ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛೋಟಾ ಸತ್ತಿದ್ದು ನಿಜವಾದ್ರೆ, ಮಾಧ್ಯಮಗಳಿಗೆ ಕರೆ ಮಾಡಿದ್ದು ಯಾರು?

By ವಿಕಾಸ್ ನಂಜಪ್ಪ
|
Google Oneindia Kannada News

ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಛೋಟಾ ಶಕೀಲ್ ಸತ್ತಿದ್ದಾನೆ. ಶಕೀಲ್ ನ ಸಂಬಂಧಿ ಹಾಗೂ ಗ್ಯಾಂಗ್ ಸದಸ್ಯನ ನಡುವಣ ಸಂಭಾಷಣೆ ಕೇಳಿ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ದಾವೂದ್ ಹೋಟೆಲ್ ಖರೀದಿಸಲು ಮುಂದಾದ ಹಿಂದೂ ಮುಖಂಡ!
ಆದರೆ, ಇದು ಅರ್ಧಸತ್ಯ ಮಾತ್ರ. ಒಂದು ವೇಳೆ ಛೋಟಾ ಸತ್ತಿದ್ದು ನಿಜವಾಗಿದ್ರೆ, ಮಾಧ್ಯಮಗಳಿಗೆ ಕರೆ ಮಾಡಿದ್ದು ಯಾರು? ಏನಿದು ಗೊಂದಲ? ವಿವರಗಳಿಗಾಗಿ ಮುಂದೆ ಓದಿ..

ಛೋಟಾ ಶಕೀಲ್ ಸತ್ತಿದ್ದಾನೆ ಎಂದು ಬಂದಿರುವ ಸುದ್ದಿಯನ್ನು ಯಾರೂ ದೃಢಪಡಿಸಿಲ್ಲ. ಸತ್ಯಾಸತ್ಯತೆ ಬಗ್ಗೆ ತನಿಖೆ ಆಗಬೇಕಿದೆ ಎಂದು ಮುಂಬೈ ಪೊಲೀಸರು ಹಾಗೂ NSCS ಅಧಿಕಾರಿಗಳು ಹೇಳಿದ್ದಾರೆ.

ದಾವೂದ್ ತಮ್ಮ ಇಕ್ಬಾಲ್ ಬಿಚ್ಚಿಟ್ಟ ರಹಸ್ಯಗಳ ವಿವರದಾವೂದ್ ತಮ್ಮ ಇಕ್ಬಾಲ್ ಬಿಚ್ಚಿಟ್ಟ ರಹಸ್ಯಗಳ ವಿವರ

ಛೋಟಾ ಹೇಳಿಕೆ: ನಾನು ಡಿ ಗ್ಯಾಂಗ್ ಜತೆ ಸಂಬಂಧ ಕಡಿದುಕೊಂಡಿಲ್ಲ. 'ನಾನು ಭಾಯ್ ಜತೆಗಿದ್ದೇನೆ, ದಾವೂದ್ ತಮ್ಮ ಅನೀಸ್ ಜತೆ ಸಂಬಂಧ ಹಳಸಿದೆ' ಎಂಬುದು ಸುಳ್ಳು ಎಂದು ಹೇಳಿದ್ದ.

80ರ ದಶಕದಿಂದ ದಾವೂದ್ ಹಾಗೂ ಶಕೀಲ್ ಕರಾಚಿಯಲ್ಲಿ ನೆಲೆಸಿದ್ದಾರೆ.ಡಿ ಕಂಪನಿ ನಡೆಸುವ ವಿಚಾರದಲ್ಲಿ ದಾವೂದ್ ಅವರ ಸೋದರ ಅನೀಸ್ ಹಾಗೂ ಛೋಟಾ ಶಕೀಲ್ ನಡುವೆ ವೈಮನಸ್ಯ ಉಂಟಾಗಿತ್ತು.

ಈ ವಿಷಯದಲ್ಲಿ ದಾವೂದ್ ಕೂಡಾ ಅನೀಸ್ ಪರ ನಿಂತಿದ್ದು, ಶಕೀಲ್ ನನ್ನು ಕೆರಳಿಸಿತ್ತು. ಹೀಗಾಗಿ, ಡಿ ಕಂಪನಿ ತೊರೆದು, ಪೂರ್ವ ಏಷ್ಯಾ ದೇಶಗಳಲ್ಲಿ ಹೊಸ ನೆಲೆ ಕಂಡುಕೊಳ್ಳಲು ಶಕೀಲ್ ಯತ್ನಿಸಿದ್ದಾನೆ ಎಂಬ ಸುದ್ದಿ ಹಬ್ಬಿತ್ತು.

ಹೃದಯಾಘಾತದಿಂದ ಮೃತಪಟ್ಟ ಸುದ್ದಿ

ಹೃದಯಾಘಾತದಿಂದ ಮೃತಪಟ್ಟ ಸುದ್ದಿ

ವರ್ಷನ್ 1: 57 ವರ್ಷದ ಚೋಟಾ ಶಕೀಲ್ ಜನವರಿ 6ರಂದು ಇಸ್ಲಾಮಾಬಾದ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಆವೃತ್ತಿಯ ಕಥೆ ಹಬ್ಬಿದೆ. ಶಕೀಲ್ ಗೆ ಹೃದಯಾಘಾತವಾದ ಕೂಡಲೇ ರಾವಲ್ಪಿಂಡಿಯ ಕಂಬೈನ್ಡ್ ಮೆಡಿಕಲ್ ಆಸ್ಪತ್ರೆಗೆ ಕರೆತರಲಾಯ್ತು. ಆದರೆ, ಆಸ್ಪತ್ರೆ ತಲುಪುವ ಮೊದಲೇ ಆತ ಮೃತಪಟ್ಟಿದ್ದ ಎಂದು ಹೇಳಲಾಗಿದೆ.

