ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜ್ ಮಹಲ್ ಸೌಂದರ್ಯ ರಕ್ಷಣೆಗೆ ಪಾಕಿಸ್ತಾನದ ಮಣ್ಣು

By Mahesh
|
Google Oneindia Kannada News

ಆಗ್ರಾ, ಜೂ.9: ಜಗತ್ ವಿಖ್ಯಾತ ಪ್ರೇಮ ಸೌಧದ ಪರಿಶುದ್ಧ ಬಿಳುಪನ್ನು ಕಾಯ್ದುಕೊಳ್ಳುವ ಪ್ರಕ್ರಿಯೆ ಮತ್ತೊಮ್ಮೆ ಆರಂಭವಾಗಿದೆ. ಪರಿಸರ ಮಾಲಿನ್ಯ್ತದ ಬಿಸಿ ಪ್ರೇಮ ಸೌಧಕ್ಕೆ ತಟ್ಟಿದ್ದು, ಹಳದಿ ಬಣ್ಣಕ್ಕೆ ತಿರುಗಿರುವ ತಾಜ್ ಮಹಲ್ ಈಗ ಪಾಕಿಸ್ತಾನ ಮಣ್ಣಿನ ಲೇಪಕ್ಕೆ ಸಿದ್ಧಗೊಳ್ಳುತ್ತಿದೆ.

ವಾಯುಮಾಲಿನ್ಯ ವಿಪರೀತದಿಂದಾಗಿ ತಾಜ್ ಮಹಲ್ ಶಿಲೆಗಳು ತನ್ನ ನೈಜ ಬಣ್ಣ ಕಳೆದುಕೊಳ್ಳುತ್ತಿದ್ದು, ಪ್ರವಾಸಿಗರ ಕಣ್ಮನ ಸೆಳೆಯುವ ಪ್ರೇಮ ಸೌಧ ಮಂಕಾಗಿದೆ. ಹೀಗಾಗಿ ಭಾರತೀಯ ಪುರಾತತ್ವ ಇಲಾಖೆ (ಎಸ್‌ಎಸ್‌ಐ) ತಾಜ್‌ಮಹಲ್‌ಗೆ ಮುಲ್ತಾನಿನ ಮಣ್ಣು ಬಳಿಯಲು ಯೋಜಿಸಿದ್ದಾರೆ.

ತಾಜ್‌ಮಹಲ್‌ನ ಶಿಲೆಗಳಿಗೆ ಮುಲ್ತಾನಿ ಮಿಟ್ಟಿಯನ್ನು ಹಚ್ಚಿ, ಹಳದಿ ಬಣ್ಣವನ್ನು ತೆಗೆಯಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ತಾಜ್ ಮಹಲ್ ಸುತ್ತ ಮುತ್ತಲಿನ ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ವಾತಾವರಣ ಶುದ್ಧಿಗೊಳಿಸಲು ಪವಿತ್ರ ಸಸ್ಯ ಎನಿಸಿರುವ ತುಳಸಿಯನ್ನು ಬಳಸಲಾಗಿತ್ತು.

ಇಷ್ಟಕ್ಕೂ ಮುಲ್ತಾನ್ ಮಿಟ್ಟಿ ಬಳಕೆ ಏಕೆ? ವಾಯು ಮಾಲಿನ್ಯ ತಡೆಗಟ್ಟಲು ಸಾಧ್ಯವಿಲ್ಲವೇ? ತಾಜ್ ಮಹಲ್ ಕಲೆ ಹೋಗಲಾಡಿಸಲು ಸಾಧ್ಯವೇ? ಮುಂದೆ ಓದಿ...[ಚಿತ್ರಗಳು: ಪಿಟಿಐ]

ಮುಮ್ತಾಜಳ ರಕ್ಷಣೆಗೆ ಸಾವಿರಾರು ತುಳಸಿಯರು

ಮುಮ್ತಾಜಳ ರಕ್ಷಣೆಗೆ ಸಾವಿರಾರು ತುಳಸಿಯರು

ಈ ಹಿಂದೆ ಮೊಘಲ್ ಬಾದಷಹ ಷಹಜಹಾನನ ಅಮರಪ್ರೇಮಕ್ಕೆ ಸಾಕ್ಷಿಯಾಗಿ ನಿಂತಿರುವ ಅದ್ಭುತ ತಾಜ್ ಮಹಲ್ ದಿನೇದಿನೇ ಸೊರಗುತ್ತಿದ್ದು ಆಕೆಯ ರಕ್ಷಣೆಗೆ ಪತಿವ್ರತಾ ಶಿರೋಮಣಿ ತುಳಸಿಯ ನೆರವನ್ನು ಕೋರಲಾಗಿತ್ತು. ಸಾವಿರಾರು ತುಳಸಿ ಗಿಡಗಳನ್ನು ನೆಟ್ಟು ಸೌಂದರ್ಯ ಸಂರಕ್ಷಣೆ ಕಾರ್ಯ ಭರದಿಂದ ಸಾಗಿತ್ತು. ಅದರೆ, ತಕ್ಕ ಪ್ರತಿಫಲ ಸಿಕ್ಕಿರಲಿಲ್ಲ. ವಿವರ ಇಲ್ಲಿ ಓದಿ

ಇಷ್ಟಕ್ಕೂ ಮುಲ್ತಾನ್ ಮಿಟ್ಟಿ ಬಳಕೆ ಏಕೆ?

