ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸಮುದಾಯದಲ್ಲಿ ಹಬ್ಬುತ್ತಿದೆಯೇ?; ಐಸಿಎಂಆರ್ ವರದಿ

|
Google Oneindia Kannada News

ನವದೆಹಲಿ, ಏಪ್ರಿಲ್ 10: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6 ಸಾವಿರದ ಗಡಿ ದಾಡಿದೆ. ಇಷ್ಟು ದಿನ ದೇಶದಲ್ಲಿ ಸೋಂಕು ಸಮುದಾಯದಲ್ಲಿ ಹಬ್ಬಿಲ್ಲ ಎಂಬ ವರದಿಗಳಿದ್ದವು. ಈಗ ಐಸಿಎಂಆರ್ ನಡೆಸಿದ ಸಮೀಕ್ಷೆ ಸಮುದಾಯದಲ್ಲಿ ಹಬ್ಬುತ್ತಿರುವ ಸುಳಿವನ್ನು ನೀಡಿದೆ.

Recommended Video

ತಾಳಗುಪ್ಪದಲ್ಲಿ ಕುಮಾರ್ ಬಂಗಾರಪ್ಪನವರು ನ್ಯಾಯ ಬೆಲೆ ಅಂಗಡಿ ಪರಿಶೀಲಿಸಿದರು | Oneindia Kannada

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ಸಮೀಕ್ಷೆ ವರದಿ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌ನಲ್ಲಿ ಪ್ರಕಟವಾಗಿದೆ. ಯಾವುದೇ ವಿದೇಶ ಪ್ರವಾಸ ಕೈಗೊಳ್ಳದ ವ್ಯಕ್ತಿಗಳಿಗೂ ಸೋಂಕು ಹಬ್ಬುತ್ತಿರುವುದು ಸಮುದಾಯದಲ್ಲಿ ಹಬ್ಬಿರುವ ಸೂಚನೆ ಕೊಟ್ಟಿದೆ.

ಕೊರೊನಾ ತಡೆಯಲು ಕಂಟೇನ್‍ಮೆಂಟ್ ಝೋನ್‌ ಮೇಲೆ ಕಣ್ಣು ಕೊರೊನಾ ತಡೆಯಲು ಕಂಟೇನ್‍ಮೆಂಟ್ ಝೋನ್‌ ಮೇಲೆ ಕಣ್ಣು

15 ರಾಜ್ಯಗಳ 36 ಜಿಲ್ಲೆಗಳ 40 ಪ್ರಕರಣಗಳಲ್ಲಿ ವ್ಯಕ್ತಿಗಳು ಯಾವುದೇ ವಿದೇಶ ಪ್ರವಾಸ ಮಾಡಿಲ್ಲ. ವಿದೇಶದಿಂದ ವಾಪಸ್ ಆದ ಸಂಪರ್ಕಕ್ಕೂ ಸಿಕ್ಕಿಲ್ಲ. ಆದರೂ ಅವರಿಗೆ ಸೋಂಕು ತಗುಲಿದೆ. ಹೀಗೆ ಪ್ರಕರಣ ಪತ್ತೆಯಾದ ಪ್ರದೇಶಗಳನ್ನು ಕಂಟೇನ್‍ಮೆಂಟ್ ಝೋನ್‌ ಎಂದು ಘೋಷಣೆ ಮಾಡಲಾಗಿದೆ.

ಲಾಕ್ ಡೌನ್ ತೆರವು; ಸಾರಿಗೆ ಇಲಾಖೆ ಕುರಿತು ತಜ್ಞರ ಶಿಫಾರಸುಗಳು ಲಾಕ್ ಡೌನ್ ತೆರವು; ಸಾರಿಗೆ ಇಲಾಖೆ ಕುರಿತು ತಜ್ಞರ ಶಿಫಾರಸುಗಳು

ಐಸಿಎಂಆರ್ ಅಧ್ಯಯನದ ಪ್ರಕಾರ ಒಬ್ಬ ಕೋವಿಡ್ - 19 ರೋಗಿಯು 30 ದಿನದಲ್ಲಿ ಕನಿಷ್ಠ 460 ಜನರಿಗೆ ಸೋಂಕು ಹರಡಬಹುದು. ಸೋಂಕಿತ ವ್ಯಕ್ತಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ನೂರಾರು ಜನರಿಗೆ ಸೋಂಕು ಹರಡಲಿದೆ ಎಂದು ವರದಿ ಹೇಳಿದೆ.

