ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಕಚೇರಿಯತ್ತ ಹೊರಟವರು ಪಾಲಿಸಲೇಬೇಕಾದ ಕೆಲವು ಅಂಶಗಳಿವು

|
Google Oneindia Kannada News

ಬೆಂಗಳೂರು, ಮೇ 22: ಕೊರೊನಾ ಲಾಕ್‌ಡೌನ್ ಸಡಿಲಗೊಳಿಸಲಾಗಿದೆ. ಕೆಲವರು ಕಚೇರಿಗೆ ತೆರಳಲು ಆರಂಭಿಸಿದ್ದಾರೆ. ಇನ್ನೂ ಕೆಲವರು ಸಿದ್ಧತೆಯಲ್ಲಿದ್ದಾರೆ.

Recommended Video

ಅವನಿಗೆ ಇರೋ ಅಷ್ಟು ಬುದ್ಧಿ ನನಗಿಲ್ಲ ಎಂದ GT DeveGowda

ಹಾಗಿದ್ದರೆ ನೀವು ಈ ಕೆಲವು ಅಂಶಗಳನ್ನು ಪಾಲಿಸಲೇಬೇಕಿದೆ. ಹಾಗಿದ್ದಾಗ ಮಾತ್ರ ಕೊರೊನಾದಿಂದ ದೂರವಿರಲು ಸಾಧ್ಯ. ಎಲ್ಲಾ ಕಚೇರಿಗಳಲ್ಲೂ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಇರಲೇಬೇಕು.

If You Are Going Back To Office, Follow These Dos And Don’ts

ನೀವು ಕಚೇರಿಗೆ ಹೊರಡುವಾಗ ಮಾಡಬೇಕಾಗಿದ್ದಿಷ್ಟು

-ಮನೆಯಿಂದ ಹೊರಡುವಾಗ ಮಾಸ್ಕ್ ಧರಿಸುವುದನ್ನು ಮರೆಯಬೇಡಿ
-ಸೋಪ್ ಪೇಪರ್, ಸಣ್ಣ ಸೋಪು ಅಥವಾ ಸ್ಯಾನಿಟೈಸರ್ ಅನ್ನು ಕಚೇರಿಗೆ ತೆಗೆದುಕೊಂಡು ಹೋಗಿ.
-ನಿಮ್ಮದೇ ಸ್ವಂತ ಕನ್ನಡಕ, ಮಗ್, ಬಾಟಲಿ, ಚಮಚ ತೆಗೆದುಕೊಂಡು ಹೋಗಿ ಆಗ ಪ್ಯಾಂಟ್ರಿಯಲ್ಲಿರುವ ಬೇರೆ ವಸ್ತುಗಳನ್ನು ಬಳಸುವುದಿಲ್ಲ.
-ಬೇರೆಯವರಿಂದ ಮೊಬೈಲ್ ಪವರ್ ಬ್ಯಾಂಕ್, ಚಾರ್ಜರ್ ಕೇಳಬೇಡಿ, ನೀವೇ ತೆಗೆದುಕೊಂಡು ಹೋಗಿ.
- ನಿಮ್ಮ ದ್ವಿಚಕ್ರ ವಾಹನದಲ್ಲಿ ಯಾರನ್ನೂ ಕೂರಿಸಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ.
-ಒಂದೊಮ್ಮೆ ಕಾರಿನಲ್ಲಿ ಇಬ್ಬರು ತೆರಳುತ್ತಿದ್ದರೆ ಡ್ರೈವರ್ ಪಕ್ಕದ ಸೀಟಿನಲ್ಲಿ ಕೂರುವ ಬದಲು ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳಿ.

ಲಾಕ್ಡೌನ್ 4.0: ಕಚೇರಿ ಕಾರ್ಯ ನಿರ್ವಹಣೆಗೆ ಮಾರ್ಗಸೂಚಿಲಾಕ್ಡೌನ್ 4.0: ಕಚೇರಿ ಕಾರ್ಯ ನಿರ್ವಹಣೆಗೆ ಮಾರ್ಗಸೂಚಿ

