ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆ ರಜೆಯಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದರೆ, ಉತ್ತರಾಖಂಡದ 5 ಸ್ಥಳಗಳು ಇಲ್ಲಿವೆ

|
Google Oneindia Kannada News

ಡೆಹ್ರಾಡೂನ್ ಮೇ 10: ಬಿಸಿಗಾಳಿ ಉತ್ತುಂಗದಲ್ಲಿರುವ ಪ್ರದೇಶ ಬಿಟ್ಟು ಈ ದಿನಗಳಲ್ಲಿ ಮಲೆನಾಡಿನಲ್ಲಿ ತಿರುಗಾಡಲು ಮನಸ್ಸು ಹಾತೊರಿಯುವುದು ಸಾಮಾನ್ಯ. ಹೀಗಾಗಿ ಬೇಸಿಗೆ ರಜೆ ಕಳೆಯಲು ಬಯಸುವವರು ಅಧಿಕ ಜನ ಇರಬಹುದು. ಬೇಸಿಗೆ ರಜೆಯಲ್ಲಿ ಎಲ್ಲಿಗಾದರೂ ಪ್ರಯಾಣ ಬೆಳೆಸುವ ಯೋಜನೆ ಹಾಕಿಕೊಂಡರೆ ಉತ್ತರಾಖಂಡ ಸ್ವರ್ಗದ ಅನುಭವ ನೀಡುವುದರಲ್ಲಿ ಕಡಿಮೆಯಿಲ್ಲ. ಅಲ್ಲಿ ಅನೇಕ ಪ್ರವಾಸಿ ತಾಣಗಳು ನಿಮ್ಮನ್ನು ಆಕರ್ಷಿಸುತ್ತಿವೆ. ಅಂತಹ ಕೆಲವು ಪ್ರವಾಸಿ ತಾಣಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ. ಕೌಸಾನಿ, ಔಲಿ, ಚೋಪ್ತಾ, ದಯಾರಾ ಬುಗ್ಯಾಲ್, ಚಕ್ರತಾ ಸ್ಥಳಗಳ ಬಗ್ಗೆ ಕೊಂಚ ಮಾಹಿತಿ ಪಡೆದುಕೊಳ್ಳೋಣ.