ಕೊರೊನಾ ವಿರುದ್ಧದ ಹೋರಾಟ; ಕೇಂದ್ರ ಸರ್ಕಾರದ ದಿಟ್ಟ ತೀರ್ಮಾನಕೊರೊನಾ ವಿರುದ್ಧದ ಹೋರಾಟ; ಕೇಂದ್ರ ಸರ್ಕಾರದ ದಿಟ್ಟ ತೀರ್ಮಾನ

ಯಾರ ಸಂಪರ್ಕಕ್ಕೆ ಬಂದಿಲ್ಲ

ಯಾರ ಸಂಪರ್ಕಕ್ಕೆ ಬಂದಿಲ್ಲ

ದೇಶದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಶೇ 39.2 ರಷ್ಟು ಸೋಂಕಿತರು ಯಾವುದೇ ವಿದೇಶ ಪ್ರವಾಸ ಮಾಡಿಲ್ಲ. ವಿದೇಶದಿಂದ ಬಂದವರ ಸಂಪರ್ಕಕ್ಕೆ ಬಂದಿಲ್ಲ. ಶೇ 2ರಷ್ಟು ರೋಗಿಗಳು ವಿದೇಶದಿಂದ ಬಂದ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿದ್ದರು.

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ ಕಂಡು ಬಂದ ರೋಗಿಗಳು ಇರುವ ಪ್ರದೇಶವನ್ನು ಕಂಟೇನ್‍ಮೆಂಟ್ ಝೋನ್‌ ಎಂದು ಘೋಷಣೆ ಮಾಡಲಾಗುತ್ತದೆ. ಉಸಿರಾಟದ ತೊಂದರೆ ಕಂಡು ಬಂದವರನ್ನು ಗುರುತಿಸಿದರೆ ಇದರಿಂದಾಗಿ ಕೊರೊನಾ ಹರಡದಂತೆ ತಡೆಯಬಹುದಾಗಿದೆ ಎಂದು ಸಮೀಕ್ಷೆ ಹೇಳಿದೆ.

ಅಂತಿಮ ಮುದ್ರೆ ಒತ್ತಿಲ್ಲ

ಅಂತಿಮ ಮುದ್ರೆ ಒತ್ತಿಲ್ಲ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈ ಸಮೀಕ್ಷೆಯಿಂದ ದೇಶದಲ್ಲಿ ಸಮುದಾಯದಲ್ಲಿ ಕೊರೊನಾ ಹಬ್ಬುತ್ತಿದೆ ಎಂದು ಅಂತಿಮ ಮುದ್ರೆ ಒತ್ತಿಲ್ಲ. ಈ ಅಧ್ಯಯನ ಸುಳಿವನ್ನು ಮಾತ್ರ ನೀಡಿದೆ. ದೇಶದಲ್ಲಿನ ಪರಿಸ್ಥಿತಿ ಬಗ್ಗೆ ಐಸಿಎಂಆರ್ ಸೂಕ್ಷ್ಮ ಅವಲೋಕವನ್ನು ಕೈಗೊಂಡಿದೆ.

ಟೆಸ್ಟ್ ಮಾಡುವ ಪದ್ಧತಿಯೂ ಬದಲು

ಟೆಸ್ಟ್ ಮಾಡುವ ಪದ್ಧತಿಯೂ ಬದಲು

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕೊರೊನಾ ಸೋಂಕು ಪೀಡಿತರನ್ನು ಪರೀಕ್ಷೆ ಮಾಡುವ ವಿಧಾನವನ್ನು ಬದಲಾಣೆ ಮಾಡಿದೆ. ಪ್ರಸ್ತುತ ಮೂಗು ಸೋರುವವರು, ಜ್ವರ, ಕಫ, ಗಂಟಲು ಕೆರೆತ ಇರುವವರನ್ನು ಸಹ ಪರೀಕ್ಷೆ ಮಾಡಲಾಗುತ್ತಿದೆ.

English summary
Indian Council of Medical Research (ICMR) study suggested that coronavirus tests on patients with severe respiratory diseases are showing that more and more people with no travel or contact history are contracting the virus hinting community transmission in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X