ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಂಸತ್ತಿಗೆ ಪಾದಾರ್ಪಣೆ: ದಾಖಲೆಗಳು ಹೀಗಿವೆ

By Srinath
|
Google Oneindia Kannada News

ವಡೋದರಾ, ಮೇ 3: ಭಾರಿ ಅಂತರದ ಮತಗಳಿಕೆಯೊಂದಿಗೆ ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಲಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಅನೇಕ ದಾಖಲೆಗಳನ್ನು ನಿರ್ಮಿಸಲಿದ್ದಾರೆ ಎಂದು ಮೋದಿ ಕಟ್ಟಾ ಅಭಿಮಾನಿಗಳು ಅದಾಗಲೇ ಕನಸು ಕಾಣುತ್ತಿದ್ದಾರೆ.

ಪ್ರಥಮ ಚುಂಬನಂ: ವಡೋದರಾ ಕ್ಷೇತ್ರದ ಫಲಿತಾಂಶವನ್ನು ಗಣನೆಗೆ ತೆಗೆದುಕೊಂಡು ಮೋದಿ ಅಭಿಮಾನಿಗಳು ಒಂದಷ್ಟು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. 'ಒಂದು ವೇಳೆ ಮೋದಿ 6 ಲಕ್ಷ ಮತಗಳ ಅಂತರದಿಂದ ಗೆದ್ದರು ಅಂತಿಟ್ಟುಕೊಳ್ಳೀ' ಎಂದೇ ಲೆಕ್ಕಾಚಾರ ಆರಂಭಿಸುವ ಮೋದಿ ಬೆಂಬಲಿಗರು ಅಲ್ಲಿಂದ ಮುಂದಕ್ಕೆ ಕೆಲ ದಾಖಲೆಗಳನ್ನು ನಿಮ್ಮ ಮುಂದಿಡುತ್ತಾ ಹೋಗುತ್ತಾರೆ. ಅವು ಹೀಗಿವೆ:

ಪ್ರಥಮ ಚುಂಬನಂ:

ಪ್ರಥಮ ಚುಂಬನಂ:

ಮೋದಿಯಂತೆ ಪಕ್ಷವೂ ಜಯಶಾಲಿಯಾದರೆ ಮೋದಿ ಮೊದಲ ಪ್ರವೇಶದಲ್ಲೇ ನೇರವಾಗಿ ಪ್ರಧಾನ ಮಂತ್ರಿ ಕುರ್ಚಿ ಅಲಂಕರಿಸಬಹುದು.

ಅಡ್ವಾಣಿ- ವಾಜಪೇಯಿ ಅವರೇ ಇಷ್ಟೊಂದು ಅಂತರ ಸಾಧಿಸಿಲ್ಲ

ಅಡ್ವಾಣಿ- ವಾಜಪೇಯಿ ಅವರೇ ಇಷ್ಟೊಂದು ಅಂತರ ಸಾಧಿಸಿಲ್ಲ

ಇದುವರೆಗೂ ಗುಜರಾತಿನಲ್ಲಿ ಅತ್ಯಧಿಕ ಅಂತರದ ಚುನಾವಣಾ ಗೆಲುವು ಅಂದರೆ 1998ರಲ್ಲಿ ರಾಜಕೋಟ್ ಲೋಕಸಭಾ ಕ್ಷೇತ್ರದಿಂದ ವಲ್ಲಭ ಕಠೀರಿಯಾ ಅವರು 3,54,187 ಮತಗಳ ಅಂತರದಿಂದ ಗೆದ್ದಿರುವುದು. ಗಮನಾರ್ಹವೆಂದರೆ ರಾಜ್ಯದಲ್ಲಿ ಇದುವರೆಗೂ ಎಲ್ ಕೆ ಅಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಂತಹ ಧೀಮಂತ ನಾಯಕರೇ ಇಷ್ಟೊಂದು ಅಂತರದೊಂದಿಗೆ ಜಯ ಸಾಧಿಸಿಲ್ಲ. ಆದರೆ ಮೋದಿ ಅಭಿಮಾನಿಗಳು ಹೇಳುವಂತೆ ಅವರು 6 ಲಕ್ಷ ಮತಗಳ ಅಂತರದ ಗೆಲುವು ಸಾಧಿಸಿಸಬೇಕು ಅಷ್ಟೆ.

