ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ICSE, ISC ಪರೀಕ್ಷೆ ಫಲಿತಾಂಶ, 98.54% ತೇರ್ಗಡೆ

|
Google Oneindia Kannada News

ನವದೆಹಲಿ, ಮೇ 07: ಸಿಬಿಎಸ್ಇ ಪರೀಕ್ಷೆ ಫಲಿತಾಂಶ ಪ್ರಕಟವಾದ ನಂತರ ಇಂದು(ಮೇ 07) ಐಸಿಎಸ್ಇ ಮತ್ತು ಐಎಸ್ಸಿ ಪಠ್ಯಕ್ರಮದ 10 ಮತ್ತು 12ನೇ ತರಗತಿ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದೆ.

ಐಸಿಎಸ್ಇ 10ನೇ ಕ್ಲಾಸ್ ಪರೀಕ್ಷೆ ಫಲಿತಾಂಶದಂತೆ ಶೇ. 98.54 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 12ನೇ ತರಗತಿಯಲ್ಲಿ 96.52% ಫಲಿತಾಂಶ ಬಂದಿದೆ. ದೇಶಾದ್ಯಂತ ಒಟ್ಟು 1.8 ಲಕ್ಷ ವಿದ್ಯಾರ್ಥಿಗಳು 12ನೇ ಐಸಿಎಸ್​ಇ ಪರೀಕ್ಷೆ ಬರೆದಿದ್ದರು.

ಸಿಬಿಎಸ್ಇ ಕ್ಲಾಸ್ 10 ಫಲಿತಾಂಶ: ಅಗ್ರಸ್ಥಾನ ಹಂಚಿಕೊಂಡ 13 ಮಂದಿಸಿಬಿಎಸ್ಇ ಕ್ಲಾಸ್ 10 ಫಲಿತಾಂಶ: ಅಗ್ರಸ್ಥಾನ ಹಂಚಿಕೊಂಡ 13 ಮಂದಿ

ಬೆಂಗಳೂರಿನ ವಿಭಾ ಸ್ವಾಮಿನಾಥನ್ ಅವರು 10ನೇ ತರಗತಿ ಐಸಿಎಸ್ಇ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದು ಅಗ್ರಸ್ಥಾನ ಪಡೆದಿದ್ದರೆ, ಕೋಲ್ಕತಾದ ದೇವಾಂಗ್ ಕುಮಾರ್ ಅಗರ್ವಾಲ್ ಕೂಡಾ 100% ಗಳಿಸಿ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ.

ICSE, ISC results 2019 declared, pass percentage is 98.54

ಐಸಿಎಸ್ಇ ಪರೀಕ್ಷೆ ಪ್ರದೇಶವಾರು ಫಲಿತಾಂಶ:
* ಪಶ್ಚಿಮ ವಲಯ : 99.76%,
* ದಕ್ಷಿಣ ವಲಯ : 99.73%
* ಪಶ್ಚಿಮ ವಲಯ: 98.13 %
* ಪೂರ್ವ ವಲಯ : 98.06%

ಐಎಸ್ 12ನೇ ತರಗತಿ ಪರೀಕ್ಷೆಯನ್ನು ಒಟ್ಟು 86,713 ವಿದ್ಯಾರ್ಥಿಗಳು ಬರೆದಿದ್ದರು. ಈ ಪೈಕಿ ಶೇ. 96.52ರಷ್ಟು ಮಂದಿ ಪಾಸಾಗಿದ್ದಾರೆ. ಐಎಸ್ಸಿ 10ನೇ ತರಗತಿ ಪರೀಕ್ಷೆಗಳ ಫಲಿತಾಂಶ ಮೇ 11ರಂದು ಪ್ರಕಟವಾಗಲಿದೆ.

ಸಿಬಿಎಸ್ಇ ಪರೀಕ್ಷೆ ಫಲಿತಾಂಶ ಪ್ರಕಟ, ಹುಡುಗಿಯರೇ ಮೇಲುಗೈ ಸಿಬಿಎಸ್ಇ ಪರೀಕ್ಷೆ ಫಲಿತಾಂಶ ಪ್ರಕಟ, ಹುಡುಗಿಯರೇ ಮೇಲುಗೈ

ಫಲಿತಾಂಶ ನೋಡುವುದು ಹೇಗೆ?
* cice.org ಅಥವಾ examresults.net ವೆಬ್​ಸೈಟ್​ಗೆ ಭೇಟಿ ನೀಡಿ.
* ಫಲಿತಾಂಶ 2019ರ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಪಠ್ಯಕ್ರಮ ವಿಷಯ ಆಯ್ಕೆ ಮಾಡಿಕೊಳ್ಳಿ
* ಪ್ರವೇಶ ಸಂಖ್ಯೆ ಇತ್ಯಾದಿ ವಿವರಗಳನ್ನು ನೀಡಿ
* 'Submit' ಕ್ಲಿಕ್ ಮಾಡಿ. ಫಲಿತಾಂಶ ವಿವರ ಪಡೆಯಿರಿ, ನಂತರ ಪ್ರಿಂಟ್ ಔಟ್ ಪಡೆಯಿರಿ.

English summary
The ICSE, ISC results 2019 have been declared. The results once declared will be available on the official website. The total pass percentage of the ICSE exam this year is 98.54 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X