ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪರಾಭವಗೊಂಡರೆ ಮೋದಿ ಕಥೆ ಮುಗಿದಂತೆಯೇ'

By Srinath
|
Google Oneindia Kannada News

ನವದೆಹಲಿ, ನವೆಂಬರ್ 8: ಮುಂದಿನ ಲೋಕಸಭಾ ಚುನಾವಣೆಯು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ 'ಮಾಡು ಇಲ್ಲವೇ ಮಡಿ' ಎಂಬತಾಗುತ್ತದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಜೈರಾಂ ರಮೇಶ್ ಅವರು ಭವಿಷ್ಯ ನುಡಿದಿದ್ದಾರೆ.

'ಆದರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿಷಯದಲ್ಲಿ ಹಾಗಲ್ಲ. ಅವರ ಪಕ್ಷ ಒಂದು ಪಕ್ಷ ಚುನಾವಣೆಯಲ್ಲಿ ಸೋತರೂ ರಾಹುಲ್ ಚಾಲ್ತಿಯಲ್ಲಿರುತ್ತಾರೆ' ಎಂದೂ ಸಚಿವ ಜೈರಾಂ ರಮೇಶ್ ಹೇಳಿದ್ದಾರೆ.

ಈ ಮಧ್ಯೆ, 'ಸಚಿವ ಜೈರಾಂ ಮಾತುಗಳನ್ನು ಕೇಳಿಸಿಕೊಂಡ ಕಾಂಗ್ರೆಸ್ ಪಕ್ಷವು ಅವರು (ರಮೇಶ್) ಹಾಗೆ ಏಕೆ ಹೇಳಿದ್ದಾರೋ ಗೊತ್ತಾಗುತ್ತಿಲ್ಲ' ಎಂದು ಪ್ರತಿಕ್ರಿಯಿಸಿದೆ.

if-modi-fails-in-2014-his-story-will-be-over-cong-minister-jairam
Reuters ಸುದ್ದಿ ಸಂಸ್ಥೆಗೆ ಇತ್ತೀಚೆಗೆ ಸಂದರ್ಶನ ನೀಡಿರುವ ಸಚಿವ ಜೈರಾಂ ಅವರು '2014ರಲ್ಲಿ ಮೋದಿ ಸೋತರೆ ಆತನ ಕಥೆ ಮುಗಿದಂತೆಯೇ ಸರಿ. ಮೋದಿ ಬಲೂನು ಠುಸ್ಸೆನ್ನುತ್ತದೆ. ಅದೇ (ರಾಹುಲ್) ಗಾಂಧಿ ಸೋತರೆ ಅವರು ಕಳೆದುಕೊಳ್ಳುವುದು ಏನೂ ಇಲ್ಲ. ಅವರು ಚಾಲ್ತಿಯಲ್ಲಿರುತ್ತಾರೆ' ಎಂದು ಘೋಷಿಸಿದ್ದಾರೆ.

'ದೇಶಾದ್ಯಂತ ಮೋದಿ ಜ್ವರ ಕಂಡುಬರುತ್ತಿದೆಯೇ?' ಎಂದು ಕೇಳಿದ್ದಕ್ಕೆ 'ಅಂಥದ್ದೇನೂ ಇಲ್ಲ. ಕೊಚ್ಚಿಕೊಳ್ಳೋದ್ರಲ್ಲಿ ಬಿಜೆಪಿಯವರದ್ದು ಎತ್ತಿದ ಕೈ. 20 ವರ್ಷದಿಂದ ಅವರನ್ನು ಹತ್ತಿರದಿಂದ ನೋಡುತ್ತಾ ಬಂದಿದ್ದೇನೆ. ಕೊಚ್ಚಿಕೊಳ್ಳೋದ್ರಲ್ಲಿ ಅವರು ಇಡೀ ವಿಶ್ವದಲ್ಲೇ ಪಾಂಡಿತ್ಯ ಪಡೆದಿದ್ದಾರೆ' ಎಂದು ಸಚಿವ ಜೈರಾಂ ಪ್ರತಿಕ್ರಿಯಿಸಿದ್ದಾರೆ.

'ಬಿಜೆಪಿ ಗುಳ್ಳೆನರಿಯಿದ್ದಂತೆ. ಅದೇ ಕಾಂಗ್ರೆಸ್ ಪಕ್ಷ ಆನೆಯಂತೆ- ಅದು ಸಾವಕಾಶವಾಗಿ ನಿಶ್ಚಿತ ರೀತಿಯಲ್ಲಿ ಗುರಿ ತಲುಪುತ್ತದೆ' ಎಂದೂ ಸಚಿವ ಜೈರಾಂ ವರ್ಣಿಸಿದ್ದಾರೆ.

English summary
If Narendra Modi fails in 2014 his story will be over predicts cong minister Jairam Ramesh. In an interview to Reuters, Ramesh said: “If Modi loses 2014, his story is over, his balloon is burst. If (Rahul) Gandhi does not do well in 2014, he is still going to be around.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X