ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪೂರ್ಣ ಲಸಿಕೆ ಪಡೆದಿದ್ದರೆ, ದೇಶೀಯ ವಿಮಾನ ಪ್ರಯಾಣ ಸುಲಭ ಹೇಗೆ?

|
Google Oneindia Kannada News

ನವದೆಹಲಿ, ಜೂನ್ 08: ಸಂಪೂರ್ಣವಾಗಿ ಎರಡು ಡೋಸ್ ಕೊರೊನಾ ಲಸಿಕೆ ಪಡೆದ ವಿಮಾನ ಪ್ರಯಾಣಿಕರು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದೆಯೇ ದೇಶಾದ್ಯಂತ ಪ್ರಯಾಣ ನಡೆಸಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಹಾಗೆಯೇ ವಿಮಾನಯಾನ ಸಚಿವಾಲಯ, ಕೇಂದ್ರ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಗಳು ಈ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ಜೂನ್ 2ರಿಂದ ಭಾರತ ಜರ್ಮನಿ ನಡುವೆ ತಡೆ ರಹಿತ ಲುಫ್ತಾನ್ಸಾ ವಿಮಾನ ಸಂಚಾರಜೂನ್ 2ರಿಂದ ಭಾರತ ಜರ್ಮನಿ ನಡುವೆ ತಡೆ ರಹಿತ ಲುಫ್ತಾನ್ಸಾ ವಿಮಾನ ಸಂಚಾರ

ಇತ್ತೀಚೆಗಷ್ಟೇ, ಒಡಿಶಾ, ಮೇಘಾಲಯ ಹಾಗೂ ಮಹಾರಾಷ್ಟ್ರಕ್ಕೆ ಬರುವ ವಿಮಾನ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು, ಅದರಲ್ಲೂ 72 ಗಂಟೆಗಳಿಗಿಂತ ಮೊದಲು ಪಡೆದ ವರದಿಯಾಗಿರಬೇಕು ಎನ್ನುವ ನಿಯಮವನ್ನು ತಂದಿದೆ.

ಅಭಿವೃದ್ಧಿಹೊಂದಿರುವ ದೇಶದಗಳಿಗೆ ಹೋಲಿಕೆ ಮಾಡಿದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕಡಿಮೆ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ.

ಈ ಮೊದಲು ಶೇ.80ರಷ್ಟು ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಬಹುದು ಎಂದು ಹೇಳಲಾಗಿತ್ತು, ಮೇ 28ರಂದು ಕೇಂದ್ರ ಸರ್ಕಾರ ಹೇಳಿರುವಂತೆ ಕೇವಲ ಶೇ.50ರಷ್ಟು ಮಂದಿ ಮಾತ್ರ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ.

 ಎರಡು ಕೊರೊನಾ ಲಸಿಕೆ ಪಡೆದವರು ನೆಗೆಟಿವ್ ವರದಿ ನೀಡುವುದು ಬೇಡ

ಎರಡು ಕೊರೊನಾ ಲಸಿಕೆ ಪಡೆದವರು ನೆಗೆಟಿವ್ ವರದಿ ನೀಡುವುದು ಬೇಡ

ದೇಶೀಯ ವಿಮಾನಗಳು ಕೊರೊನಾ ಸೋಂಕಿನಿಂದಾಗಿ ನಷ್ಟವನ್ನು ಅನುಭವಿಸುತ್ತಿವೆ, ಹಲವು ರಾಜ್ಯಗಳು ತಮ್ಮ ರಾಜ್ಯಕ್ಕೆ ಬರುವ ಪ್ರಯಾಣಿಕರು ಆರ್‌ಟಿಪಿಸಿಆರ್ ವರದಿ ಹೊಂದಿರಬೇಕು ಎಂದಿರುವ ನಿಯಮದಿಂದ ಮತ್ತಷ್ಟು ನಷ್ಟ ಅನುಭವಿಸುತ್ತಿದ್ದೇವೆ. ಹೀಗಾಗಿ ಎರಡು ಲಸಿಕೆ ಪಡೆದವರು ನೆಗೆಟಿವ್ ವರದಿ ಇಲ್ಲದೆಯೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳುವ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿತ್ತು.

 ನಿತ್ಯ 3 ಲಕ್ಷ ಮಂದಿ ಪ್ರಯಾಣಿಸಿದ್ದರು

ನಿತ್ಯ 3 ಲಕ್ಷ ಮಂದಿ ಪ್ರಯಾಣಿಸಿದ್ದರು

ಫೆಬ್ರವರಿವರೆಗೆ ನಿತ್ಯ 3 ಲಕ್ಷ ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು, ಕೊರೊನಾ ಎರಡನೇ ಅಲೆ ಬಳಿಕ ನಿತ್ಯ 85 ಸಾವಿರ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.

 ಸಿಬ್ಬಂದಿ ಸ್ಯಾಲರಿ ಕಟ್

ಸಿಬ್ಬಂದಿ ಸ್ಯಾಲರಿ ಕಟ್

ನಿತ್ಯದ ಪ್ರಯಾಣಿಕರ ಸಂಖ್ಯೆ ಇಳಿಕೆ ಕಂಡ ಹಿನ್ನೆಲೆಯಲ್ಲಿ, ಬಹುತೇಕ ವಿಮಾನಯಾನ ಸಂಸ್ಥೆಗಳು ನಷ್ಟ ಅನುಭವಿಸುವಂತಾಗಿದೆ, ಹೀಗಾಗಿ ಸಿಬ್ಬಂದಿ ವೇತನವನ್ನು ಕಡಿತಗೊಳಿಸಿದ್ದಾರೆ.ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಸರ್ಕಾರ ಪ್ರಯಾಣಿಕರು ಎರಡು ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರೆ ಕೊರೊನಾ ನೆಗೆಟಿವ್ ವರದಿ ನೀಡುವ ಅಗತ್ಯವಿಲ್ಲ ಎಂದು ಹೇಳಿದೆ.

 ನಮಗೂ ಇದೇ ರೀತಿಯ ನಿಯಮಗಳು ಅನ್ವಯವಾಗಲಿ

ನಮಗೂ ಇದೇ ರೀತಿಯ ನಿಯಮಗಳು ಅನ್ವಯವಾಗಲಿ

ಸರ್ಕಾರ ಈ ಕ್ರಮದ ಕುರಿತು ಅಂತಾರಾಷ್ಟ್ರೀಯ ಪ್ರಯಾಣಿಕರು ಕೂಡ ಧ್ವನಿ ಎತ್ತಿದ್ದಾರೆ, ಅವರಿಗೆ ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಇಲ್ಲದೆ ಪ್ರಯಾಣಿಸಬಹುದು ಎಂದಾದರೆ ನಾಮಗೆ ಆ ನಿಯಮ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

English summary
The Centre is considering a mechanism to allow air passengers who have got both doses of the Covid-19 vaccine to travel within the country without a negative test report, senior government officials said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X