ಉತ್ತರಾಖಂಡದ ಕೌಸಾನಿ ರಮಣಿಯ ನೋಟ

ಉತ್ತರಾಖಂಡದ ಕೌಸಾನಿ ರಮಣಿಯ ನೋಟ

ಇದು ಉತ್ತರಾಖಂಡದ ಕುಮಾನ್ ವೃತ್ತದ ಬಾಗೇಶ್ವರ ಜಿಲ್ಲೆಯ ಒಂದು ಗ್ರಾಮ. ಅಲ್ಮೋರಾದಿಂದ ಉತ್ತರಕ್ಕೆ 53 ಕಿಮೀ ದೂರದಲ್ಲಿರುವ ಕೌಸಾನಿಯು ಪಿಂಗ್ನಾಥ್ ಶಿಖರದಲ್ಲಿದೆ. ಇಲ್ಲಿಂದ ಹಿಮದಿಂದ ಆವೃತವಾದ ನಂದಾದೇವಿ ಪರ್ವತದ ಶಿಖರದ ನೋಟವು ಬಹಳ ಅದ್ಭುತವಾಗಿ ಕಾಣಿಸುತ್ತದೆ. ಕೋಸಿ ಮತ್ತು ಗೋಮ್ತಿ ನದಿಗಳ ನಡುವೆ ಇರುವ ಕೌಸಾನಿಯನ್ನು ಭಾರತದ ಸ್ವಿಟ್ಜರ್ಲೆಂಡ್ ಎಂದು ಕರೆಯಲಾಗುತ್ತದೆ. ಕೌಸಾನಿಯಲ್ಲಿ ಭೇಟಿ ನೀಡಲು ಆಸಕ್ತಿದಾಯಕ ಆಶ್ರಮವಿದೆ. ಇದನ್ನು ಗಾಂಧಿ ಆಶ್ರಮ ಎಂದೂ ಕರೆಯುತ್ತಾರೆ. ಈ ಆಶ್ರಮವನ್ನು ಮಹಾತ್ಮ ಗಾಂಧೀಜಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಇದರೊಂದಿಗೆ, ಲಕ್ಷ್ಮಿ ಆಶ್ರಮವೂ ಇದೆ. ಈ ಆಶ್ರಮವು ಸರಳ ಆಶ್ರಮ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ. ಪ್ರಸಿದ್ಧ ಹಿಂದಿ ಕವಿ ಸುಮಿತ್ರಾನಂದನ್ ಪಂತ್ ಕೌಸಾನಿಯಲ್ಲಿ ಜನಿಸಿದರು. ಇದು ಅವರಿಗೆ ಸಮರ್ಪಿತವಾದ ಪಂತ್ ಮ್ಯೂಸಿಯಂ ಬಸ್ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿದೆ. ಅವರು ತಮ್ಮ ಬಾಲ್ಯವನ್ನು ಕಳೆದ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಇದರೊಂದಿಗೆ 208 ಹೆಕ್ಟೇರ್‌ನಲ್ಲಿ ಹರಡಿರುವ ಚಹಾ ತೋಟವೂ ಇಲ್ಲಿ ಅತ್ಯಂತ ನೆಚ್ಚಿನ ಸ್ಥಳವಾಗಿದೆ. ಈ ಚಹಾ ತೋಟಗಳು ಕೌಸಾನಿ ಬಳಿ ಇದೆ. ಕೊಸಾನಿಯನ್ನು ತಲುಪಲು ಹತ್ತಿರದ ವಿಮಾನ ನಿಲ್ದಾಣವೆಂದರೆ ಪಂತನಗರ. ಮತ್ತು ಹತ್ತಿರದ ರೈಲು ಜಂಕ್ಷನ್ ಕತ್ಗೊಡಮ್ ಆಗಿದೆ. ಅಲ್ಲಿಂದ ಕೌಸಾನಿಯನ್ನು ಬಸ್ ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು.

ಸುಂದರವಾದ ಗಿರಿಧಾಮ ಹೊಂದಿದ ಚೋಪ್ತಾ

ಸುಂದರವಾದ ಗಿರಿಧಾಮ ಹೊಂದಿದ ಚೋಪ್ತಾ

ಇದು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಚೋಪ್ತಾವನ್ನು ಭಾರತದಲ್ಲಿ ಮಿನಿ ಸ್ವಿಟ್ಜರ್ಲೆಂಡ್ ಎಂದೂ ಕರೆಯಲಾಗುತ್ತದೆ. ಚೋಪ್ತಾ ಅತ್ಯಂತ ಸುಂದರವಾದ ಗಿರಿಧಾಮವಾಗಿದ್ದು, ಸಮುದ್ರ ಮಟ್ಟದಿಂದ 8556 ಅಡಿ ಎತ್ತರದಲ್ಲಿದೆ. ಚೋಪ್ತಾದಲ್ಲಿ ನೀವು ಪ್ರಪಂಚದ ಅತಿ ಎತ್ತರದ ಶಿವನ ದೇವಾಲಯವನ್ನು ನೋಡಬಹುದು, ಈ ದೇವಾಲಯವು ತುಂಗನಾಥ್ ಎಂಬ ಹೆಸರಿನಿಂದ ಬಹಳ ಪ್ರಸಿದ್ಧವಾಗಿದೆ. ಚೋಪ್ತಾ ಟ್ರೆಕ್ಕಿಂಗ್, ಹೈಕಿಂಗ್, ಪರ್ವತ ಸೈಕಲ್, ಈ ಎಲ್ಲಾ ಸಾಹಸಗಳಿಗೆ ಹೆಸರುವಾಸಿಯಾಗಿದೆ. ಚೋಪ್ತಾ ತುಂಗನಾಥ್ ಮತ್ತು ಚಂದ್ರಶಿಲಾ ಚಾರಣಕ್ಕೆ ಹೆಚ್ಚು ಪ್ರಸಿದ್ಧವಾಗಿದೆ. ಈ ಚಾರಣದಲ್ಲಿ ಪಂಚಚೂಲಿ, ನಂದಾ ದೇವಿ, ಕೇದಾರನಾಥ ಮತ್ತು ತ್ರಿಶೂಲ್‌ನ ಭವ್ಯವಾದ ಶಿಖರಗಳನ್ನು ನೋಡಬಹುದು. ರೈಲಿನ ಮೂಳಕ ಪ್ರಯಾಣಿಸಿದರೆ ಹರಿದ್ವಾರದಿಂದ ಚೋಪ್ತಾಗೆ 229 ಕಿಮೀ ಮತ್ತು ರಿಷಿಕೇಶದಿಂದ ಚೋಪ್ತಾಗೆ 209 ಕಿಮೀ ದೂರವಿದೆ. ಡೆಹ್ರಾಡೂನ್ ವಿಮಾನ ನಿಲ್ದಾಣದಿಂದ ಚೋಪ್ತಾ ದೂರ 178 ಕಿಮೀ. ಆಗುತ್ತದೆ.

