ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ರೈಲ್ವೆ ಸೇವೆಗಳ ಬಗ್ಗೆ ಮಾಹಿತಿಗಾಗಿ 139ನ್ನು ಒತ್ತಿ

|
Google Oneindia Kannada News

ದೆಹಲಿ, ಜನವರಿ.02: ಚೀಪ್ ಆಂಡ್ ಬೆಸ್ಟ್ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಹೆಸರೇ ಭಾರತೀಯ ರೈಲ್ವೆ. ದೇಶದಲ್ಲಿ ಅತ್ಯಂತ ಬಡ ಜನರಿಗೂ ಕೈಗೆ ಎಟಕುವ ದರದಲ್ಲಿ ರೈಲ್ವೆ ಸೇವೆ ಸಿಗುತ್ತಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ರೈಲ್ವೆ ಇಲಾಖೆ ಜನರಿಗೆ ಇದೀಗ ಮತ್ತಷ್ಟು ಹತ್ತಿರವಾಗುತ್ತಿದೆ.

ಭಾರತೀಯ ರೈಲುಗಳ ಬಗ್ಗೆ ಮಾಹಿತಿಯನ್ನು ಪ್ರಯಾಣಿಕರು ಇದೀಗ ಕುಳಿತಲ್ಲೇ ತಿಳಿದುಕೊಳ್ಳಬಹುದು. ಅದಕ್ಕಾಗಿ ನೂರೆಂಟು ನಂಬರ್ ಗಳನ್ನು ಹುಡುಕಾಡುವ ಅಗತ್ಯವಿಲ್ಲ. ಇನ್ನು ಮುಂದೆ ಒಂದೇ ಸಂಖ್ಯೆಗೆ ಡೈಲ್ ಮಾಡಿದರೆ ಸಾಕು, ರೈಲ್ವೆ ಇಲಾಖೆಯ ಎಲ್ಲ ಬಗೆಯ ಮಾಹಿತಿಯನ್ನು ಪಡೆಯಬಹುದಾಗಿದೆ.

ದೇಶದಲ್ಲಿ ಓಡಾಡಲಿದೆ ಖಾಸಗಿ ರೈಲು: ಎಲ್ಲೆಲ್ಲಿ ಇರಲಿದೆ ಸಂಚಾರ?ದೇಶದಲ್ಲಿ ಓಡಾಡಲಿದೆ ಖಾಸಗಿ ರೈಲು: ಎಲ್ಲೆಲ್ಲಿ ಇರಲಿದೆ ಸಂಚಾರ?

ಭಾರತೀಯ ರೈಲ್ವೆ ಇಲಾಖೆಯು 139 ಸಂಖ್ಯೆಯನ್ನು ಅಧಿಕೃತ ಸಹಾಯವಾಣಿ ಎಂದು ಜನವರಿ.02ರಂದು ಘೋಷಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಒಂದೇ ಸಂಖ್ಯೆಯಲ್ಲಿ ಎಲ್ಲ ರೀತಿಯ ರೈಲ್ವೆ ಸೇವೆಗಳ ಬಗ್ಗೆ ಮಾಹಿತಿ ನೀಡಲು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.

139 ಸಂಖ್ಯೆಯಲ್ಲೇ ಎಲ್ಲ ಸಹಾಯವಾಣಿ ವಿಲೀನ

139 ಸಂಖ್ಯೆಯಲ್ಲೇ ಎಲ್ಲ ಸಹಾಯವಾಣಿ ವಿಲೀನ

ಈ ಮೊದಲು ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗಾಗಿ ಸಹಾಯವಾಣಿಗಳನ್ನು ಆರಂಭಿಸಿತ್ತು. ಒಂದೊಂದು ಬಗೆಯ ಸೇವೆಗೆ ಒಂದೊಂದು ಸಹಾಯವಾಣಿ ಸಂಖ್ಯೆಗೆ ಪ್ರಯಾಣಿಕರು ಕರೆ ಮಾಡಬೇಕಿತ್ತು. ಆದರೆ, ಇನ್ನು ಮುಂದೆ ಅದರ ಅಗತ್ಯ ಇರುವುದಿಲ್ಲ. 139 ಸಂಖ್ಯೆಯಲ್ಲಿಯೇ ನಿಮಗೆ ಎಲ್ಲ ಸೇವೆಗಳ ಬಗ್ಗೆ ಮಾಹಿತಿಯು ಸಿಗಲಿದೆ.

