ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ನಿಂದ ಚೇತರಿಸಿಕೊಂಡವರ ಶಸ್ತ್ರಚಿಕಿತ್ಸೆಗೆ ತಜ್ಞರಿಂದ ಮಹತ್ವದ ಸಲಹೆ

|
Google Oneindia Kannada News

ನವದೆಹಲಿ, ಮೇ 31: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಾಗೂ ಕೋವಿಡ್ 19 ರಾಷ್ಟ್ರೀಯ ಕಾರ್ಯಪಡೆಯ ತಜ್ಞರು ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡವರ ತುರ್ತು ಅಲ್ಲದ ಶಸ್ತ್ರ ಚಿಕಿತ್ಸೆಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ. ತುರ್ತು ಶಶ್ತ್ರಚಿಕಿತ್ಸೆಗಳು ಅಲ್ಲದ ರೋಗಿಗಳು ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡ ಆರು ವಾರಗಳ ನಂತರ ಶಸ್ತ್ರಚಿಕಿತ್ಸೆ ನಡೆಸುವುದು ಉತ್ತಮ ಎಂದಿದ್ದಾರೆ.

ತುರ್ತು ಅಲ್ಲದ ಶಶಸ್ತ್ರಚಿಕಿತ್ಸೆಗಳನ್ನು ನಡೆಸುವಾಗ ವೈದ್ಯರು ಆರ್‌ಟಿ-ಪಿಟಿಆರ್ ವರದಿಯನ್ನು ಕೇಳುತ್ತಾರೆ. ಆದರೆ ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡವರಲ್ಲಿ ನಿರುಪದ್ರವಿ ಮೃತ ವೈರಸ್‌ಗಳು ದೇಹದಲ್ಲಿ ಉಳಿದುಕೊಂಡಿರುವ ಸಾಧ್ಯತೆಯಿದ್ದು ಪಾಸಿಟಿವ್ ವರದಿ ಬರುವ ಸಂಭವವಿರುತ್ತದೆ. ಹೀಗಾಗಿ ಕೊರೊನಾ ವೈರಸ್‌ಗೆ ಮರುತುತ್ತಾಗಿದ್ದಾರೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು 102 ದಿನಗಳ ಅಂತರ ಬೇಕಾಗುತ್ತದೆ ಎಂದು ತಜ್ಞ ವೈದ್ಯ ಸಂಜಯ್ ಪೂಜಾರಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅಡ್ಡ ಪರಿಣಾಮದ ಅಪಾಯ: ಪಂಚತಾರಾ ಹೋಟೆಲ್‌ನ ಸಾಮಾನ್ಯ ಫ್ರಿಜ್‌ನಲ್ಲಿ ಕೊರೊನಾ ಲಸಿಕೆ!ಅಡ್ಡ ಪರಿಣಾಮದ ಅಪಾಯ: ಪಂಚತಾರಾ ಹೋಟೆಲ್‌ನ ಸಾಮಾನ್ಯ ಫ್ರಿಜ್‌ನಲ್ಲಿ ಕೊರೊನಾ ಲಸಿಕೆ!

ಹಾಗಿದ್ದರೂ ಕೊರೊನಾ ವೈರಸ್‌ನಿಂದ ಚೇತರಿಸಿಕೊಳ್ಳುತ್ತಿರುವ ಹಾಗೂ ಚೇತರಿಸಿಕೊಂಡವರಿಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯಗಳು ಇದ್ದಂತಾ ಸಂದರ್ಭದಲ್ಲಿ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ವೈದ್ಯರು ಸಲಹೆಯನ್ನು ನೀಡಿದ್ದಾರೆ.

ICMR Advises Against Surgery of Recovered coronavirus Patients, suggest Them to Wait for 6 Weeks

ಇನ್ನು ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡವರ ಶಸ್ತ್ರಚಿಕಿತ್ಸೆಗೆ ಮುನ್ನ ಹಾಗೂ ಶಸ್ತ್ರ ಚಿಕಿತ್ಸೆಯ ನಂತರ ಹೃದಯದ ರಕ್ತನಾಳಗಳ ವ್ಯವಸ್ಥೆಯ ಮೇಲೆ ವಿಶೇಷ ಗಮನವಿಡಬೇಕಾಗುತ್ತದೆ ಎಂದು ಕೂಡ ಡಾ. ಪೂಜಾರಿ ಹೇಳಿದ್ದಾರೆ.