ಆಹ್ಲಾದಕರ ಅನುಭವ ನೀಡುವ ಔಲಿ

ಆಹ್ಲಾದಕರ ಅನುಭವ ನೀಡುವ ಔಲಿ

ಇನ್ನೂ ಔಲಿ. ಇದು ಉತ್ತರಾಖಂಡದ ಚಮೋಲಿ ಜಿಲ್ಲೆಯ ಒಂದು ಪಟ್ಟಣವಾಗಿದೆ. ಇದನ್ನು ಔಲಿ ಬುಗ್ಯಾಲ್ ಎಂದೂ ಕರೆಯುತ್ತಾರೆ. ಇದು 5-7 ಕಿಲೋಮೀಟರ್‌ಗಳಷ್ಟು ಹರಡಿರುವ ಸಣ್ಣ ಸ್ಟೇ-ರೆಸಾರ್ಟ್ ಆಗಿದೆ. ಈ ರೆಸಾರ್ಟ್ ಅನ್ನು 9,500-10,500 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಹಿಮದಿಂದ ಆವೃತವಾದ ಶಿಖರಗಳು ತುಂಬಾ ಸುಂದರವಾಗಿ ಕಾಣುತ್ತವೆ. ಹಿಮವನ್ನು ನೋಡಲು ಜನರು ಇಲ್ಲಿ ಸೇರುತ್ತಾರೆ. ಇಲ್ಲಿ ಸ್ಟೇ ಮಾಡಬಹುದು. ಇದಲ್ಲದೆ, ನಂದಾದೇವಿಯ ಹಿಂದೆ ಸೂರ್ಯೋದಯವನ್ನು ನೋಡುವುದು ತುಂಬಾ ಆಹ್ಲಾದಕರ ಅನುಭವ ಇಲ್ಲಿ ನೀಡುತ್ತದೆ. ಔಲಿಯಲ್ಲಿ ತಿನ್ನುವ ಮತ್ತು ಉಳಿಯುವ ಯಾವುದೇ ತೊಂದರೆ ಇರುವುದಿಲ್ಲ. ಇಲ್ಲಿ ಮಾತ್ರ ತುಂಬಾ ಚಳಿ ಇರುತ್ತದೆ. ಇಲ್ಲಿಗೆ ಪ್ರಯಾಣಿಸಲು ಬೆಚ್ಚಗಿನ ಬಟ್ಟೆಗಳನ್ನು ಇಟ್ಟುಕೊಳ್ಳುವುದು ಅವಶ್ಯಕ. ಇಲ್ಲಿಂದ ಜೋಶಿಮಠಕ್ಕೂ ಭೇಟಿ ನೀಡಬಹುದು. ಇದಲ್ಲದೇ ತಪೋವನವನ್ನು ಕೂಡ ನೋಡಬಹುದು. ಇದು ಜೋಶಿಮಠದಿಂದ 14 ಕಿಮೀ ಮತ್ತು ಔಲಿಯಿಂದ 32 ಕಿಮೀ ದೂರದಲ್ಲಿದೆ. ಪವಿತ್ರ ಬದರಿನಾಥ ಯಾತ್ರೆಗೆ ಹೋಗುವ ದಾರಿಯಲ್ಲಿ ತಪೋವನ ಸಿಗುತ್ತದೆ. ಇದು ರಿಷಿಕೇಶದಿಂದ ಈಶಾನ್ಯದಲ್ಲಿ 268 ಕಿಮೀ ಮತ್ತು ದೆಹಲಿಯಿಂದ ಈಶಾನ್ಯಕ್ಕೆ 492 ಕಿಮೀ ದೂರದಲ್ಲಿದೆ. ದೆಹಲಿಯಿಂದ ರಸ್ತೆಯ ಮೂಲಕ ಔಲಿಗೆ ತಲುಪಲು 15 ಗಂಟೆ ತೆಗೆದುಕೊಳ್ಳುತ್ತದೆ.