ಕಚೇರಿಗೆ ತೆರಳಿದ ಬಳಿಕ ಅನುಸರಿಸಬೇಕಾದ ನಿಯಮಗಳು

-ಲಿಫ್ಟ್‌ ಬಟನ್‌ಗಳನ್ನು ಮುಟ್ಟಬೇಡಿ, ಟಿಶ್ಯೂ ಸಹಾಯದಿಂದ ಆಪರೇಟ್ ಮಾಡಿ, ಒಂದೊಮ್ಮೆ ಮೆಟ್ಟಿಲುಗಳ ಮೂಲಕ ತೆರಳುತ್ತಿದ್ದರೆ ಗೋಡೆಗೆ ಅಂಟಿಕೊಂಡು ಹೋಗುವುದನ್ನು ತಪ್ಪಿಸಿ.
-ಒಂದೊಮ್ಮೆ ಲಿಫ್ಟ್‌ನಲ್ಲಿ ಎರಡಕ್ಕಿಂತ ಹೆಚ್ಚು ಮಂದಿ ಇದ್ದರೆ ಮುಂದಿನ ಲಿಫ್ಟ್ ಬರುವವರೆಗ ಕಾಯಿರಿ
- ಎಲ್ಲಿಯೂ ಫೇಸ್ ಮಾಸ್ಕ್ ತೆಗೆಯಬೇಡಿ, ಹಾಗೆಯೇ ದಿನವೂ ಒಂದೇ ಮಾಸ್ಕ್ ಧರಿಸಬೇಡಿ.
-ನಿಮ್ಮ ಸ್ವಂತ ವಾಹನದಲ್ಲಿ ಕಚೇರಿಗೆ ತೆರಳುತ್ತಿದ್ದರೆ, ಸ್ಟೇರಿಂಗ್, ಡೋರ್, ಡ್ಯಾಶ್, ಗೇರ್, ಸೀಟ್ ಬೆಲ್ಟ್ ಅನ್ನು ಸ್ಯಾನಿಟೈಸ್‌ಗೊಳಿಸಿ.
-ಕೆಲಸ ಆರಂಭಕ್ಕೂ ಮುನ್ನ ಕೈಗಳನ್ನು ಸ್ಯಾನಿಟೈಸ್ ಮಾಡಿರಿ, ಕೀಬೋರ್ಡ್‌ , ಡೆಸ್ಕ್‌ಟಾಪ್‌ಗಳನ್ನು ಶುಚಿಯಾಗಿಸಿ.
-ಕೈಕುಲುಕುವುದನ್ನು ಕಡಿಮೆ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ
-ಆಹಾರ ತೆಗೆದುಕೊಳ್ಳುವುದಕ್ಕೂ ಮುನ್ನ ಕೈಯನ್ನು ಶುಚಿಯಾಗಿ ತೊಳೆದುಕೊಳ್ಳಿ ಬೇರೆಯವರಿಂದ ಸ್ವಲ್ಪ ದೂರದಲ್ಲಿ ಕುಳಿತುಕೊಳ್ಳಿ.

ಕಚೇರಿಗಳನ್ನು ಖಾಲಿ ಮಾಡುತ್ತಿವೆ ದೊಡ್ಡ ದೊಡ್ಡ ಕಂಪನಿಗಳುಕಚೇರಿಗಳನ್ನು ಖಾಲಿ ಮಾಡುತ್ತಿವೆ ದೊಡ್ಡ ದೊಡ್ಡ ಕಂಪನಿಗಳು

ಕಚೇರಿಯಿಂದ ಮನೆಗೆ ಬಂದ ಬಳಿಕ ಮಾಡಬೇಕಾದದ್ದು

-ಮೊದಲು ಸ್ನಾನ ಮಾಡಿ, ಕಚೇರಿಗೆ ಧರಿಸಿದ್ದ ಉಡುಪನ್ನು ಪ್ರತ್ಯೇಕವಾಗಿಟ್ಟು, ತೊಳೆಯಿರಿ
-ಒಂದೊಮ್ಮೆ ನಿಮಗೆ ಜ್ವರ, ಕಫ ಇನ್ನಿತರೆ ಯಾವುದೇ ಲಕ್ಷಣಗಳು ಕಂಡುಬಂದರೂ ಕಚೇರಿಗೆ ಹೋಗಬೇಡಿ.

English summary
COVID 19 The pandemic is still there, one must remember, so while provisions for thermal scanning and sanitisation are being made at offices as per official directives, it is also important that you personally take certain precautions as well. If You Are Going Back To Office, Follow These Dos And Don’ts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X