ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 2ಕ್ಕೆ ವಿಜಯ್ ಮಲ್ಯ ಹಸ್ತಾಂತರದ ಕೇಸ್ ವಿಚಾರಣೆಗೆ; ಅಸ್ತು ಅಂದರೆ 28 ದಿನದೊಳಗೆ ಭಾರತಕ್ಕೆ

|
Google Oneindia Kannada News

ವಿವಾದಿತ ಉದ್ಯಮಿ ವಿಜಯ್ ಮಲ್ಯ ಪಾಲಿಗೆ ಜುಲೈ 2ರ ಮಂಗಳವಾರ ನಿರ್ಣಾಯಕ ಆಗಲಿದೆ. ಭಾರತಕ್ಕೆ ವಿಜಯ್ ಮಲ್ಯರನ್ನು ಹಸ್ತಾಂತರ ಮಾಡುವ ವಿಚಾರವಾಗಿ ಮಲ್ಯ ಸಲ್ಲಿಸಿದ ಅರ್ಜಿಯ ಮೌಖಿಕ ವಿಚಾರಣೆ ಇಂಗ್ಲೆಂಡ್ ಕೋರ್ಟ್ ಹಾಗೂ ವೇಲ್ಸ್ ಹೈ ಕೋರ್ಟ್ ನಲ್ಲಿ ನಡೆಯಲಿದೆ. ಕಾನೂನು ಬದ್ಧವಾಗಿ ಮಲ್ಯಗೆ ಇರುವ ಕೊನೆ ಅವಕಾಶ ಇದು.

ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್ ಫೆಬ್ರವರಿ ನಾಲ್ಕನೇ ತಾರೀಕು ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಲು ಆದೇಶಿಸಿದ್ದರು. ಆ ಆದೇಶವನ್ನು ಪ್ರಶ್ನಿಸಿ, ವಿಜಯ್ ಮಲ್ಯ ಸಲ್ಲಿಸಿದ್ದ ಲಿಖಿತ ಅರ್ಜಿಯನ್ನು ನ್ಯಾ. ವಿಲಿಯಂ ಡೇವಿಸ್ ಏಪ್ರಿಲ್ ಐದನೇ ತಾರೀಕು ತಿರಸ್ಕರಿಸಿದ್ದರು.

ಜೈಲಲ್ಲೇ ಇದ್ದರೂ ಪರವಾಗಿಲ್ಲ, ದುಡ್ಡು ಕೊಡ್ತೀನಿ ಎಂದ ವಿಜಯ್ ಮಲ್ಯ!ಜೈಲಲ್ಲೇ ಇದ್ದರೂ ಪರವಾಗಿಲ್ಲ, ದುಡ್ಡು ಕೊಡ್ತೀನಿ ಎಂದ ವಿಜಯ್ ಮಲ್ಯ!

ಭಾರತ ಸರಕಾರದ ಪರವಾಗಿ ಯುಕೆ ಕೋರ್ಟ್ ನಲ್ಲಿ ವಾದಿಸುತ್ತಿರುವ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ (ಸಿಪಿಎಸ್) ವಕ್ತಾರರು ಮಾತನಾಡಿ, ಮೌಖಿಕ ವಿಚಾರಣೆ ಆಗುತ್ತದೋ ಇಲ್ಲ್ವೀ ವಿಜಯ್ ಮಲ್ಯ ಹಸ್ತಾಂತರದ ಅನುಮತಿ ವಿರುದ್ಧದ ಅರ್ಜಿ ಜುಲೈ ಎರಡನೆ ತಾರೀಕು ಹೈ ಕೋರ್ಟ್ ಮುಂದೆ ಬರಲಿದೆ ಎಂದಿದ್ದಾರೆ.

