ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19: ಸಣ್ಣ ಪ್ರಮಾಣದ ಲಕ್ಷಣಗಳಿದ್ದರೆ ಏನು ಮಾಡಬೇಕು, ತಜ್ಞರು ಹೇಳುವುದೇನು?

|
Google Oneindia Kannada News

ನವದೆಹಲಿ, ಏಪ್ರಿಲ್ 22: ಕೊರೊನಾ ಸೋಂಕು ತಗುಲಿದ ಪ್ರತಿಯೊಬ್ಬರಿಗೂ ಲಕ್ಷಣಗಳು ತೀವ್ರವಾಗಿರುವುದಿಲ್ಲ. ಕೆಲವರಿಗೆ ಸಣ್ಣ ಪ್ರಮಾಣದಲ್ಲಿ ಲಕ್ಷಣಗಳಿರುತ್ತವೆ. ಅಂಥವರು ಏನು ಮಾಡಬೇಕು ಎನ್ನುವ ಕುರಿತು ತಜ್ಞರು ಸಲಹೆ ನೀಡಿದ್ದಾರೆ.

ದೇಶದಲ್ಲಿ ಕೊರೊನಾ ತಾಂಡವವಾಡುತ್ತಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಸೋಂಕು, ಅನುಸರಿಸಬೇಕಾದ ಕ್ರಮಗಳು, ಶಿಷ್ಟಾಚಾರಗಳು, ಚಿಕಿತ್ಸೆ ಬಗ್ಗೆ ಸಾಕಷ್ಟು ಮಾಹಿತಿಗಳು, ವಿಷಯಗಳು ಹರಿದಾಡುತ್ತಿವೆ.

ಕೊರೊನಾ ಸೋಂಕಿತರ ಶವವನ್ನು ಉಚಿತವಾಗಿ ಸ್ಮಶಾನಕ್ಕೆ ಕೊಂಡೊಯ್ಯುವ ಮಹಿಳೆಕೊರೊನಾ ಸೋಂಕಿತರ ಶವವನ್ನು ಉಚಿತವಾಗಿ ಸ್ಮಶಾನಕ್ಕೆ ಕೊಂಡೊಯ್ಯುವ ಮಹಿಳೆ

ಕೊರೊನಾ ಬಂದಾಗ ಮನೆಯಲ್ಲಿದ್ದು ಕ್ವಾರಂಟೈನ್ ಆಗಬೇಕೆ ಅಥವಾ ಆಸ್ಪತ್ರೆಗೆ ದಾಖಲಾಗಬೇಕೆ ಎಂದು ಹೇಗೆ ನಿರ್ಧರಿಸುವುದು ಎಂದು ಕೇಳಿದರೆ ಡಾ ಜಾನ್ ಹೇಳುವುದು ಹೀಗೆ: ಕೊರೊನಾದ ಪ್ಯಾರಮೀಟರ್ ಒಂದನೇ ಅಲೆಗೂ ಎರಡನೇ ಅಲೆಗೂ ಹೆಚ್ಚು ವ್ಯತ್ಯಾಸವಿಲ್ಲ.

ಸೋಂಕಿನ ಲಕ್ಷಣಗಳು

ಸೋಂಕಿನ ಲಕ್ಷಣಗಳು

ಗಂಟಲು ತುರಿಕೆ, ಕೆಮ್ಮು, ಜ್ವರ, ಮೂಗಿನಲ್ಲಿ ಸೋರಿಕೆ, ತಲೆನೋವು, ಆಹಾರ ಪದಾರ್ಥದ ವಾಸನೆ ಕಳೆದುಕೊಳ್ಳುವುದು ಇವೆಲ್ಲ ಕೋವಿಡ್-19 ಸೋಂಕಿನ ಲಕ್ಷಣ. ಹೀಗೆ ಆರೋಗ್ಯದಲ್ಲಿ ವ್ಯತ್ಯಾಸವಾದಾಗ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಕೋವಿಡ್ ಪಾಸಿಟಿವ್ ಬಂದರೆ ಮನೆಯಲ್ಲಿಯೇ ಐಸೊಲೇಟ್ ಆಗಿರಿ ಎಂದಿದ್ದಾರೆ.

