ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ಶ್ರೇಷ್ಠ ವಿವಿಗಳ ಪಟ್ಟಿಯಲ್ಲಿ ನಮ್ಮ ಐಐಎಸ್ಸಿಗೆ ಸ್ಥಾನ!

By Mahesh
|
Google Oneindia Kannada News

ಬೆಂಗಳೂರು, ಸೆ. 23: ಟೈಮ್ಸ್ ಹ್ಯೆಯರ್ ಎಜುಕೇಷನ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕ ಪಟ್ಟಿ 2016-17 ಪ್ರಕಟಗೊಂಡಿದೆ. ಬೆಂಗಳೂರಿನ ಐಐಎಸ್ಸಿ ಹಾಗೂ ಭಾರತ ಐಐಟಿಗಳು ಸ್ಥಾನ ಪಡೆದುಕೊಂಡಿವೆ. ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ವಿವಿಗಳ ಸಾಲಿನಲ್ಲಿ ಭಾರತದ 31 ಶಿಕ್ಷಣ ಸ೦ಸ್ಥೆಗಳು ಸ್ಥಾನ ಪಡೆದಿವೆ.

ಒಟ್ಟಾರೆ, 980 ವಿಶ್ವ ವಿದ್ಯಾಲಯಗಳ ಪ್ಯೆಕಿ ಭಾರತದ 31 ಶಿಕ್ಷಣ ಸ೦ಸ್ಥೆಗಳು ಸ್ಥಾನ ಪಡೆದಿದ್ದು, ಬೆಂಗಳೂರಿನ ಐಐಎಸ್ಸಿ 201-250ರ ಅಂತರದಲ್ಲಿರುವ ಪಟ್ಟಿಯಲ್ಲಿದೆ. ಕಳೆದ ಬಾರಿ 251-300ನೇ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಐಐಟಿ ಬಾ೦ಬೆ 351-400ನೇ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 400ರ ವರೆಗಿನ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಎರಡನೇ ವಿವಿ ಎ೦ಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ ವಿವಿಗಳ ಪೈಕಿ ಬೆ೦ಗಳೂರಿನ ಐಐಎಸ್ಸಿ ಉತ್ತಮ ಸ್ಥಾನ ಹೊಂದಿದೆ.

IISc, Bangalore make it to Times World University Rankings

ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ನಲ್ಲಿ 39 ವಿಭಾಗಗಳಿದ್ದು, 3,500 ವಿದ್ಯಾರ್ಥಿಗಳು ಹಾಗೂ 500ಕ್ಕೂ ಅಧಿಕ ಬೋಧಿಕ ವರ್ಗ, 600 ಕ್ಕೂ ಬೋಧಕೇತರ ವರ್ಗವಿದೆ. ಸ್ನಾತಕೋತ್ತರ ಪದವಿಗೆ 900ಕ್ಕೂ ಅಧಿಕ ನೋಂದಣಿಯಾಗಿದೆ.

ಜಾಗತಿಕವಾಗಿ ಆಕ್ಸ್ ಫರ್ಡ್ ವಿವಿ ಮೊದಲ ಸ್ಥಾನ ಪಡೆದಿದ್ದು, ಕ್ಯಾಲಿಫೋರ್ನಿಯಾದ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಎರಡನೇ ಸ್ಥಾನ ಮತ್ತು ಸ್ಟಾನ್ ಫರ್ಡ್ ವಿವಿ ಮೂರನೇ ಸ್ಥಾನ ಪಡೆದಿದೆ. ಭಾರತವು ಉತ್ತಮ ಸಾಧನೆ ಮಾಡುತ್ತಿದ್ದು, ಈ ಬಾರಿ 200ರ ಪಟ್ಟಿಯಲ್ಲಿದೆ. (ಪಿಟಿಐ)

English summary
The Indian Institute of Science (IISc), Bangalore is India's top institution in the 'Times Higher Education (THE) World University Rankings 2016-17. India has improved its position in the global higher education, with a record 31 educational institutions making it to a new list of the world's top varsities topped by the University of Oxford.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X