ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧದ ಹೋರಾಟದಲ್ಲಿ ಯಾವ ಲಸಿಕೆ ಉತ್ತಮ: ಕೊವ್ಯಾಕ್ಸಿನ್, ಕೋವಿಶೀಲ್ಡ್?

|
Google Oneindia Kannada News

ಇತ್ತೀಚೆಗೆ ಬ್ರಿಟನ್ ಮೂಲದ ಸಂಸ್ಥೆಯೊಂದು ಕೋವಿಶೀಲ್ಡ್ ಎಷ್ಟು ಪರಿಣಾಮಕಾರಿ ಎನ್ನುವ ಅಧ್ಯಯನದ ವರದಿಯನ್ನು ನೀಡಿತ್ತು. ಮೊದಲನೇ ಮತ್ತು ಎರಡನೇ ಡೋಸ್ ತೆಗೆದುಕೊಂಡ ಮೇಲೆ, ಸಾವಿನ ಪ್ರಮಾಣ ಎಷ್ಟು ಕಮ್ಮಿಯಾಗಲಿದೆ ಎನ್ನುವುದನ್ನು ವರದಿಯಲ್ಲಿ ತಿಳಿಸಿತ್ತು.

Recommended Video

ಯಾವ ವ್ಯಾಕ್ಸಿನ್ ಸೇಫ್ ? ಇಲ್ಲಿದೆ ಉತ್ತರ! | Oneindia Kannada

ಈಗ, ಸ್ಥಳೀಯವಾಗಿ ಅಭಿವೃದ್ದಿ ಪಡಿಸಲಾಗಿರುವ ಕೊವ್ಯಾಕ್ಸಿನ್ ಲಸಿಕೆ ಎಷ್ಟು ಪರಿಣಾಮಕಾರಿ ಎನ್ನುವುದರ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ತಜ್ಞರು ವಿವರಣೆಯನ್ನು ನೀಡಿದ್ದಾರೆ.

Explained: ಕೊರೊನಾಗೆ DRDO ಅಭಿವೃದ್ಧಿಪಡಿಸಿದ 2ಡಿಜಿ ಔಷಧಿ ಬಗ್ಗೆ ನಿಮಗೆಷ್ಟು ಗೊತ್ತು?Explained: ಕೊರೊನಾಗೆ DRDO ಅಭಿವೃದ್ಧಿಪಡಿಸಿದ 2ಡಿಜಿ ಔಷಧಿ ಬಗ್ಗೆ ನಿಮಗೆಷ್ಟು ಗೊತ್ತು?

ಹೈದರಾಬಾದ್ ನಲ್ಲಿರುವ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆಯನ್ನು ಜಂಟಿಯಾಗಿ ಸಿದ್ದಪಡಿಸಿದ್ದು, ರೂಪಾಂತರಿ ವೈರಸ್ ವಿರುದ್ದ ಕೂಡಾ ಈ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

 ಕೋವಿಶೀಲ್ಡ್ 1, 2ನೇ ಡೋಸ್ ನಂತರ ಎಷ್ಟು ಪರಿಣಾಮಕಾರಿ: ಸ್ಟಡಿ ರಿಪೋರ್ಟ್ ಕೋವಿಶೀಲ್ಡ್ 1, 2ನೇ ಡೋಸ್ ನಂತರ ಎಷ್ಟು ಪರಿಣಾಮಕಾರಿ: ಸ್ಟಡಿ ರಿಪೋರ್ಟ್

ಬ್ರಿಟನಿನ ರೂಪಾಂತರಿ ಬಿ1.1.7 ಮತ್ತು ಮಹಾರಾಷ್ಟ್ರದಲ್ಲಿ ಕಂಡು ಬಂದ ಬಿ.1.617 ವೈರಸ್ ವಿರುದ್ದವೂ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಐಸಿಎಂಆರ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ಮೊದಲನೇ ಡೋಸ್ ಪಡೆದ ನಂತರ ಸಾವಿನ ಸಂಭ್ಯಾವತೆ ಶೇ. 80ರಷ್ಟು ತಗ್ಗುತ್ತದೆ

