ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲ್ಯಾಕ್ ಫಂಗಸ್ ಪತ್ತೆ, ಚಿಕಿತ್ಸೆ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಐಸಿಎಂಆರ್ ಸಲಹೆ

|
Google Oneindia Kannada News

ನವದೆಹಲಿ, ಮೇ 15: ಕೊರೊನಾ ಸೋಂಕಿನ ಜತೆಗೆ ಇದೀಗ ಬ್ಲ್ಯಾಕ್‌ ಫಂಗಸ್ ಅಥವಾ ಕಪ್ಪು ಶಿಲೀಂಧ್ರಗಳು ಮನುಷ್ಯನ ಪ್ರಾಣವನ್ನು ಕಿತ್ತು ತಿನ್ನುತ್ತಿವೆ. ಇದನ್ನು ತಡೆಗಟ್ಟಲು ಐಸಿಎಂಆರ್ ಹಲವು ಸಲಹೆಗಳನ್ನು ನೀಡಿದೆ.

ಕೋವಿಡ್ ಸೋಂಕಿತರಿಗೆ ಅಪಾಯಕಾರಿ ಪರಿಣಮಿಸುತ್ತಿರುವ ಬ್ಲ್ಯಾಕ್ ಫಂಗಸ್ ಕುರಿತಂತೆ ಐಸಿಎಂಆರ್ ಮಾರ್ಗಸೂಚಿ ಮತ್ತು ಸಲಹೆಗಳನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆಯು ದಿನೇ ದಿನೇ ಏರುತ್ತಲೇ ಇದ್ದು, ಮಹಾರಾಷ್ಟ್ರದಲ್ಲಿ ಹೆಚ್ಚಿನ ಜನರು ಬ್ಲ್ಯಾಕ್ ಫಂಗಸ್ ನಿಂದ ತೊಂದರೆಗೆ ಒಳಗಾಗುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಇದುವರೆಗೆ 52 ಮಂದಿ ಬಲಿಮಹಾರಾಷ್ಟ್ರದಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಇದುವರೆಗೆ 52 ಮಂದಿ ಬಲಿ

ಮಹಾರಾಷ್ಟ್ರ ಮಾತ್ರವಲ್ಲದೇ ಕರ್ನಾಟಕದಲ್ಲೂ ಕಪ್ಪು ಶೀಲೀಂಧ್ರ ಸಮಸ್ಯೆಗೀಡಾದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುವ ಮಧುಮೇಹ ರೋಗಿಗಳಲ್ಲಿ ಮತ್ತು ಚಿಕಿತ್ಸೆ ವೇಳೆ ಅತಿಯಾಗಿ ಸ್ಟಿರಾಯ್ಡ್‌ ನೀಡಲಾದ ರೋಗಿಗಳಲ್ಲಿ ಈ ಬ್ಲ್ಯಾಕ್‌ ಫಂಗಸ್‌ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಸೋಂಕಿನ ಚಿಕಿತ್ಸೆ ವೇಳೆ ನೀಡುವ ಕೆಲವು ಔಷಧಗಳಿಂದಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಒಮ್ಮೆಗೇ ಏರುತ್ತದೆ. ಇದು ಮಧುಮೇಹ ರೋಗಿಗಳಿಗೆ ಇನ್ನಷ್ಟು ಅಪಾಯ ಉಂಟು ಮಾಡುವ ಸಾಧ್ಯತೆ ಇದ್ದರೆ, ಸಾಮಾನ್ಯ ಆರೋಗ್ಯವಂತರೂ ಡಯಾಬಿಟಿಸ್‌ ಬಲೆಗೆ ಬೀಳುವ ಸಾಧ್ಯತೆ ಹೆಚ್ಚಿದೆ.