ಕೊರೊನಾ ವೈರಸ್‌ಗೆ ಒಳಗಾದವರಲ್ಲಿ ಆಯಾಸ, ಉಸಿರಾಟದ ತೊಂದರೆ ಮತ್ತು ಎದೆ ನೋವು ಮುಂತಾದ ಲಕ್ಷಣಗಳು ಸಾಮಾನ್ಯವಾಗಿದೆ. ರೋಗ ದೃಢಪಟ್ಟ 60 ದಿನಗಳಿಗೂ ಹೆಚ್ಚು ಕಾಲ ಈ ಲಕ್ಷಣಗಳು ಇರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಇತರ ವೈದ್ಯರು ಕೂಡ ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡ ರೋಗಿಗಳನ್ನು 102 ದಿನಗಳಿಗೂ ಮುನ್ನ ಮರು ಪರೀಕ್ಷೆಗೆ ಒಳಪಡಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ

ಕೋವಿಡ್‌ನಿಂದ ಚೇತರಿಸಿಕೊಂಡವರ ಶಸ್ತ್ರಚಿಕಿತ್ಸೆಗೆ ತಜ್ಞರ ಸಲಹೆಗಳು:

*ರೋಗಲಕ್ಷಣಗಳಿಲ್ಲದೆ ಅಥವಾ ಸೌಮ್ಯಲಕ್ಷಣಗಳೊಂದಿಗೆ ಕೊರೊನಾ ವೈರಸ್‌ಗೆ ತುತ್ತಾಗಿದ್ದವರು ಚೇತರಿಸಿಕೊಂಡ ನಾಲ್ಕು ವಾರಗಳ ಅಂತರ ಇರಲಿ

*ಕೆಮ್ಮು, ಉಸಿರಾಟದ ಸಮಸ್ಯೆ ಮುಂತಾದ ರೋಗಲಕ್ಷಣಗಳನ್ನು ಹೊಂದಿದ್ದವರಿಗೆ ಆರು ವಾರಗಳ ಅಂತರ
*ಮದುಮೇಹ, ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದು ರೋಗಲಕ್ಷಣದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳು 10 ವಾರಗಳ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಸೂಕ್ತ

* ಐಸಿಯುಗೆ ದಾಖಲಾದ ರೋಗಿಗೆ ಹನ್ನೆರಡು ವಾರಗಳು ಅಂತರ

* ವೈರಸ್‌ನಿಂದ ಚೇತರಿಸಿಕೊಂಡ 102 ದಿನಗಳಿಗೆ ಮುನ್ನ ಮರುಪರೀಕ್ಷೆ ಬೇಡ

*ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡ 102 ದಿನಗಳಿಗೆ ಮುನ್ನ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ.

Recommended Video

ಕೊರೊನ ವಿರುದ್ಧ ಹೋರಾಡಿ ಗೆದ್ದ ಒಂದೇ ಮನೆಯ 13 ಜನ | Oneindia Kannada

*102 ದಿನಗಳಿಗೆ ಮುನ್ನ ಮರು ಪರೀಕ್ಷೆಯನ್ನು ನಡೆಸಿದರೆ ಕೊರೊನಾ ವೈರಸ್ ಪಾಸಿಟಿವ್ ಬರುವ ಸಾಧ್ಯತೆ. ವೈರಸ್‌ನಿಂದ ಮುಕ್ತರಾಗಿದ್ದರೂ ದೇಹದಲ್ಲಿ ನಿರುಪದ್ರವಿ ಮೃತ ವೈರಸ್‌ಗಳು ಇರುವ ಸಾಧ್ಯತೆಯಿರುವುದು ಇದಕ್ಕೆ ಕಾರಣ. ಆದರೆ ಇವುಗಳು ಅನಾರೋಗ್ಯಕ್ಕೆ ಕಾರಣವಾಗುವುದಿಲ್ಲ ಮತ್ತು ಸೋಂಕನ್ನು ಹರಡಿಸುವುದಿಲ್ಲ.

English summary
ICMR Advises Against Surgery of Recovered coronavirus Patients, suggest Them to Wait for 6 Weeks. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X