ಮೊದಲನೇ ಡೋಸ್ ಪಡೆದ ನಂತರ ಸಾವಿನ ಸಂಭ್ಯಾವತೆ ಶೇ. 80ರಷ್ಟು ತಗ್ಗುತ್ತದೆ

ದಿ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಎನ್ನುವ ಯುಕೆ ಆರೋಗ್ಯ ಇಲಾಖೆಯಿಂದ ಅನುಮೋದನೆ ಪಡೆದುಕೊಂಡಿರುವ ಸಂಸ್ಥೆ, ಆಕ್ಸ್ ಫರ್ಡ್ ಮತ್ತು ಅಸ್ಟ್ರಾಜೆನಿಕ (ಭಾರತದಲ್ಲಿ ಕೋವಿಶೀಲ್ಡ್) ಸಂಸ್ಥೆಯ ಲಸಿಕೆ ಮೊದಲನೇ ಡೋಸ್ ಮತ್ತು ಎರಡನೇ ಡೋಸ್ ತೆಗೆದುಕೊಂಡ ನಂತರ ಸಾವಿನ ಪ್ರಮಾಣ ಎಷ್ಟರ ಮಟ್ಟಿಗೆ ತಗ್ಗುತ್ತದೆ ಎನ್ನುವುದರ ಬಗ್ಗೆ ವರದಿಯನ್ನು ನೀಡಿತ್ತು. ಅದರ ಪ್ರಕಾರ, ಮೊದಲನೇ ಡೋಸ್ ಪಡೆದ ನಂತರ ಸಾವಿನ ಸಂಭ್ಯಾವತೆ ಶೇ. 80ರಷ್ಟು ತಗ್ಗುತ್ತದೆ ಎಂದು ಹೇಳಿತ್ತು.

 ಬಯೋ-ಎನ್-ಟೆಕ್ ಫೈಜರ್ ಲಸಿಕೆ ಒಂದು ಡೋಸ್ ತೆಗೆದುಕೊಂಡರೂ ಇದೇ ಪ್ರಮಾಣ

ಬಯೋ-ಎನ್-ಟೆಕ್ ಫೈಜರ್ ಲಸಿಕೆ ಒಂದು ಡೋಸ್ ತೆಗೆದುಕೊಂಡರೂ ಇದೇ ಪ್ರಮಾಣ

ಕೋವಿಶೀಲ್ಡ್ ಎರಡನೇ ಡೋಸ್ ತೆಗೆದುಕೊಂಡ ನಂತರವಂತೂ ಸಾವಿನ ಸಂಭಾವ್ಯತೆ ಶೇ. 97ರಷ್ಟು ತಗ್ಗುತ್ತದೆ. ಇದೇ ರೀತಿ ಬಯೋ-ಎನ್-ಟೆಕ್ ಫೈಜರ್ ಲಸಿಕೆ ಒಂದು ಡೋಸ್ ತೆಗೆದುಕೊಂಡರೂ ಇದೇ ಪ್ರಮಾಣದಲ್ಲಿ (ಶೇ. 80ರಷ್ಟು) ಕೆಲಸ ಮಾಡುತ್ತದೆ ಎಂದು ದಿ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ವರದಿಯಲ್ಲಿ ಹೇಳಲಾಗಿತ್ತು.

 ಕೊವ್ಯಾಕ್ಸಿನ್ ಪಡೆದುಕೊಂಡವರಲ್ಲಿ ಪ್ರತಿಕಾಯದ ಪ್ರಮಾಣ ಉತ್ಪಾದನೆಯಾಗುತ್ತದೆ

ಕೊವ್ಯಾಕ್ಸಿನ್ ಪಡೆದುಕೊಂಡವರಲ್ಲಿ ಪ್ರತಿಕಾಯದ ಪ್ರಮಾಣ ಉತ್ಪಾದನೆಯಾಗುತ್ತದೆ

ಕೊವ್ಯಾಕ್ಸಿನ್ ಪಡೆದುಕೊಂಡವರಲ್ಲಿ ಪ್ರತಿಕಾಯದ ಪ್ರಮಾಣ ಉತ್ಪಾದನೆಯಾಗುತ್ತದೆ. ರೂಪಾಂತರಿ ವೈರಸ್ ವಿರುದ್ದ 1.95 ಪ್ರಮಾಣದಲ್ಲಿ ಈ ಲಸಿಕೆ ಕೆಲಸ ಮಾಡುತ್ತದೆ. ಇದು, ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚು ಎಂದು ಐಸಿಎಂಆರ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

 ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)

ಬೇರೆ ಲಸಿಕೆಗಳೂ ಪರಿಣಾಮಕಾರಿಯಾಗಿದ್ದರೂ ಬ್ರಿಟನ್, ಬ್ರೆಜಿಲ್ ವೈರಸ್ ಮುಂದೆ ಕೊವ್ಯಾಕ್ಸಿನ್ ಉತ್ತಮ ಲಸಿಕೆ. ವಿಶ್ವಮಟ್ಟದಲ್ಲಿ ಈ ಲಸಿಕೆ ಗುರುತಿಸಿಕೊಂಡಿದೆ ಎಂದು ಐಸಿಎಂಆರ್ ತಜ್ಞರು ಹೇಳುತ್ತಾರೆ. ಈ ಸಂಶೋಧನೆಯ ವಿವರ ನಿಯತಕಾಲಿಕ ಒಂದರಲ್ಲಿ ಪ್ರಕಟವಾಗಿದೆ.

English summary
ICMR Report Covaxin Found To Be Effective Against Variant Virus Too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X