ಹೈಪರ್ಗ್ಲೈಸೀಮಿಯಾ ನಿಯಂತ್ರಣ ಅತ್ಯಗತ್ಯ

ಹೈಪರ್ಗ್ಲೈಸೀಮಿಯಾ ನಿಯಂತ್ರಣ ಅತ್ಯಗತ್ಯ

ಕೋವಿಡ್ ಚಿಕಿತ್ಸೆ ಬಳಿಕ ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ನಿರಂತರ ಮೇಲ್ವಿಚಾರಣೆ
ಸ್ಟೀರಾಯ್ಡ್ ಗಳ ಬಳಕೆ ಮೇಲೆ ನಿಯಂತ್ರಣ
ಆಮ್ಲಜನಕ ಚಿಕಿತ್ಸೆಯ ಸಮಯದಲ್ಲಿ ಆರ್ದ್ರಕಗಳಿಗೆ ಶುದ್ಧ, ಬರಡಾದ ನೀರನ್ನು ಬಳಸಿ
ಆ್ಯಂಟಿ ಬಯಾಟಿಕ್ ಗಳು ಮತ್ತು ಆ್ಯಂಟಿಫಂಗಲ್ ಔಷಧಿಗಳ ಕ್ರಮಬದ್ಧ ಬಳಕೆ

ಏನು ಮಾಡಬಾರದು?

ಏನು ಮಾಡಬಾರದು?

ಅಲ್ಪ ಪ್ರಮಾಣ ಅಥವಾ ಸೌಮ್ಯ ಸೋಂಕು ಲಕ್ಷಣಗಳಿದ್ದರೂ ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆದರೆ ಉತ್ತಮ
ಮೂಗು ಕಟ್ಟುವ ಪ್ರತೀ ಪ್ರಕರಣಗಳೂ ಬ್ಲಾಕ್ ಫಂಗಸ್ ಸಮಸ್ಯೆ ಅಲ್ಲ
ಕಪ್ಪು ಶಿಲೀಂಧ್ರ ರೋಗಶಾಸ್ತ್ರವನ್ನು ಕಂಡುಹಿಡಿಯಲು KOH ಸ್ಟೇನಿಂಗ್, ಮೈಕ್ರೋಸ್ಕೋಪಿ, ಕಲ್ಚರ್, MALDITOF ನಂತಹ ಪರೀಕ್ಷೆಗಳನ್ನು ಮಾಡಬಹುದು
ಯಾವುದೇ ಕಾರಣಕ್ಕೂ ಚಿಕಿತ್ಸೆ ತಡಮಾಡಬೇಡಿ

ಏನಿದು ಬ್ಲ್ಯಾಕ್ ಫಂಗಸ್?

ಏನಿದು ಬ್ಲ್ಯಾಕ್ ಫಂಗಸ್?

ಮ್ಯೂಕೋರ್ಮೈಕೋಸಿಸ್ ಎನ್ನುವ ಒಂದು ಗುಂಪಿನ ಶಿಲೀಂಧ್ರಗಳಿಂದ ಈ ಬ್ಲ್ಯಾಕ್ ಸಮಸ್ಯೆ ಉಂಟಾಗುತ್ತದೆ. ಇದು ಗಾಳಿಯಲ್ಲಿ ಹರಿದಾಡುತ್ತದೆ. ಈ ಗಾಳಿಯನ್ನು ಉಸಿರಾಡಿದ ವೇಳೆ ಅದು ರೋಗಿಯ ದೇಹ ಸೇರುತ್ತದೆ. ಇದು ಸೈನಸ್ ಕುಳಿಗಳು, ಶ್ವಾಸಕೋಶ ಮತ್ತು ಎದೆಯ ಕುಳಿಗಳಲ್ಲಿ ಹೋಗಿ ಸೇರಿಕೊಳ್ಳುತ್ತದೆ. ಆದರೆ ಇದಕ್ಕೆ ಮತ್ತು ಕೋವಿಡ್ ಗೆ ಸಂಬಂಧವೇನು ಎನ್ನುವುದು ಇದುವರೆಗೆ ತಿಳಿದುಬಂದಿಲ್ಲ. ಕೋವಿಡ್-19 ವೇಳೆ ತೆಗೆದುಕೊಳ್ಳುವಂತಹ ಸ್ಟಿರಾಯ್ಡ್ ಗಳು ಇದಕ್ಕೆ ಕಾರಣವಾಗಿರಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸಮಸ್ಯೆಯ ಲಕ್ಷಣಗಳೇನು?

ಈ ಸಮಸ್ಯೆಯ ಲಕ್ಷಣಗಳೇನು?

