ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19 ಹರಡಿದ ಪ್ರಮಾಣ ಪತ್ತೆಗೆ ಐಸಿಎಂಆರ್‌ನಿಂದ ಸಿರೋ ಸಮೀಕ್ಷೆ: ಆರೋಗ್ಯ ಸಚಿವಾಲಯ

|
Google Oneindia Kannada News

ನವದೆಹಲಿ, ಜೂನ್ 11: ಕೊರೊನಾವೈರಸ್‌ನ ಎರಡನೇ ಅಲೆಯ ತೀವ್ರತೆ ದೇಶಾದ್ಯಂತ ಕಡಿಮೆಯಾಗುತ್ತಿದೆ. ಈ ಸಂದರ್ಭದಲ್ಲಿ ಕೊರೊನಾ ಹರಡಿರುವಿಕೆಯ ಪ್ರಮಾಣವನ್ನು ತಿಳಿಯಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಸಿರೋ ಸಮೀಕ್ಷೆಯನ್ನು ನಡೆಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈ ನಿಟ್ಟಿನಲ್ಲಿ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಐಸಿಎಂಆರ್‌ಗೆ ಸಹಕಾರವನ್ನು ನೀಡಬೇಕು. ದೇಶದ ವಿಭಿನ್ನ ಪ್ರದೇಶಗಳಿಂದ ಕೊರೊನಾವೈರಸ್‌ನ ಹರಡುವಿಕೆಯ ವಿಚಾರದಲ್ಲಿ ಮಾಹಿತಿಯನ್ನು ಪಡೆಯಬಹುದು ಎಂದು ತಿಳಿಸಿದೆ.

"ಕೊರೊನಾವೈರಸ್ ಹರಡುವಿಕೆಯ ಮಾಹಿತಿ ಪಡೆಯಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ರಾಷ್ಟ್ರೀಯ ಸಿರೊ ಸಮೀಕ್ಷೆಗಳನ್ನು ನಡೆಸುತ್ತದೆ. ಎಲ್ಲಾ ಭೌಗೋಳಿಕ ಮಾಹಿತಿಯನ್ನು ಪಡೆಯಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಎಲ್ಲಾ ರೀತಿಯ ಭೌಗೋಳಿಕ ಭಾಗದ ಮಾಹಿತಿಯನ್ನು ಪಡೆಯಲು ಕೈಜೋಡಿಸಬೇಕು" ಎಂದು ಕೇಂದ್ರ ಸರ್ಕಾರ ಹೇಳಿದೆ.

ಏನಿದು ಸಿರೋ ಸಮೀಕ್ಷೆ: ಎಷ್ಟು ಜನರ ದೇಹದಲ್ಲಿ ಕೊರೊನಾವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಗಳು ರೂಪುಗೊಂಡಿದೆ ಎಂಬುದನ್ನು ಪತ್ತೆಹಚ್ಚಲು ಕೈಗೊಳ್ಳುವ ಸಮೀಕ್ಷೆ ಇದಾಗಿದೆ. ಈ ಮೂಲಕ ಒಟ್ಟು ಜನಸಂಖ್ಯೆಯಲ್ಲಿ ಎಷ್ಟು ಪ್ರಮಾಣ ಜನರು ಕೊರೊನಾವೈರಸ್ ವಿರುದ್ಧ ಹೋರಾಡಲು ಶಕ್ತವಾಗಿದ್ದಾರೆ ಎಂಬುದನ್ನು ಕಂಡುಕೊಳ್ಳಲಾಗುತ್ತದೆ.

ಹೇಗೆ ನಡೆಸಲಾಗುತ್ತದೆ ಸಿರೋ ಸರ್ವೆ: ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸುವ ಮೂಲಕ ಈ ಸಮೀಕ್ಷೆ ನಡೆಸಲಾಗುತ್ತದೆ. ಎಲ್ಲಾ ಪ್ರದೇಶಗಳ ನಿರ್ದಿಷ್ಟ ಪ್ರಮಾಣದ ಜನಸಂಖ್ಯೆಯ ರಕ್ತದ ಮಾದರಿಯನ್ನು ಇದಕ್ಕಾಗಿ ಸಂಗ್ರಹಿಸಬೇಕಿದೆ. ಸಂಗ್ರಹಿಸಿದ ರಕ್ತದ ಮಾದರಿಯ ರಕ್ತಕಣಗಳಲ್ಲಿ ಇರುವ ಪ್ರತಿಕಾಯಗಳ ಇರುವಿಕೆಯನ್ನು ಕಂಡುಕೊಳ್ಳಲಾಗುತ್ತದೆ. ಇದು ಅತ್ಯಂತ ಹೆಚ್ಚು ನಿಖರತೆಯನ್ನು ಹೊಂದಿರುತ್ತದೆ. ಈ ಸಮೀಕ್ಷೆಯ ಮೂಲಕ ಕೊರೊನಾ ವಿರುದ್ಧದ ಹೋರಾಟವನ್ನು ಹೆಚ್ಚು ವೈಜ್ಞಾನಿಕವಾಗಿ ರೂಪಿಸಲು ಸಾಧ್ಯವಾಗುತ್ತದೆ.

ICMR will begin national sero surveys to assess coronavirus spread: Health Ministry

ಇನ್ನು ಈ ಸಂದರ್ಭದಲ್ಲಿ ಆರೋಗ್ಯ ಸಚಿವಾಲಯ ದೇಶದಲ್ಲಿ ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಜನರು ಇನ್ನು ಕೂಡ ಸಾಮಾಜಿಕ ಅಂತರ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಿದೆ ಎಂದು ಹೇಳಿದೆ. ಇನ್ನು ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವಾಲಯ ದೇಶದಲ್ಲಿ ಕೊರೊನಾವೈರಸ್ ನಿತ್ಯದ ಪ್ರಕರಣಗಳ ಸಂಖ್ಯೆ ಉತ್ತುಂಗವನ್ನು ತಲುಪಿದ ದಿನಕ್ಕೆ ಹೋಲಿಸಿದರೆ 78 ಶೇಕಡಾದಷ್ಟು ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ತಿಳಿಸಿದೆ.

English summary
ICMR will begin national sero surveys to assess coronavirus spread, says Health Ministry. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X