸುದ್ದಿ ಐಐಟಿ ಕ್ಯಾಂಪಸ್ಸಿನಲ್ಲಿ ಸುಳಿದಾಡಿ ಭಾರಿ ಆತಂಕ ಸೃಷ್ಟಿಸಿದ್ದರ ಬೆನ್ನಿಗೇ ಈಗ ಅಧ್ಯಾಪಕಿಯ ನಗ್ನಚಿತ್ರಗಳನ್ನೂ ಅಪ್ ಲೋಡ್ ಮಾಡಿದ್ದಾನೆ ಎಂಬುದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ಬಿಲಾಸಪುರದ ಹದಿನೆಂಟರ ಯುವಕ ಸುರ್ಜಿತ್ ಕುಮಾರ್ ಜೈನ್ ಈ ಕುಕೃತ್ಯವೆಸಗಿರುವ ವಿದ್ಯಾರ್ಥಿ ಎನ್ನಲಾಗಿದೆ. ಈತ Electronics and Communications ವಿಭಾಗದ ಇಂಜಿನಿಯರಿಂಗ್ ವಿದ್ಯಾರ್ಥಿ. ಈತ ತನ್ನ ಜಿಲ್ಲೆಯಲ್ಲಿಯೂ ಮಹಿಳೆಯರ ನಗ್ನಚಿತ್ರಗಳನ್ನು ಇಂಟರ್ನೆಟ್ ಗೆ ಅಪ್ ಲೋಡ್ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ತನ್ನ ಚಿತ್ರಗಳನ್ನೂ ಸದರಿ ವಿದ್ಯಾರ್ಥಿ ಇಂಟರ್ನೆಟ್ ಗೆ ಅಪ್ ಲೋಡ್ ಮಾಡಿದ್ದಾನೆ ಎಂದು ಕಳೆದ ತಿಂಗಳು ಅಧ್ಯಾಪಕಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆಗಿಳಿದ ಪೊಲೀಸರಿಗೆ IP address ಸದರಿ ವಿದ್ಯಾರ್ಥಿಯ ಕಂಪ್ಯೂಟರಿನೆಂದು ತಿಳಿದುಬಂದಿದೆ. ಆರೋಪಿ ಸುರ್ಜಿತ್ ಕುಮಾರ್ ಜೈನ್ IIT Kharagpurನಲ್ಲಿ ತಂಗಿದ್ದು, ಅಲ್ಲಿನ ಕಂಪ್ಯೂಟರ್ ಬಳಸಿ, ಈ ಕುಕೃತ್ಯವೆಸಗಿದ್ದಾನೆ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
IIT Kharagpur student Surajit Kumar Jain uploads nude pics of teacher. 18-year old Surajit Kumar Jain from Bilaspur and a student of Electronics and Communications uploaded nude pics of a woman from the same district. The woman, a teacher complained to the police following this incident last month. On tracing the IP address on Facebook, it led the police to the IIT Kharagpur campus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more