• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾಗೆ ರಾಮಬಾಣ: 4 ತಳಿ ರೋಗಾಣುವಿಗೆ ಕೊವ್ಯಾಕ್ಸಿನ್ ಒಂದೇ ಸಾಕು!?

|

ನವದೆಹಲಿ, ಏಪ್ರಿಲ್ 21: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಭೀತಿ ಹೆಚ್ಚುತ್ತಿದೆ. ಇದರ ಮಧ್ಯೆ ಇಂಗ್ಲೆಂಡ್ ಮೂಲದ ರೂಪಾಂತರ ವೈರಸ್ ಹಾಗೂ ಬ್ರೆಜಿಲ್ ಮೂಲದ ರೂಪಾಂತರ ವೈರಸ್ ಕೆಲವರಲ್ಲಿ ಪತ್ತೆಯಾಗಿರುವುದು ಆತಂಕವನ್ನು ಹೆಚ್ಚಿಸಿದೆ.

ದೇಶದಲ್ಲಿ ಇದೀಗ ಮೂರರಿಂದ ನಾಲ್ಕು ರೂಪಾಂತರ ರೋಗಾಣು ಹರಡುತ್ತಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದರ ಮಧ್ಯೆ ಭಾರತ್ ಬಯೋಟೆಕ್ ಉತ್ಪಾದಿಸಿರುವ ಕೊವ್ಯಾಕ್ಸಿನ್ ಲಸಿಕೆಯು ನೆಮ್ಮದಿಯ ಸುದ್ದಿ ನೀಡಿದೆ.

Infographics: ಕೊರೊನಾ ಎರಡನೇ ಅಲೆಗೂ ಮೊದಲೇ ಎಡವಿತಾ ಸರ್ಕಾರ?Infographics: ಕೊರೊನಾ ಎರಡನೇ ಅಲೆಗೂ ಮೊದಲೇ ಎಡವಿತಾ ಸರ್ಕಾರ?

ಕೊರೊನಾವೈರಸ್ ಸೋಂಕಿನ ಜೊತೆಗೆ ರೂಪಾಂತರ ರೋಗಾಣುಗಳ ವಿರುದ್ಧವೂ ಸಮರ್ಥವಾಗಿ ಹೋರಾಡುವ ಸಾಮರ್ಥ್ಯವನ್ನು ಕೊವ್ಯಾಕ್ಸಿನ್ ಲಸಿಕೆ ಹೊಂದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು ತಿಳಿಸಿದೆ.

ನಾಲ್ಕು ತಳಿಯ ರೋಗಾಣುಗಳ ಬಗ್ಗೆ ಅಧ್ಯಯನ

ನಾಲ್ಕು ತಳಿಯ ರೋಗಾಣುಗಳ ಬಗ್ಗೆ ಅಧ್ಯಯನ

ಭಾರತದಲ್ಲಿ ಇದೀಗ ಕೊರೊನಾವೈರಸ್ ಸೋಂಕಿನ ರೂಪಾಂತರ ತಳಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಹಾಗೂ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರದ ಸಂಸ್ಥೆಯು ನಾಲ್ಕು ವಿಧದ ರೋಗಾಣುವಿನ ಲಕ್ಷಣಗಳ ಬಗ್ಗೆ ಅಧ್ಯಯನ ನಡೆಸಿದೆ. ಇಂಗ್ಲೆಂಡ್ ಮೂಲದ B.1.1.7 ಸೋಂಕು, ಬ್ರೆಜಿಲ್ ಮೂಲದ B.1.1.28 ರೋಗಾಣು ಹಾಗೂ ದಕ್ಷಿಣ ಆಫ್ರಿಕಾದ B.1.351 ತಳಿಯ ರೋಗಾಣುವಿನ ಬಗ್ಗೆ ಅಧ್ಯಯನ ಮಾಡಲಾಗಿದೆ.

ಕೊವ್ಯಾಕ್ಸಿನ್ ಈ ರೋಗಾಣು ವಿರುದ್ಧ ಕೆಲಸ ಮಾಡುತ್ತೆ

ಕೊವ್ಯಾಕ್ಸಿನ್ ಈ ರೋಗಾಣು ವಿರುದ್ಧ ಕೆಲಸ ಮಾಡುತ್ತೆ

ದೇಶದಲ್ಲಿ ಕಾಣಿಸಿಕೊಂಡಿರುವ ಇಂಗ್ಲೆಂಡ್ ಮೂಲದ B.1.1.7 ಸೋಂಕು, ಬ್ರೆಜಿಲ್ ಮೂಲದ B.1.1.28 ರೋಗಾಣುವಿನ ವಿರುದ್ಧ ಕೊವ್ಯಾಕ್ಸಿನ್ ಲಸಿಕೆಯು ಸಮರ್ಥವಾಗಿ ಕೆಲಸ ಮಾಡುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಹಾಗೂ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರದ ಸಂಸ್ಥೆಯು ಪ್ರಮಾಣೀಕರಿಸಿದೆ. ಇತ್ತೀಚಿಗೆ B.1.617 ತಳಿಯ ಸೋಂಕು ದ್ವಿಗುಣಗೊಳ್ಳುವ ಸಾಮರ್ಥವನ್ನು ನಿಯಂತ್ರಿಸುವಲ್ಲಿ ಕೊವ್ಯಾಕ್ಸಿನ್ ಲಸಿಕೆಯು ಯಶಸ್ವಿಯಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

ರೂಪಾಂತರ ತಳಿ ವಿರುದ್ಧ ಕೊವ್ಯಾಕ್ಸಿನ್ ಲಸಿಕೆ ಯಶಸ್ವಿ

ರೂಪಾಂತರ ತಳಿ ವಿರುದ್ಧ ಕೊವ್ಯಾಕ್ಸಿನ್ ಲಸಿಕೆ ಯಶಸ್ವಿ

ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ರೂಪಾಂತರ ತಳಿಗಳು ಇಮ್ಮಡಿಯಾವುದನ್ನು ನಿಯಂತ್ರಿಸುವಲ್ಲಿ ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯು ಯಶಸ್ವಿಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಹಾಗೂ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರದ ಸಂಸ್ಥೆಯು ಸ್ಪಷ್ಟಪಡಿಸಿದೆ.

ಭಾರತದಲ್ಲಿ ಕೇವಲ ಮೂರ ಮಾದರಿ ಲಸಿಕೆಗೆ ಅನುಮತಿ

ಭಾರತದಲ್ಲಿ ಕೇವಲ ಮೂರ ಮಾದರಿ ಲಸಿಕೆಗೆ ಅನುಮತಿ

ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ. ಇದರ ಮಧ್ಯೆ ಮಾಸ್ಕೋ, ರಷ್ಯಾದಲ್ಲಿ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-ವಿ ಲಸಿಕೆ ವಿತರಿಸುವುದಕ್ಕೂ ಅನುಮೋದನೆ ನೀಡಲಾಗಿದೆ.

English summary
ICMR Study Shows COVAXIN Effectively Neutralises Multiple Variants Of Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X