ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಲಾಸ್ಮಾ ಚಿಕಿತ್ಸೆ ವಿಫಲ: ಕೋವಿಡ್ ಮಾರ್ಗಸೂಚಿಯಿಂದ ಕೈಬಿಡಲು ನಿರ್ಧಾರ

|
Google Oneindia Kannada News

ನವದೆಹಲಿ, ಅಕ್ಟೋಬರ್ 21: ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾದ ರೋಗಿಗಳಿಂದ ಪ್ಲಾಸ್ಮಾ ಪಡೆದು ರೋಗಿಗಳಿಗೆ ನೀಡುವ ಮೂಲಕ ಅವರನ್ನು ಗುಣಮುಖರಾಗಿಸಬಹುದು ಎಂಬ ತರ್ಕ ವಿಫಲವಾದ ಹಿನ್ನೆಲೆಯಲ್ಲಿ ಪ್ಲಾಸ್ಮಾ ಥೆರಪಿಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ.

ರಾಷ್ಟ್ರೀಯ ಕೋವಿಡ್-19 ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಡಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ನಿರ್ಧರಿಸಿದೆ ಎಂದು ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ. ಬಲರಾಮ್ ಭಾರ್ಗವ ತಿಳಿಸಿದ್ದಾರೆ.

ಆರೋಗ್ಯವಂತ ಸ್ವಯಂಸೇವಕರಿಗೆ ಕೊರೊನಾ ಸೋಂಕು ತಗುಲಿಸಿ ಲಸಿಕೆ ಪ್ರಯೋಗಆರೋಗ್ಯವಂತ ಸ್ವಯಂಸೇವಕರಿಗೆ ಕೊರೊನಾ ಸೋಂಕು ತಗುಲಿಸಿ ಲಸಿಕೆ ಪ್ರಯೋಗ

'ರಾಷ್ಟ್ರೀಯ ಕಾರ್ಯಪಡೆ ಮಟ್ಟದ ಸಭೆಯಲ್ಲಿ ಪ್ಲಾಸ್ಮಾ ಥೆರಪಿ ಬಗ್ಗೆ ನಾವು ಚರ್ಚೆಗಳನ್ನು ನಡೆಸಿದ್ದೇವೆ. ಹೆಚ್ಚೂಕಡಿಮೆ ಈ ನಿರ್ಧಾರದತ್ತ ಹೆಜ್ಜೆ ಇರಿಸಿದ್ದೇವೆ. ಪ್ಲಾಸ್ಮಾ ಥೆರಪಿ ಪರಿಣಾಮಕಾರಿಯಾಗುತ್ತಿಲ್ಲ. ಇದರಿಂದ ರೋಗಿಗಳು ಗುಣಮುಖರಾಗುತ್ತಿಲ್ಲ ಎನ್ನುವುದು ಅಧ್ಯಯನದಿಂದ ಸಾಬೀತಾಗಿದೆ. ಹೀಗಾಗಿ ಪ್ಲಾಸ್ಮಾ ಥೆರಪಿಯನ್ನು ರಾಷ್ಟ್ರೀಯ ಮಾನದಂಡದಿಂದ ಕೈಬಿಡಲು ನಿರ್ಧರಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.

 ICMR Said Plasma Therapy May Be Removed From Covid Treatment Guideline

'ಜಗತ್ತಿನ ಅತ್ಯಂತ ದೊಡ್ಡ ಪ್ಲಾಸ್ಮಾ ಥೆರಪಿ ಪ್ರಯೋಗವನ್ನು ಭಾರತದಲ್ಲಿ ನಡೆಸಲಾಗಿತ್ತು. 39 ಆಸ್ಪತ್ರೆಗಳಲ್ಲಿ 350ಕ್ಕೂ ಹೆಚ್ಚು ಸಂಶೋಧಕರು 464 ರೋಗಿಗಳ ಮೇಲೆ ಪ್ಲಾಸ್ಮಾ ಥೆರಪಿ ಪ್ರಯೋಗ ಮಾಡಲಾಗಿತ್ತು. ಈ ಅಧ್ಯಯನದ ವರದಿಯನ್ನು ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಸೇರಿಸಿಕೊಳ್ಳಲು ಅನುಮೋದನೆ ದೊರಕಿದೆ. ಕೋವಿಡ್ 19 ರೋಗಿಗಳ ಮೇಲೆ ಪ್ಲಾಸ್ಮಾ ಥೆರಪಿಯ ಪಾತ್ರದ ಕುರಿತಾದ ಅಧ್ಯಯನ ವರದಿ ಶೀಘ್ರವೇ ಪ್ರಕಟವಾಗಲಿದೆ' ಎಂದು ತಿಳಿಸಿದ್ದಾರೆ.

ಹೋಟೆಲ್ ಉದ್ಘಾಟನೆ ದಿನ 10 ರೂ.ಗೆ ಬಿರಿಯಾನಿ ಮಾರಿದವನ ಬಂಧನಹೋಟೆಲ್ ಉದ್ಘಾಟನೆ ದಿನ 10 ರೂ.ಗೆ ಬಿರಿಯಾನಿ ಮಾರಿದವನ ಬಂಧನ

Recommended Video

Modi ಭಾಷಣ ಹೇಗಿತ್ತು ಗೊತ್ತಾ?? | Oneindia Kannada

'ಕೋವಿಡ್‌ನಿಂದ ಗುಣಮುಖರಾದವರಿಂದ ಸಂಗ್ರಹ ಮಾಡಿದ ಪ್ಲಾಸ್ಮಾವನ್ನು ಕೋವಿಡ್ ರೋಗಿಗಳಿಗೆ ನೀಡಿ ಪರೀಕ್ಷೆಗಳನ್ನು ನಡೆಸಲಾಗಿದೆ. ಆದರೆ ಈ ಪ್ರಯೋಗದಿಂದ ಕೋವಿಡ್ ರೋಗಿಗಳ ಮರಣ ಪ್ರಮಾಣ ಕಡಿಮೆಯಾಗಿಲ್ಲ. ಕೋವಿಡ್ ಬಂದಿದ್ದ ರೋಗಿಯಲ್ಲಿ ಚಿಕಿತ್ಸೆ ನೀಡಿದಾಗ ರೋಗ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಪ್ಲಾಸ್ಮಾ ಥೆರಪಿ ಮಾಡಲಾಗುತ್ತಿತ್ತು. ಆದರೆ ರೋಗಿಯ ದೇಹದಲ್ಲಿ ಕೋವಿಡ್ ಉಲ್ಬಣವಾಗುವುದನ್ನು ಪ್ಲಾಸ್ಮಾಗೆ ತಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ರಾಷ್ಟ್ರೀಯ ಕೋವಿಡ್ 19 ಚಿಕಿತ್ಸೆಯ ಮಾನದಂಡದಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಡುವ ಬಗ್ಗೆ ಚರ್ಚಿಸಲಾಗಿದೆ' ಎಂದಿದ್ದಾರೆ.

English summary
Plasma therapy may be removed from the national covid guideline as the treatment not able to reduce the mortality in Coronavirus cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X