If UK court agrees on July 2nd for extradition; Vijay Mallya in India within 28 days

ಇದು ಒಂದು ದಿನಕ್ಕೆ ನಿಗದಿ ಆಗಿರುವ ಪ್ರಕರಣ. ನ್ಯಾಯಮೂರ್ತಿಗಳು ತೀರ್ಪನ್ನು ಕಾಯ್ದಿರಿಸಬಹುದು. ಆದರೆ ವಾದ ಬೇಗ ಮುಕ್ತಾಯವಾದರೆ ಅದೇ ದಿನ ತಮ್ಮ ತೀರ್ಮಾನವನ್ನು ಹೇಳಬಹುದು ಎಂದು ಹೇಳಿದ್ದಾರೆ. ಕಾನೂನು ತಜ್ಞರು ಹೇಳುವ ಪ್ರಕಾರ, ಕೆಳ ಹಂತದ ಕೋರ್ಟ್ ನಲ್ಲಿ ಮಾನ್ಯತೆ ಮಾಡದ ಸಾಕ್ಷ್ಯ ಅಥವಾ ಹೊಸ ನೆಲೆಗಟ್ಟು ಇದ್ದಲ್ಲಿ ಮಾತ್ರ ಅರ್ಜಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಕಳೆದ ವರ್ಷದ ಡಿಸೆಂಬರ್ ನಲ್ಲಿ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಜಯ್ ಮಲ್ಯ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿತ್ತು. ಈಗ ಮಲ್ಯ ಮುಂದಿರುವ ಆಯ್ಕೆಯೆಂದರೆ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಿದ್ದಲ್ಲಿ ಮಾತ್ರ ಅದಕ್ಕೆ ಅನುಮತಿ ನೀಡಲಾಗುತ್ತದೆ.

ವಿಜಯ್ ಮಲ್ಯಗೆ ಮತ್ತೆ ಹಿನ್ನಡೆ: ಗಡಿಪಾರು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಿಜಯ್ ಮಲ್ಯಗೆ ಮತ್ತೆ ಹಿನ್ನಡೆ: ಗಡಿಪಾರು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

ಇನ್ನು ಮಾನವ ಹಕ್ಕುಗಳ ಯುರೋಪಿಯನ್ ಕೋರ್ಟ್ ನ ವ್ಯಾಪ್ತಿಯು ಬ್ರೆಕ್ಸಿಟ್ ಪೂರ್ಣ ಆಗುವ ತನಕ ಯು.ಕೆ. ಪರಿಧಿಗಿಂತ ಮೀರಿದ್ದಾಗಿದೆ. ಇನ್ನೊಂದು ಸಾಧ್ಯತೆ ಏನೆಂದರೆ, ಗೃಹಕಾರ್ಯದರ್ಶಿಗೆ ಮನವಿ ಸಲ್ಲಿಸಬಹುದು. ಈ ಹಿಂದೆ ಟೈಗರ್ ಹನೀಫ್ (ಸೂರತ್ ಸ್ಫೋಟ ಪ್ರಕರಣದ ಆರೋಪಿ) ಅದೇ ರೀತಿ ಮನವಿ ಮಾಡಿದ್ದರಿಂದ ಆತನ ಹಸ್ತಾಂತರದ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ.

ಆರ್ಥಿಕ ಅವ್ಯವಹಾರದ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯ, 9000 ಕೋಟಿ ರುಪಾಯಿಯನ್ನು ಬ್ಯಾಂಕ್ ಗಳಿಗೆ ಪಾವತಿಸಬೇಕಿದೆ. ಆತ ಈಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಲ ಹಿಂತಿರುಗಿಸುವ ಬಗ್ಗೆ ಹೇಳುತ್ತಿದ್ದು, ಅದನ್ನು ಭಾರತ ಸರಕಾರ ಒಪ್ಪುತ್ತಿಲ್ಲ ಎಂದು ಕೂಡ ಹೇಳಿದ್ದಾರೆ.

English summary
Controversial businessman Vijay Mallya appeal against extradition to India oral hearing on July 2nd. If court decision comes against Mallya, he will be in India within 28 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X