ಆಕ್ಸಿಜನ್ ಕೊರತೆ

ಆಕ್ಸಿಜನ್ ಕೊರತೆ

ದೇಶದ ಅನೇಕ ರಾಜ್ಯಗಳಲ್ಲಿ ಮಹಾನಗರಗಳಲ್ಲಿ ಆಸ್ಪತ್ರೆ ಬೆಡ್ ಮತ್ತು ಆಕ್ಸಿಜನ್ ಕೊರತೆಯುಂಟಾಗಿದೆ. ಈ ಸಂದರ್ಭದಲ್ಲಿ ಸೋಂಕು ತಗುಲಿದ ತಕ್ಷಣ ಆಸ್ಪತ್ರೆಗೆ ಹೋಗಿ ದಾಖಲಾಗಬೇಕಿಲ್ಲ. ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಸೂಕ್ತ ಸೂಚನೆಗಳನ್ನು ಪಾಲಿಸಿದರೆ ಗುಣಮುಖರಾಗಬಹುದು ಎಂದು ವೈದ್ಯರು ಹೇಳುತ್ತಾರೆ.

ದ್ರವ ಪದಾರ್ಥ ಸೇವಿಸಿ

ದ್ರವ ಪದಾರ್ಥ ಸೇವಿಸಿ

ಸಾಕಷ್ಟು ದ್ರವ ಪದಾರ್ಥಗಳನ್ನು ಸೇವಿಸಿ ವಿಶ್ರಾಂತಿ ಪಡೆಯಿರಿ. ಪಲ್ಸ್ ಆಕ್ಸಿಮೀಟರ್ ಖರೀದಿಸಿ ದೇಹದ ಉಷ್ಣಾಂಶ ಪರೀಕ್ಷಿಸುತ್ತಿರಿ. ಆಕ್ಸಿಜನ್ ಮಟ್ಟ 95ಕ್ಕಿಂತ ಹೆಚ್ಚಿದ್ದರೆ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದಾರೆ.

ವೆಲ್ಲೂರ್‌ನ ಸಿಎಮ್‌ಸಿಯ ವೈರಾಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಜಾಕೋಬ್ ಜಾನ್ ಮತ್ತು ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಬೆಂಗಳೂರಿನ ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಪ್ರಾಧ್ಯಾಪಕ ಡಾ.ಗಿರಿಧರ ಆರ್ ಬಾಬು ಅವರು ಕೊರೊನಾ ಸೋಂಕಿನಿಂದ ಸುರಕ್ಷಿತವಾಗಿರಲು ರೋಗಲಕ್ಷಣ ಹೊಂದಿರುವವರು ಯಾವ ರೀತಿ ಜಾಗ್ರತೆ ವಹಿಸಬೇಕು ಎಂದು ಹೇಳಿದ್ದಾರೆ.

ಮನೆಯಲ್ಲಿಯೇ ಇರಿ

ಮನೆಯಲ್ಲಿಯೇ ಇರಿ

ವ್ಯಕ್ತಿಯು ಮೊದಲು ಪ್ರಾಯೋಗಿಕವಾಗಿ ಸದೃಢವಾಗಿರಬೇಕು ಮತ್ತು ರೋಗಲಕ್ಷಣ ಇಲ್ಲದಿದ್ದರೆ, 100.4 ಡಿಗ್ರಿಗಿಂತ ಕಡಿಮೆ ಸೌಮ್ಯ ಜ್ವರ ಮತ್ತು 95ಕ್ಕಿಂತ ಹೆಚ್ಚಿನ ಆಮ್ಲಜನಕ ಮಟ್ಟವಿರಬೇಕು. ಸರಿಯಾದ ಕ್ಲಿನಿಕಲ್ ಮೌಲ್ಯಮಾಪನದ ನಂತರ ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗಗಳು, ದೀರ್ಘಕಾಲದ ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ ಕಾಯಿಲೆ, ಸೆರೆಬ್ರೊವಾಸ್ಕುಲರ್ ಕಾಯಿಲೆ ಮುಂತಾದ ಕೊಮೊರ್ಬಿಡಿಟಿ ಹೊಂದಿರುವ ಹಿರಿಯ ನಾಗರಿಕರು ಪ್ರತ್ಯೇಕ ಕೋಣೆಯಲ್ಲಿ ಇರಬೇಕು.

ಮನೆಯಲ್ಲಿಯೇ ಐಸೊಲೇಟ್ ಆಗಿರಲು ಸೂಕ್ತ ಸೌಲಭ್ಯ ಮನೆಯಲ್ಲಿರಬೇಕು. ಕೊರೊನಾ ಸೋಂಕಿತರಿಗೆ ಹಗಲು ರಾತ್ರಿ 24 ಗಂಟೆ ನಿಗಾ ವಹಿಸಬೇಕಾಗುತ್ತದೆ.

English summary
With SOS messages flooding social media networks seeking assistance for hospital beds and oxygen for Covid patients in the wake of the unprecedented surge of infections during its ongoing second wave, it is important to realise that not all patients require hospitalisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X