ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರಿಂದ ಖರಗ್ಪುರ ಐಐಟಿಯಲ್ಲಿ ವೈದ್ಯಕೀಯ ಕೋರ್ಸ್

ಪ್ರತಿಷ್ಠಿತ ಖರಗ್ಪುರ್ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರಿಂಗ್ (ಐಐಟಿ) ಸಂಸ್ಥೆಯು 2019ರಿಂದ ತನ್ನಲ್ಲಿ ವೈದ್ಯಕೀಯ ಕೋರ್ಸ್ ಆರಂಭಿಸಲಾಗುವುದು ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.

|
Google Oneindia Kannada News

ಖಾರಗ್ ಪುರ, ಏಪ್ರಿಲ್ 6: ಮೇಲಿನ ಹೆಡ್ ಲೈನ್ ನೋಡಿದರೆ, ಛೇ.. ಛೇ.. ಎಲ್ಲಾದ್ರೂ ಉಂಟಾ...? ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಡಿಕಲ್ ಆಗುತ್ತೆ ಅಂದ್ರೆ ಏನರ್ಥ? ಏನು ತಮಾಷೆ ಮಾಡ್ತಾ ಇದೀರ ಎಂದು ಕೇಳಬಹುದು. ಆದರೆ, ಹಾಗೆ ಕೇಳೋ ಮುನ್ನ ಈ ಸುದ್ದಿ ಓದಿದರೆ ಒಳ್ಳೆಯದು.

ಪ್ರತಿಷ್ಠಿತ ಖರಗ್ಪುರ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರಿಂಗ್ (ಐಐಟಿ) ಸಂಸ್ಥೆಯು 2019ರಿಂದ ತನ್ನಲ್ಲಿ ವೈದ್ಯಕೀಯ ಕೋರ್ಸ್ ಆರಂಭಿಸಲಾಗುವುದು ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.

IIT Kharagpur, India's oldest IIT, to start MBBS course from 2019

ಆದರೆ, ಅಚ್ಚರಿಯೆಂದರೆ, ಐಐಟಿ ಎಂದರೆ ಸಾಮಾನ್ಯವಾಗಿ ಅದು ಇಂಜಿನಿಯರಿಂಗ್ ಕೋರ್ಸ್ ಗಳನ್ನು ಸೂಚಿಸುವ ಪದ. ಆದರೆ, ಅದಕ್ಕೂ ತನ್ನ ವೈದ್ಯಕೀಯ ಕೋರ್ಸಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿರುವ ಕಾಲೇಜಿನ ಆಡಳಿತ ಮಂಡಳಿ ಹೇಳಿದೆ. ಅಲ್ಲದೆ, ಐಐಟಿ ಹೆಸರಿನಲ್ಲೇ ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ ಸ್ಪಷ್ಟಪಡಿಸಿದೆ.

ಇದಲ್ಲದೆ, ಖರಗ್ಪುರ ಇಂಜಿಯರಿಂಗ್ ಕಾಲೇಜಿನ ಆವರಣದಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯೊಂದನ್ನು ಆರಂಭಿಸಲು ಕಾಲೇಜಿನ ಆಡಳಿತ ಮಂಡಳಿಯು ಸಿದ್ಧವಾಗಿದ್ದು, 2018ರ ಮಧ್ಯಭಾಗದಿಂದ ಅದು ಸೇವೆಗೆ ಸಿದ್ಧವಾಗಲಿದೆ. ಇದೇ ಆಸ್ಪತ್ರೆಯೇ ಮುಂದೆ 2019ರಲ್ಲಿ ತಾನು ಆರಂಭಿಸಲಿರುವ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲು ಬಳಕೆಯಾಗಲಿದೆ ಎಂದು ಆಡಳಿತ ಮಂಡಳಿ ಹೇಳಿದೆ.

English summary
IIT Kharagpur, India's oldest Indian Institute of Technology (IIT), is planning to start a new course and it has nothing to do with what IIT is best known for — engineering. In a first of its kind initiative taken up by IIT, the Kharagpur branch is planning to start an MBBS course from 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X