ಇಷ್ಟಕ್ಕೂ ಮುಲ್ತಾನ್ ಮಿಟ್ಟಿ ಬಳಕೆ ಏಕೆ?

ಪಾಕಿಸ್ತಾನದಲ್ಲಿರುವ ಮುಲ್ತಾನ್ ಊರಿನಲ್ಲಿ ಸಿಗುವ ಮಣ್ಣಿನಲ್ಲಿ ಸುಣ್ಣದಂಶವಿದ್ದು ಇದು ಮುಖದ ಸೌಂದರ್ಯ ಕಾಪಾಡುತ್ತದೆ. ಭಾರತ ಸೇರಿದಂತೆ ಅನೇಕ ಕಡೆ ಮುಲ್ತಾನಿ ಮಿಟ್ಟಿ ಮಹಿಳೆಯ ಫೇಸ್ ಪ್ಯಾಕ್ ಪದಾರ್ಥವಾಗಿ ಬಳಕೆಯಾಗುತ್ತಿದೆ.

ಈಗ ತಾಜಮಹಲ್ ನ ಗೋಡೆಗಳಲ್ಲಿರುವ ಹಳದಿ ಬಣ್ಣವನ್ನು ಹೋಗಲಾಡಿಸಲು ಮುಲ್ತಾನಿ ಮಿಟ್ಟಿ ಹಚ್ಚಲು ನಿರ್ಧರಿಸಲಾಗಿದೆ. ಬಳಿಕ ಡಿಸ್ಟಿಲ್ಡ್‌ ವಾಟರ್‌ನಿಂದ ಪ್ರೇಮಸೌಧದ ಗೋಡೆಯನ್ನು ತೊಳೆಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಮುಲ್ತಾನಿ ಮಿಟ್ಟಿ ಹಚ್ಚಲು ಸಿದ್ಧತೆ ಆರಂಭಗೊಂಡಿವೆ ಎಂಬ ಸುದ್ದಿಯಿದೆ.

ವಾಯು ಮಾಲಿನ್ಯ ತಡೆಗಟ್ಟಲು ಸಾಧ್ಯವಿಲ್ಲವೇ?

ವಾಯು ಮಾಲಿನ್ಯ ತಡೆಗಟ್ಟಲು ಸಾಧ್ಯವಿಲ್ಲವೇ?

1994, 2001 ಮತ್ತು 2008ರಲ್ಲೂ ತಾಜ್‌ಮಹಲ್‌ಗೆ ಇದೇ ಮಾದರಿಯ ಮಲ್ತಾನಿ ಮಿಟ್ಟಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಇದು ಶಾಶ್ವತ ಪರಿಹಾರವಾಗುವ ಸಾಧ್ಯತೆ ಕಡಿಮೆ. ಸುಪ್ರೀಂಕೋರ್ಟ್ ಈ ಹಿಂದೆ ಸುಮಾರು 200 ಕ್ಕೂ ಅಧಿಕ ಕೈಗರಿಕಾ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿ ಪರಿಸರ ಮಾಲಿನ್ಯ ಮಾಡದಂತೆ ಎಚ್ಚರಿಕೆ ನೀಡಿತ್ತು. ಅದರೆ, ಆಗ್ರಾದಲ್ಲಿ ಯುಮುನಾ ನದಿಯನ್ನು ಚರಂಡಿ ನೀರಿನಂತೆ ಕಲುಷಿತ ಮಾಡುವಲ್ಲಿ ಕೈಗಾರಿಕೆಗಳು ಯಶ ಕಂಡಿವೆ. ಮಾಲಿನ್ಯ ನಿಯಂತ್ರಣವಾಗದ ಹೊರತು ತಾಜ್ ಮಹಲ್ ಜತೆಗೆ ಸುತ್ತಲಿನ ಪರಿಸರವೂ ಕಷ್ಟದ ಪರಿಸ್ಥಿತಿಯಲ್ಲಿ ಹೆಣಗಬೇಕಾಗುತ್ತದೆ.

ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಖರ್ಚು ವೆಚ್ಚ

ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಖರ್ಚು ವೆಚ್ಚ

ತಾಜ್ ಮಹಲ್ ಗೆ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಖರ್ಚು ಸುಮಾರು 10.4 ಲಕ್ಷ ರು ಎಂದು ಹೇಳಲಾಗಿದೆ. 12ಕ್ಕೂ ಅಧಿಕ ಆರ್ಕ್ಟಿಟೆಕ್ಟ್ ಗಳು, ಸುಮಾರು ಆರು ತಿಂಗಳುಗಳ ಕಾಲ ಈ ಚಿಕಿತ್ಸೆ ನೀಡಲಿದ್ದಾರೆ. ಪ್ರವಾಸಿಗರಿಗೆ ಇದರಿಂದ ಏನು ತೊಂದರೆಯಾಗುವುದಿಲ್ಲ ಎಂದು ಎಎಸ್ಐ ತಂಡ ಹೇಳಿದೆ. ಉತ್ತರಪ್ರದೇಶದ ತಾಜ್ ಮಹಲ್ ಸಂರಕ್ಷಣಾ ಸಮಿತಿ ಕೂಡಾ ತಂಡದ ಜತೆ ಕಾರ್ಯನಿರ್ವಹಿಸುತ್ತಿದೆ.

English summary
The iconic Taj Mahal, which findsi ts place among the seven wonders of the world, is set to receive a 'mud-pack treatment' to restore the natural sheen of the white marble which is yellowing due to high pollution level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X