ಸುಂದರವಾದ ಗಿರಿಧಾಮ ಹೊಂದಿದ ಚೋಪ್ತಾ

ಸುಂದರವಾದ ಗಿರಿಧಾಮ ಹೊಂದಿದ ಚೋಪ್ತಾ

ಇದು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಚೋಪ್ತಾವನ್ನು ಭಾರತದಲ್ಲಿ ಮಿನಿ ಸ್ವಿಟ್ಜರ್ಲೆಂಡ್ ಎಂದೂ ಕರೆಯಲಾಗುತ್ತದೆ. ಚೋಪ್ತಾ ಅತ್ಯಂತ ಸುಂದರವಾದ ಗಿರಿಧಾಮವಾಗಿದ್ದು, ಸಮುದ್ರ ಮಟ್ಟದಿಂದ 8556 ಅಡಿ ಎತ್ತರದಲ್ಲಿದೆ. ಚೋಪ್ತಾದಲ್ಲಿ ನೀವು ಪ್ರಪಂಚದ ಅತಿ ಎತ್ತರದ ಶಿವನ ದೇವಾಲಯವನ್ನು ನೋಡಬಹುದು, ಈ ದೇವಾಲಯವು ತುಂಗನಾಥ್ ಎಂಬ ಹೆಸರಿನಿಂದ ಬಹಳ ಪ್ರಸಿದ್ಧವಾಗಿದೆ. ಚೋಪ್ತಾ ಟ್ರೆಕ್ಕಿಂಗ್, ಹೈಕಿಂಗ್, ಪರ್ವತ ಸೈಕಲ್, ಈ ಎಲ್ಲಾ ಸಾಹಸಗಳಿಗೆ ಹೆಸರುವಾಸಿಯಾಗಿದೆ. ಚೋಪ್ತಾ ತುಂಗನಾಥ್ ಮತ್ತು ಚಂದ್ರಶಿಲಾ ಚಾರಣಕ್ಕೆ ಹೆಚ್ಚು ಪ್ರಸಿದ್ಧವಾಗಿದೆ. ಈ ಚಾರಣದಲ್ಲಿ ಪಂಚಚೂಲಿ, ನಂದಾ ದೇವಿ, ಕೇದಾರನಾಥ ಮತ್ತು ತ್ರಿಶೂಲ್‌ನ ಭವ್ಯವಾದ ಶಿಖರಗಳನ್ನು ನೋಡಬಹುದು. ರೈಲಿನ ಮೂಳಕ ಪ್ರಯಾಣಿಸಿದರೆ ಹರಿದ್ವಾರದಿಂದ ಚೋಪ್ತಾಗೆ 229 ಕಿಮೀ ಮತ್ತು ರಿಷಿಕೇಶದಿಂದ ಚೋಪ್ತಾಗೆ 209 ಕಿಮೀ ದೂರವಿದೆ. ಡೆಹ್ರಾಡೂನ್ ವಿಮಾನ ನಿಲ್ದಾಣದಿಂದ ಚೋಪ್ತಾ ದೂರ 178 ಕಿಮೀ. ಆಗುತ್ತದೆ.