ಭದ್ರತೆ, ವೈದ್ಯಕೀಯ ಸಹಾಯಕ್ಕಾಗಿ ಒಂದನ್ನು ಒತ್ತಿ

ಭದ್ರತೆ, ವೈದ್ಯಕೀಯ ಸಹಾಯಕ್ಕಾಗಿ ಒಂದನ್ನು ಒತ್ತಿ

ಭಾರತೀಯ ರೈಲ್ವೆ ಇಲಾಖೆ ಆರಂಭಿಸಿದ ಸಹಾಯವಾಣಿ 139ಕ್ಕೆ ಕರೆ ಮಾಡಿದ ನಂತರ ಅಲ್ಲಿ ವಿವಿಧ ಬಗೆಯ ಸೇವೆಯ ಬಗ್ಗೆ ಹೇಳಲಾಗುತ್ತದೆ. ಭದ್ರತೆ ಮತ್ತು ವೈದ್ಯಕೀಯ ಸೇವೆ ಬಗ್ಗೆ ಮಾಹಿತಿ ಪಡೆಯಲು 1ನ್ನು ಒತ್ತಬೇಕು. ನಂತರದಲ್ಲಿ ತಕ್ಷಣವೇ ನಿಮ್ಮ ಕರೆಯನ್ನು ಪ್ರತಿನಿಧಿಗೆ ವರ್ಗಾವಣೆ ಮಾಡಲಾಗುತ್ತದೆ.

ರೈಲಿನ ವೇಳಾಪಟ್ಟಿ, ಪಿಎನ್ಆರ್ ಮಾಹಿತಿಗಾಗಿ 2ನ್ನು ಒತ್ತಿ

ರೈಲಿನ ವೇಳಾಪಟ್ಟಿ, ಪಿಎನ್ಆರ್ ಮಾಹಿತಿಗಾಗಿ 2ನ್ನು ಒತ್ತಿ

ರೈಲುಗಳ ವೇಳಾಪಟ್ಟಿ, ಪಿಎನ್ಆರ್ ಸ್ಟೇಟಸ್, ಟಿಕೆಟ್ ಬುಕ್ಕಿಂಗ್, ದರ ಪರಿಶೀಲನೆ, ಟಿಕೆಟ್ ಕ್ಯಾನ್ಸಲ್ ಮಾಡುವ ಬಗ್ಗೆ ಮಾಹಿತಿ ಪಡೆಯಲು 2ನ್ನು ಒತ್ತಬೇಕು. ಇದೇ ಸಂಖ್ಯೆ ಅಡಿಯಲ್ಲಿ ಅಲರಾಂ ಸೇವೆ, ಆಹಾರ ಪೂರೈಕೆ ವ್ಹೀಲ್ ಚೇರ್ ಬುಕ್ಕಿಂಗ್ ಸೇವೆಯನ್ನು ಕೂಡಾ ನೀಡಲಾಗುತ್ತದೆ.

ಸಹಾಯವಾಣಿಯಲ್ಲಿ ದೂರು ಸಲ್ಲಿಸಲು ಹೀಗೆ ಮಾಡಿ

ಸಹಾಯವಾಣಿಯಲ್ಲಿ ದೂರು ಸಲ್ಲಿಸಲು ಹೀಗೆ ಮಾಡಿ

ಇನ್ನು, 139 ಸಂಖ್ಯೆಗೆ ಕರೆ ಮಾಡಿದ ನಂತರ ದೂರು ನೀಡುವುದಕ್ಕೆ ಹಲವು ವಿಭಾಗಗಳನ್ನು ಮಾಡಲಾಗಿದೆ. ಆಹಾರ ಪೂರೈಕೆಯಲ್ಲಿನ ಲೋಪದ ಬಗ್ಗೆ ದೂರು ಸಲ್ಲಿಸಲು 3ನ್ನು ಒತ್ತಬೇಕು. ಸಾಮಾನ್ಯ ದೂರಿಗಾಗಿ 4, ಮುಂಜಾಗರುಕತೆ ದೂರು ಸಲ್ಲಿಸಲು 5ನ್ನು ಒತ್ತುವಂತೆ ಕೋರಲಾಗಿದೆ. ಇದರ ಜೊತೆಗೆ ಅಪಘಾತ ಸಂದರ್ಭದಲ್ಲಿ ವಿಚಾರಣೆಗಾಗಿ 6ನ್ನು ಒತ್ತಬೇಕು. ಸಹಾಯವಾಣಿ ಪ್ರತಿನಿಧಿಯ ಜೊತೆ ಮಾತನಾಡಿಲು 9 ಒತ್ತುವಂತೆ ಕೋರಲಾಗಿದೆ.

English summary
If Passangers Want Information About Indian Railway, Just Press 139.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X