ರಾಜೀವ್ ಹತ್ಯೆ ಹಿನ್ನೆಲೆಯಲ್ಲಿ ದಾಖಲೆ ಜಯ ಸಾಧಿಸಿದ್ದ ಪಿವಿಎನ್

ರಾಜೀವ್ ಹತ್ಯೆ ಹಿನ್ನೆಲೆಯಲ್ಲಿ ದಾಖಲೆ ಜಯ ಸಾಧಿಸಿದ್ದ ಪಿವಿಎನ್

ಮೋದಿ ಪ್ರಧಾನಿಯಾದರೆ ಅವರು ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರ ದಾಖಲೆಯನ್ನೂ ಮುರಿಯಬಹುದು. ಏನೆಂದರೆ ನರಸಿಂಹರಾಯರು 1991ರಲ್ಲಿ ಉಪಚುನಾವಣೆಯಲ್ಲಿ 5,80,297 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಗಮನಿಸಿ, ಆಗ ನಡೆದಿದ್ದು ಸಾರ್ವತ್ರಿಕ ಚುನಾವಣೆ ಅಲ್ಲ. ಅದೂ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ನಡೆದ ಉಪಚುನಾವಣೆ ಅದಾಗಿತ್ತು. ಅದಾಗಲೇ ಜಯ ಸಾಧಿಸಿದ್ದ ಕಾಂಗ್ರೆಸ್ಸಿನ ಜಿಪಿ ರೆಡ್ಡಿ ಅವರು 'ಪ್ರಧಾನಿ ಪಿವಿ ನರಸಿಂಹರಾವ್' ಅವರಿಗಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು ಅನುಕಂಪದ ಅಲೆಯಲ್ಲಿ ಗೆಲುವನ್ನು ತೇಲಿಸಿದ್ದರು. ಪ್ರಧಾನಿಯೊಬ್ಬರು ಇಷ್ಟೊಂದು ಅಂತರದಲ್ಲಿ ಗೆದ್ದ ದಾಖಲೆ ಇದುವರೆಗೂ ರಾವ್ ಅವರ ಹೆಸರಿನಲ್ಲಿಯೆ ಇದೆ.

ಇಂದಿರಾ ಹತ್ಯೆ ನಂತರ ವಾರಸುದಾರ ರಾಜೀವ್ ಜಯಭೇರಿ

ಇಂದಿರಾ ಹತ್ಯೆ ನಂತರ ವಾರಸುದಾರ ರಾಜೀವ್ ಜಯಭೇರಿ

ಸ್ವತಃ ರಾಜೀವ್ ಗಾಂಧಿ ಅವರೇ 1984ರಲ್ಲಿ 3,14,878 ಮತ ಅಂತರದಲ್ಲಿ ಜಯಭೇರಿಯಾಗಿದ್ದರು. ಗಮನಿಸಿ, ಜಸ್ಟ್ ಅದಾಗತಾನೆ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾಗಿತ್ತು. ಇಂದಿರಾಗೆ ವಾರಸುದಾರರಾಗಿ/ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜೀವ್ 3,14,878 ಮತ ಅಂತರದಲ್ಲಿ ಜಯ ಗಳಿಸಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆದ್ದು ಪ್ರಧಾನಿಯಾದ ದಾಖಲೆ ಇಂದಿಗೂ ರಾಜೀವ್ ಹೆಸರಿನಲ್ಲಿಯೇ ಇದೆ. 2 ನೆಯ ಸ್ಥಾನದಲ್ಲಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಪಿವಿ ನರಸಿಂಹರಾವ್ ಇದ್ದಾರೆ.

ಮೋದಿ 6 ಲಕ್ಷ ಮತಗಳ ಅಂತರದಿಂದ ಗೆಲ್ತಾರಾ?

ಮೋದಿ 6 ಲಕ್ಷ ಮತಗಳ ಅಂತರದಿಂದ ಗೆಲ್ತಾರಾ?

ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಅಭಿಮಾನಿಗಳು ಹೇಳುವಂತೆ ಮೋದಿ ವಡೋದರಾದಲ್ಲಿ (ವಾರಣಾಸಿಯಲ್ಲಿ ಬಿಟ್ಟು) 6 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದೇ ಆದರೆ ಈ ದಾಖಲೆಗಳೆಲ್ಲಾ ಪುಡಿ ಪುಡಿ. ಹಾಗಾಗುತ್ತದಾ? ಮೇ 16ರಂದು ನೋಡೋಣ.

English summary
Lok Sabha polls 2014 - Lok Sabha polls 2014 - If modi records six lakh margin win in Vadodara many records will be broken. Lok Sabha polls 2014 - If modi records six lakh margin win in Vadodara many records will be broken. There are many other records on victory margins that Modi may shatter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X