ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವು ರಾಜ್ಯಗಳಲ್ಲಿ 6-8 ವಾರಗಳ ಲಾಕ್‌ಡೌನ್ ಅಗತ್ಯವಿದೆ: ICMR

|
Google Oneindia Kannada News

ನವದೆಹಲಿ, ಮೇ 14: ಕೊರೊನಾ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಮುಂದಿನ 6-8 ವಾರಗಳ ಕಾಲ ಲಾಕ್‌ಡೌನ್ ಅಗತ್ಯವಿದೆ ಎಂದು ಐಸಿಎಂಆರ್ ಮುಖ್ಯಸ್ಥ ಡಾ. ಬಲರಾಂ ಭಾರ್ಗವ್ ತಿಳಿಸಿದ್ದಾರೆ.

ಹೆಚ್ಚು ಪಾಸಿಟಿವಿಟಿ ದರ ಇರುವ ಜಿಲ್ಲೆಗಳನ್ನು ಬಂದ್ ಮಾಡಬೇಕು, ಪಾಸಿಟಿವಿಟಿ ದರ ಶೇ.5 ರಿಂದ 10ರ ಒಳಗೆ ಇದ್ದರೆ ಅಂತಹ ಜಿಲ್ಲೆಗಳಲ್ಲಿ ಚಟುವಟಿಕೆಗಳಿಗೆ ಅವಕಾಶ ನೀಡಬಹುದು. ಆದರೆ, ಸೋಂಕು ಪತ್ತೆ ಪ್ರಮಾಣ ಈ ಪ್ರಮಾಣಕ್ಕೆ ಇಳಿಯಬೇಕು, ಇದು ಆರರಿಂದ ಎಂಟು ವಾರಗಳವರೆಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನ IISc ಅಭಿವೃದ್ಧಿಪಡಿಸುತ್ತಿರುವ ಕೊರೊನಾ ಲಸಿಕೆಯಲ್ಲಿ ಹೊಸ ಭರವಸೆಬೆಂಗಳೂರಿನ IISc ಅಭಿವೃದ್ಧಿಪಡಿಸುತ್ತಿರುವ ಕೊರೊನಾ ಲಸಿಕೆಯಲ್ಲಿ ಹೊಸ ಭರವಸೆ

ಪರೀಕ್ಷೆಗೆ ಒಳಗಾದವರಲ್ಲಿ ಶೇ.10ಕ್ಕಿಂತಲೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಡುತ್ತಿರುವುದು ಯಾವ ಜಿಲ್ಲೆಯಲ್ಲಿ ಕಂಡುಬರುತ್ತಿದೆಯೋ ಅಲ್ಲಿ ಲಾಕ್‌ಡೌನ್ ಅಗತ್ಯವಿದೆ.

ICMR Chief Says Most Of Country Should Remain Locked Down For 6-8 Weeks

ಈಗಾಗಲೇ ಹಲವು ಕಡೆಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಅದು ಇನ್ನಷ್ಟು ದಿನಗಳವರೆಗೆ ಮುಂದುವರೆಸಬೇಕಾಗಿದೆ, ಪ್ರಸ್ತುತ ದೇಶದಲ್ಲಿ 718 ಜಿಲ್ಲೆಗಳ ಪೈಕಿ ನಾಲ್ಕನೇ ಮೂರರಷ್ಟು ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.10ಕ್ಕಿಂತ ಹೆಚ್ಚಿದೆ. ಇದರಲ್ಲಿ ಮಹಾನಗರಗಳಾದ ದೆಹಲಿ, ಮುಂಬೈ ಹಾಗೂ ಬೆಂಗಳೂರು ಕೂಡ ಸೇರಿದೆ.

ಸೋಂಕು ಹರಡುವುದನ್ನು ತಡೆಯಲು ಹಲವಾರು ರಾಜ್ಯಗಳು ಈಗಾಗಲೇ ಆರ್ಥಿಕ ಚಟುವಟಿಕೆ ಮತ್ತು ಸಾರ್ವಜನಿಕ ಸಂಚಾರದ ಮೇಲೆ ವಿವಿಧ ಹಂತದ ನಿರ್ಬಂಧಗಳನ್ನು ವಿಧಿಸಿದೆ. ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ಪರಿಸ್ಥಿತಿ ಅವಲೋಕಿಸಿ ಈ ನಿರ್ಧಾರವನ್ನು ಪುನರ್ ಪರಿಶೀಲಿಸಲಾಗುತ್ತದೆ.

ಆರ್ಥಿಕತೆಗೆ ಹೊಡೆತ ಬೀಳುವ ಕಾರಣಕ್ಕಾಗಿ ದೇಶವ್ಯಾಪಿ ಲಾಕ್‌ಡೌನ್ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸ್ಪಷ್ಟಪಡಿಸಿದೆ.ಲಾಕ್‌ಡೌನ್ ನಿರ್ಧಾರವನ್ನು ರಾಜ್ಯ ಸರ್ಕಾರಕ್ಕೆ ಬಿಡಲಾಗಿದೆ.

English summary
The head of the main Indian health agency responding to the coronavirus has said districts reporting a high number of infections should remain locked down for another six to eight weeks to control the spread of the rampaging disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X