ಪಾಕಿಸ್ತಾನದ ಐಎಸ್ಐನಿಂದಲೇ ಶಕೀಲ್ ಹತ್ಯೆ

ಪಾಕಿಸ್ತಾನದ ಐಎಸ್ಐನಿಂದಲೇ ಶಕೀಲ್ ಹತ್ಯೆ

ವರ್ಷನ್ 2: ಪಾಕಿಸ್ತಾನದ ಐಎಸ್ಐ ಜತೆ ಶಕೀಲ್ ಸಂಬಂಧ ಹಳಸಿರುವುದರಿಂದ ಶಕೀಲ್ ನನ್ನು ಹೊಸಕಿ ಹಾಕಲಾಗಿದೆಯಂತೆ. ಎರಡು ದಿನ ಆತನ ಶವವನ್ನು ಶವಾಗಾರದಲ್ಲಿ ಇಡಲಾಗಿತ್ತು. ನಂತರ ವಿಮಾನದ ಮೂಲಕ ಕರಾಚಿಗೆ ಕಳುಹಿಸಲಾಗಿದೆ. ಡಿಫೆನ್ಸ್ ಹೌಸಿಂಗ್ ಅಥಾರಿಟಿಯ ಸ್ಮಶಾನದಲ್ಲೇ ದಫನ್ ಮಾಡಲಾಗಿದೆ ಎಂಬ ಸುದ್ದಿಯಿದೆ.

ದಾವೂದ್ ಗ್ಯಾಂಗಿನಿಂದ ದೂರ

ದಾವೂದ್ ಗ್ಯಾಂಗಿನಿಂದ ದೂರ

ದಾವೂದ್ ಗ್ಯಾಂಗಿನಿಂದ ದೂರ ಸುದ್ದಿ ಹಬ್ಬಿದ್ದು ಏಕೆ?: ಶಕೀಲ್ ನ ಎರಡನೇ ಪತ್ನಿ ಆಯೇಶಾ ಹಾಗೂ ಕುಟುಂಬದವರೆಲ್ಲ ಮನೆ ಖಾಲಿ ಮಾಡಿಸಿ ಲಾಹೋರ್ ನ ಐಎಸ್ಐ ಹೌಸ್ ಗೆ ರವಾನೆಯಾಗಿದ್ದಾರೆ. ಶಕೀಲ್ ಗೆ ಇಬ್ಬರು ಪತ್ನಿಯರು ಹಾಗೂ ಮೂವರು ಮಕ್ಕಳಿದ್ದಾರೆ. ದಾವೂದ್ ಗ್ಯಾಂಗ್ ಜತೆ ಕಿತ್ತಾಡಿಕೊಂಡ ಬಳಿಕ ಕರಾಚಿ ತೊರೆದ ಬಳಿಕ ಲಾಹೋರ್ ನಲ್ಲಿದ್ದಾನೆ ಎಂಬ ಸುದ್ದಿ ಬಂದಿತ್ತು.

ಛೋಟಾ ಧ್ವನಿ ಮಿಮಿಕ್ರಿಯೇ?

ಛೋಟಾ ಧ್ವನಿ ಮಿಮಿಕ್ರಿಯೇ?

ಛೋಟಾ ಶಕೀಲ್ ನ ಆಪ್ತ ರಹೀಮ್ ಮರ್ಚಂಟ್ ಎಂಬಾತ ಒಳ್ಳೆ ಮಿಮಿಕ್ರಿ ಪಟುವಾಗಿದ್ದಾನೆ. ಡಿ ಕಂಪನಿ ಪರವಾಗಿ ಶಕೀಲ್ ಧ್ವನಿ ನಕಲು ಮಾಡಿ ಅನೇಕ ಬಾರಿ ಬೆದರಿಕೆ ಕರೆ ಮಾಡಿದ್ದಾನೆ. ಮಾಧ್ಯಮಗಳ ಜತೆ ಮಾತನಾಡಿದ್ದಾನೆ. ಒಂದು ಮೂಲಗಳ ಪ್ರಕಾರ ಯುಎಇನಿಂದ ಪಾಕಿಸ್ತಾನಕ್ಕೆ ಐಎಸ್ಐ ಆತನನ್ನು ಕರೆ ತಂದ ಬಳಿಕ, ಶಕೀಲ್ ಯಾವುದೇ ಮಾಧ್ಯಮಗಳ ಜತೆ ಸಂಪರ್ಕ ಹೊಂದಿಲ್ಲ ಎಂಬ ಸುದ್ದಿಯಿದೆ.

English summary
There are reports doing the rounds that Dawood Ibrahim's closest aide Chhota Shakeel is dead. A report in the Hindustan Times said that Shakeel had died in January and there were two versions to the story.If Dawood aide Chhota Shakeel is dead, then who has been speaking to the media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X