ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ಮೊಟ್ಟೆ ತಿನ್ನುತ್ತೀರಾ? ಹಾಗಾದ್ರೆ ಹುಷಾರಾಗಿರಿ!

ಪ್ರೊಟೀನ್ ಹೆಚ್ಚಿರುವ ಆಹಾರಪದಾರ್ಥಗಳಲ್ಲಿ ಒಂದಾದ ಮೊಟ್ಟೆಯನ್ನು ಇಷ್ಟಪಟ್ಟು ತಿನ್ನುವವರು ಹಲವರು. ಆದರೆ ಇತ್ತೀಚೆಗೆ ಮಾರುಕಟ್ಟೆಗೆ ಪ್ಲಾಸ್ಟಿಕ್ ಮೊಟ್ಟೆಗಳು ಬಂದಿವೆ ಎಂಬ ಆತಂಕಕಾರಿ ಸುದ್ದಿಯೊಂದು ಇದೀಗ ಹರಿದಾಡುತ್ತಿದೆ.

|
Google Oneindia Kannada News

ನವದೆಹಲಿ, ಮಾರ್ಚ್ 31: ನೀವು ಮೊಟ್ಟೆ ಪ್ರಿಯರಾ..? ಹಾಗಾದ್ರೆ ನಿಮಗೊಂದು ಆತಂಕದ ಸುದ್ದಿ ಇಲ್ಲಿದೆ.

ಪ್ರೊಟೀನ್ ಹೆಚ್ಚಿರುವ ಆಹಾರಪದಾರ್ಥಗಳಲ್ಲಿ ಒಂದಾದ ಮೊಟ್ಟೆಯನ್ನು ಇಷ್ಟಪಟ್ಟು ತಿನ್ನುವವರು ಹಲವರು. ಅದು ಆರೋಗ್ಯವರ್ಧಕ ಮತ್ತು ಪೌಷ್ಟಿಕಾಂಶಯುಕ್ತ ಪದಾರ್ಥ ಎಂಬ ಕಾರಣಕ್ಕಾಗಿ ಈಗೀಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೂ ಮೊಟ್ಟೆಯನ್ನು ನೀಡಲಾಗುತ್ತದೆ.[ರವಾ ಇಡ್ಲಿಗೂ ವಿಶ್ವಯುದ್ಧಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ?]

ಇವೆಲ್ಲವೂ ನಿಜ. ಆದರೆ ಇತ್ತೀಚೆಗೆ ಮಾರುಕಟ್ಟೆಗೆ ಪ್ಲಾಸ್ಟಿಕ್ ಮೊಟ್ಟೆಗಳು ಬಂದಿವೆ ಎಂಬ ಆತಂಕಕಾರಿ ಸುದ್ದಿಯೊಂದು ಇದೀಗ ಹರಿದಾಡುತ್ತಿದೆ.

If you are a egg eater, be careful!

ಕೋಲ್ಕತ್ತಾದ ಅನಿತಾ ಕುಮಾರ್ ಎಂಬ ಮಹಿಳೆಯೊಬ್ಬರು ಖರೀದಿಸಿದ ಮೊಟ್ಟೆಯನ್ನು ಪ್ಯಾನಲ್ ನಲ್ಲಿ ಹಾಕಿ ಆಮ್ಲೆಟ್ ಮಾಡುತ್ತಿರುವಾಗ ಅವರಿಗೆ ಯಾಕೋ ಅದು ಸಹಜವಾದ ಮೊಟ್ಟೆಯಲ್ಲ ಅನ್ನಿಸಿದೆ. ತಕ್ಷಣವೇ ಬೆಂಕಿಕಡ್ಡಿಯನ್ನು ಗೀರಿ ಆಮ್ಲೆಟ್ ಮುಂದೆ ಹಿಡಿದಿದ್ದಾರೆ. ತಕ್ಷಣವೇ ಆಮ್ಲೇಟಿಗೆ ಬೆಂಕಿ ಹೊತ್ತಿಕೊಂಡು ಸುಟ್ಟಿದೆ! ಇದರಿಂದಾಗಿ ಮೊಟ್ಟೆ ಸಹಜವಾಗಿದ್ದಲ್ಲ, ಅದರಲ್ಲಿ ಪ್ಲಾಸ್ಟಿಕ್ ನ ಅಂಶಗಳಿದ್ದವು ಎಂಬುದನ್ನು ಅವರು ಪತ್ತೆ ಮಾಡಿದ್ದಾರೆ. ತಕ್ಷಣವೇ ತಾವು ತಂದಿದ್ದ ಮೊಟ್ಟೆಯನ್ನೆಲ್ಲ ಹಿಡಿದು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ತೆಗದುಕೊಂಡ ಪೊಲೀಸರು ಈ ವಿಷಯವನ್ನು ಅಲ್ಲಿನ ಮುನ್ಸಿಪಲ್ ಆಡಳಿತದ ಗಮನಕ್ಕೆ ತಂದಿದ್ದಾರೆ, ಕೋಲ್ಕತ್ತದ ತಿಲ್ಜಾಲಾ ಎಂಬ ಮಾರ್ಕೆಟಿನಲ್ಲಿ ಮಾರಾಟವಾಗುತ್ತಿದ್ದ ಈ ಮೊಟ್ಟೆ ಸಹಜವಾದದ್ದಲ್ಲ ಎಂಬುದು ದೃಢವಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

English summary
Are you a lover of eggs? are u regularly consuming it? then you should be very careful. Because artificial eggs are there in the market now! A Kolkata lady registered complaint about it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X