ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರು ಇದ್ದಾನೆಯೇ? ಯಾಕೆ ಕೊರೊನಾ ತೊಲಗಿಸುತ್ತಿಲ್ಲ: ಕಾಟ್ಜು

|
Google Oneindia Kannada News

ನವದೆಹಲಿ, ಏಪ್ರಿಲ್ 13: ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಮತ್ತೊಮ್ಮೆ ತಮ್ಮ ಟ್ವೀಟ್ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ. ದೇವರು, ಕೊರೊನಾ ಬಗ್ಗೆ ಕಾಟ್ಜು ಪ್ರಶ್ನೆಯೊಂದನ್ನು ಎಸೆದಿದ್ದಾರೆ. ಈ ಬಗ್ಗೆ ಟ್ವೀಟ್ ಲೋಕದಲ್ಲಿ ಚರ್ಚೆ ಮುಂದುವರೆದಿದೆ.

"ದೇವರು ಎಂಬುವನು ಇದ್ದಾನೆಯೇ? ಇದ್ದಾರೆ ಯಾಕೆ ಅವನು ಕೊರೊನಾವನ್ನು ತೊಲಗಿಸುತ್ತಿಲ್ಲ?" ಎಂದು ಒಂದು ಸಾಲಿನ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರು ತಮಗೆ ತೋಚಿದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

"ದೇವರು ಮೊದಲಿಗೆ ತನ್ನ ಇರುವಿಕೆ ಬಗ್ಗೆ ನಮಗೆ ಅರಿವು ಮೂಡಿಸುತ್ತಾನೆ. ಎಲ್ಲರಿಗೂ ಅರಿವು ಮೂಡಿದಾಗ ಕೊರೊನಾ ತೊಗಲುತ್ತದೆ" ಎಂದು ಹಕೀಂ ನವೀದ್ ಎಂಬುವರು ಟ್ವೀಟ್ ಮಾಡಿದ್ದಾರೆ.

If there is a God why does he not eradicate corona ? tweets Markandey Katju

"ಆತ ಅದೇ ಕಾರ್ಯದಲ್ಲಿ ತೊಡಗಿದ್ದಾನೆ, ಗಂಟೆ ಹೊಡೆಯುವುದು, ಮೊಂಬತ್ತಿ ಹಚ್ಚುವಂತೆ ಮಾಡುವ ಮೂಲಕ, ನೀವು ಸುಮ್ಮನೆ ಧರ್ಮನಿಂದನೆ ಮಾತುಗಳನ್ನಾಡಬೇಡಿ'' ಎಂದು ಶಶಿಧರನ್ ಎಂಬುವರು ಪರೋಕ್ಷವಾಗಿ ಮೋದಿ ಕ್ರಮವನ್ನು ಟೀಕಿಸಿದ್ದಾರೆ.

ದೇವರು ಎಂಬುವನು ಇದ್ದರೆ ಕೊರೊನಾ ಎಂಬುದನ್ನು ಏಕೆ ಸೃಷ್ಟಿಸಿದಾ? ಎಂದು ಪ್ರಶ್ನೆ ಕೇಳಿದ್ದಾರೆ.

ಕಾಟ್ಜು ಅವರು ಈ ಹಿಂದೆ ಡೆಹ್ರಾಡೂನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಶ್ರೀರಾಮಚಂದ್ರ ದೇವರಲ್ಲ, ಎಲ್ಲರಂತೆ ಮನುಷ್ಯ, ಹಸುವನ್ನು ಗೋಮಾತೆ ಎಂದು ಕರೆಯುವುದು ತಪ್ಪು ಎಂದಿದ್ದರು.

ದೆಹಲಿ, ಮದ್ರಾಸ್ ಹಾಗೂ ಅಲಹಾಬಾದ್ ಹೈಕೋರ್ಟ್ ಜಡ್ಜ್ ಆಗಿದ್ದ ಕಾಟ್ಜು ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿ, ನಿವೃತ್ತರಾಗಿದ್ದಾರೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಚೇರ್ಮನ್ ಆಗಿದ್ದರು.

English summary
If there is a God why does he not eradicate corona ? tweets Former Supreme Court Judge Markandey Katju.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X