ಈ ಕಪ್ಪು ಶಿಲೀಂಧ್ರ ಸೋಂಕು ಹಬ್ಬಿದರೆ, ಆಗ ಮುಖದಲ್ಲಿ ಬದಲಾವಣೆಗಳು ಕಂಡುಬರುತ್ತದೆ.. ಕೆಲವೊಂದು ಸಲ ಇದು ಒಳಗಿನ ಅಂಗಾಂಗಗಳ ಮೇಲೆ ಕೂಡ ಪರಿಣಾಮ ಬೀರಬಹುದು. ಕೆಲವೊಂದು ತೀವ್ರ ರೀತಿಯ ಲಕ್ಷಣಗಳು ಇದರಿಂದ ಕಂಡುಬರುತ್ತದೆ. ಅತಿಯಾದ ತಲೆನೋವು, ದೃಷ್ಟಿ ಮಂದವಾಗುವುದು, ​ ದವಡೆ ಮತ್ತು ಮುಖದ ಭಾಗಗಳಲ್ಲಿ ಊತ, ಮಾನಸಿಕ ಗೊಂದಲ, ಮೂಗಿನ ಮೇಲೆ ಕಪ್ಪು ಬಣ್ಣ ಮೂಡುತ್ತದೆ. ಇದು ಬಾಯಿಗೆ ಹಬ್ಬಿದರೆ ಅದರಿಂದ ಹಲ್ಲುಗಳು ಮತ್ತು ದವಡೆ ಮೇಲೆ ಕೂಡ ಪರಿಣಾಮವಾಗಬಹುದು.

ಪತ್ತೆ ಮಾಡುವುದು ಹೇಗೆ?

ಪತ್ತೆ ಮಾಡುವುದು ಹೇಗೆ?

ಒಂದು ಬದಿಯ ಮುಖದ ನೋವು, ಮರಗಟ್ಟುವಿಕೆ ಅಥವಾ ತಲೆನೋವು, ಹಲ್ಲುನೋವು
ನೋವಿನಿಂದ ಮಸುಕಾದ ದೃಷ್ಟಿ, ಎದೆ ನೋವು, ಉಸಿರಾಟದ ಸಮಸ್ಯೆ
ಸೈನಟಿಸ್-ಅತಿಯಾದ ಮೂಗು ಕಟ್ಟುವಿಕೆ ಮತ್ತು ನೋವು
ಮೂಗಿನಿಂದ ಕಪ್ಪು ವಿಸರ್ಜನೆ (ಕಪ್ಪು ಬಣ್ಣದ ರಕ್ತಸಿಕ್ತ ದ್ರವ)
ಕೆನ್ನೆಯ ಮೂಳೆಯ ಮೇಲೆ ನೋವು

Recommended Video

ನಿಮಗೆ ಆ ದೇವರು ಹೆಚ್ಚಿನ ಆರೋಗ್ಯ ಕೊಡಲಿ ಎಂದ ಬಾಲಿವುಡ್ ನಟ | Oneindia Kannada
ಮಧುಮೇಹಿಗಳಿಗೆ ಅಪಾಯ

ಮಧುಮೇಹಿಗಳಿಗೆ ಅಪಾಯ

ಅನಿಯಂತ್ರಿತ ಡಯಾಬಿಟಿಸ್ ಸಮಸ್ಯೆ ಇರುವವರು

ದೀರ್ಘಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿರುವವರು
ಅಂಗಾಂಗ ಕಸಿ, ಇತರೆ ಗಂಭೀರ ಅನಾರೋಗ್ಯ ಸಮಸ್ಯೆ ಇರುವವರಿಗೆ ಹೆಚ್ಚು ಅಪಾಯವಿದೆ.
ರೋಗ ನಿರೋಧಕ ಶಕ್ತಿ ಕುಂದಿ ಸ್ಟಿರಾಯ್ಡ್ ಗಳನ್ನು ಹೆಚ್ಚು ಬಳಕೆ ಮಾಡುತ್ತಿರುವವರು

English summary
Several states, including Karnataka, are seeing a rise in the number of cases of Mucormycosis or Black Fungus, especially among COVID-19 recovered patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X