ಮಹಾಭಾರತದ ಇತಿಹಾಸ ಹೊಂದಿದ ಪ್ರದೇಶ

ಮಹಾಭಾರತದ ಇತಿಹಾಸ ಹೊಂದಿದ ಪ್ರದೇಶ

ಇದು ಡೆಹ್ರಾಡೂನ್ ಜಿಲ್ಲೆಯಲ್ಲಿರುವ ನಗರ. ಸ್ಥಳ ಗುಡ್ಡಗಾಡು ಪ್ರವಾಸಿ ತಾಣ ಹಾಗೂ ಕಂಟೋನ್ಮೆಂಟ್ ಆಗಿದೆ. ಇದು ಡೆಹ್ರಾಡೂನ್‌ನಿಂದ 98 ಕಿಮೀ ದೂರದಲ್ಲಿದೆ. ಸುಂದರವಾದ ನೈಸರ್ಗಿಕ ಸ್ಥಳ ಮತ್ತು ಚಾರಣಕ್ಕೆ ಹೆಸರುವಾಸಿಯಾಗಿದೆ. ದೂರದವರೆಗೆ ಹರಡಿರುವ ದಟ್ಟ ಅರಣ್ಯಗಳಲ್ಲಿ ಜೌನ್ಸಾರಿ ಬುಡಕಟ್ಟಿನ ಆಕರ್ಷಕ ಗ್ರಾಮಗಳಿವೆ. ಇಲ್ಲಿನ ಪರಿಸರವನ್ನು ನೋಡಿದರೆ ಬ್ರಿಟಿಷರು ಈ ಸ್ಥಳವನ್ನು ಬೇಸಿಗೆಯ ಸೇನಾ ನೆಲೆಯನ್ನಾಗಿ ಬಳಸುತ್ತಿದ್ದರು. ಪ್ರಸ್ತುತ ಇಲ್ಲಿ ಸೇನಾ ಸಿಬ್ಬಂದಿಗೆ ಕಮಾಂಡ್ ತರಬೇತಿ ನೀಡಲಾಗುತ್ತದೆ. ಚಕ್ರತಾದಿಂದ 5 ಕಿ.ಮೀ ನಡಿಗೆಯಲ್ಲಿ 50 ಮೀಟರ್ ಎತ್ತರದ ಟೈಗರ್ ಫಾಲ್ಸ್ ಇದೆ. ಸಮುದ್ರ ಮಟ್ಟದಿಂದ 1395 ಮೀಟರ್ ಎತ್ತರದಲ್ಲಿರುವ ಈ ಜಲಪಾತವು ಚಕ್ರತಾದ ಈಶಾನ್ಯದಲ್ಲಿದೆ. ಇದರೊಂದಿಗೆ ಮಸ್ಸೂರಿ-ಯಮುನೋತ್ರಿ ರಸ್ತೆಯಲ್ಲಿ ಲಖಮಂಡಲವಿದೆ. ಲಕ್ಷಮಂಡಲವು ವಿಶೇಷವಾಗಿ ಮಹಾಭಾರತದ ಅವಧಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಪುರಾತತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ಇಲ್ಲಿ ಲಕ್ಷಾಂತರ ವಿಗ್ರಹಗಳ ಅವಶೇಷಗಳು ಕಂಡುಬಂದಿವೆ. ಇದು ಲಖಮಂಡಲ ಎಂದು ಹೆಸರಿಸಲು ಒಂದು ಕಾರಣವಾಗಿದೆ. ಕೌರವರು ಪಾಂಡವರನ್ನು ಸುಡಲು ಲಕ್ಷಗೃಹವನ್ನು ನಿರ್ಮಿಸಿದ್ದರು ಮತ್ತು ಅಲ್ಲಿ ಅವರು ತಾಯಿ ಕುಂತಿಯೊಂದಿಗೆ ಅವರನ್ನು ಜೀವಂತವಾಗಿ ಸುಡಲು ಸಂಚು ರೂಪಿಸಿದ್ದರು ಎಂದು ನಂಬಲಾಗಿದೆ. ಈ ಗುಹೆಯು ಲಖಮಂಡಲದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ. ಅದರ ಮೂಲಕ ಪಾಂಡವರು ಸುರಕ್ಷಿತವಾಗಿ ಹೊರಬಂದರು ಮತ್ತು ನಂತರ ಪಾಂಡವರು ಚಕ್ರನಗರಿಯಲ್ಲಿ ಒಂದು ತಿಂಗಳು ವಾಸಿಸುತ್ತಿದ್ದರು. ಇದನ್ನು ಇಂದು ಚಕ್ರತ ಎಂದು ಕರೆಯಲಾಗುತ್ತದೆ. ಚಕ್ರತಾ ಡೆಹ್ರಾಡೂನ್ ವಿಮಾನ ನಿಲ್ದಾಣದಿಂದ ಸುಮಾರು 123 ಕಿಮೀ ದೂರದಲ್ಲಿದೆ.

English summary
If you are planning to travel in summer vacation, these are 5 destinations in Uttarakhand. Let's get some information about Kausani, Auli, Chopta, Dayara Bugyal, Chakrata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X