ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚಾರವಾದಿಗಳ ಬಂಧನ: ಮತ್ತೆ ಗೃಹಬಂಧನ ಅವಧಿ ವಿಸ್ತರಿಸಿದ ಸುಪ್ರೀಂ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 17: ನಿಷೇಧಿತ ಮಾವೋವಾದಿ ಸಂಘಟನೆಯೊಂದಿಗೆ ನಂಟು, ಮೋದಿ ಹತ್ಯೆ ಸಂಚು, ಭೀಮಾಕೊರೆಗಾಂವ್ ಹಿಂಸೆಗೆ ಕುಮ್ಮಕ್ಕು ಆರೋಪದಡಿ ಪುಣೆ ಪೊಲೀಸರು ಬಂಧಿಸಿದ್ದ ವಿಚಾರವಾದಿಗಳ ಗೃಹ ಬಂಧನ ಅವಧಿಯನ್ನು ಸುಪ್ರೀಂಕೋರ್ಟ್ ಮತ್ತೆ ವಿಸ್ತರಿಸಿದೆ.

'ನಗರ ನಕ್ಸಲ'ರಿಗೆ ಬಹಿರಂಗ ಬೆಂಬಲ ನೀಡಿದ ನಿಜ ನಕ್ಸಲರು!'ನಗರ ನಕ್ಸಲ'ರಿಗೆ ಬಹಿರಂಗ ಬೆಂಬಲ ನೀಡಿದ ನಿಜ ನಕ್ಸಲರು!

ಆಗಸ್ಟ್ 28 ರಂದು ಪುಣೆ ಪೊಲೀಸರು ಆಂಧ್ರಪ್ರದೇಶದ ಕ್ರಾಂತಿಕಾರಿ ಕವಿ ವರವರ ರಾವ್. ವಕೀಲೆ, ನಾಗರೀಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರಧ್ವಜ್. ವಿರ್ನೋನ್ ಗೋನ್ಸಾಲ್ವೀಸ್, ಅರುಣ್ ಫರೇರಿಯಾ, ಗೌತಮ್ ನಾಲ್ವಾಕ್ಕಾ ಅವರುಗಳನ್ನು ಪೊಲೀಸರು ಬಂಧಿಸಿದ್ದರು.

ಗೃಹ ಬಂಧನದಲ್ಲಿದ್ದ ವಿಚಾರವಾದಿಗಳ ಬಂಧನ ಅವಧಿ ವಿಸ್ತರಿಸಿದ ನ್ಯಾಯಾಲಯಗೃಹ ಬಂಧನದಲ್ಲಿದ್ದ ವಿಚಾರವಾದಿಗಳ ಬಂಧನ ಅವಧಿ ವಿಸ್ತರಿಸಿದ ನ್ಯಾಯಾಲಯ

ಬಾಂಬೆ ಹೈಕೋರ್ಟ್‌ ಎಲ್ಲ ಆರೋಪಿಗಳಿಗೆ ಮೊದಲಿಗೆ ಸೆಪ್ಟೆಂಬರ್ 6ರವರೆಗೆ ಗೃಹ ಬಂಧನದಲ್ಲಿರಿಸಿ ಆದೇಶ ಹೊರಡಿಸಿತ್ತು. ಜೊತೆಗೆ ಅಂದೇ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿತ್ತು. ಸೆಪ್ಟೆಂಬರ್ 6ರಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ವಿಚಾರವಾದಿಗಳ ಗೃಹ ಬಂಧನವನ್ನು ಸೆಪ್ಟೆಂಬರ್ 12ರ ವರೆಗೆ ವಿಸ್ತರಿಸಿತು. ಈಗ ಮತ್ತೆ ಸೆಪ್ಟೆಂಬರ್ 19ರ ವರೆಗೆ ಬಂಧನ ಅವಧಿ ವಿಸ್ತರಿಸಿದೆ.

ಅಗತ್ಯ ಬಂದರೆ ಮಧ್ಯಪ್ರವೇಶ ಮಾಡ್ತೀವಿ: ಕೇಂದ್ರ ಸರಕಾರಕ್ಕೆ 'ಸುಪ್ರೀಂ'ಅಗತ್ಯ ಬಂದರೆ ಮಧ್ಯಪ್ರವೇಶ ಮಾಡ್ತೀವಿ: ಕೇಂದ್ರ ಸರಕಾರಕ್ಕೆ 'ಸುಪ್ರೀಂ'

Ideologists house arrest continued till September 19

ಸೆಪ್ಟೆಂಬರ್ 19 ರಂದು ಅಂತಿಮ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಕೋರ್ಟ್‌ ಮುಂದೆ ಅಂದು ಹಾಜರುಪಡಿಸುವುದಾಗಿಯೂ ಹೇಳಲಾಗಿದೆ. ಹಾಗಾಗಿ ವಿಚಾರವಾದಿಗಳ ಬಂಧನದ ಪ್ರಕರಣ ಸೆಪ್ಟೆಂಬರ್ 19ರಂದು ಒಂದು ಹಂತಕ್ಕೆ ಬಂದು ನಿಲ್ಲಲಿದೆ.

English summary
Ideologist house arrest continued till September 19 orders Supreme court today. Police said court that they will submit all the related evidence to the court on September 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X