ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್ ಜತೆ ಡೀಲ್, ಭಾರತದ ಬತ್ತಳಿಕೆಗೆ 100 'ಸ್ಪೈಸ್ ಬಾಂಬ್'

|
Google Oneindia Kannada News

ನವದೆಹಲಿ, ಜೂನ್ 07: ಕಣಿವೆ ರಾಜ್ಯ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಬಾಲಕೋಟ್ ಮೇಲೆ ದಾಳಿ ನಡೆಸಿ, ಜೈಷ್ ಎ ಮೊಹಮ್ಮದ್ ಉಗ್ರರನ್ನು ಭಾರತೀಯ ವಾಯುಸೇನೆ ಧ್ವಂಸಗೊಳಿಸಿತ್ತು. ಈಗ ತನ್ನ ಬತ್ತಳಿಕೆಯನ್ನು ಇನ್ನಷ್ಟು ಬಲಗೊಳಿಸಿಕೊಳ್ಳಲು ಇಸ್ರೇಲ್ ಜತೆ ಒಪ್ಪಂದ ಮಾಡಿಕೊಂಡಿದ್ದು, 100 ಸ್ಪೈಸ್ ಬಾಂಬ್ ಖರೀದಿಸುತ್ತಿದೆ

100 ಸ್ಪೈಸ್ ಬಾಂಬ್ ಖರೀದಿಗಾಗಿ ಇಸ್ರೇಲ್ ಜತೆ 300 ಕೋಟಿ ರು ಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಕೋಟ್ ನಲ್ಲಿದ್ದ ಜೈಷ್ ಎ ಮೊಹಮ್ಮದ್ ಉಗ್ರರ ನೆಲೆ ಮೇಲೆ ದಾಳಿ ಮಾಡಲು ಇದೇ SPICE ಬಾಂಬ್ ಗಳನ್ನು ಭಾರತೀಯ ವಾಯುಪಡೆ ಬಳಕೆ ಮಾಡಿತ್ತು.

ಗೃಹ ಸಚಿವ ಅಮಿತ್ ಶಾ ಕೈಲಿದೆ ಟಾಪ್ 10 ಉಗ್ರರ ಹಿಟ್ ಲಿಸ್ಟ್ ಗೃಹ ಸಚಿವ ಅಮಿತ್ ಶಾ ಕೈಲಿದೆ ಟಾಪ್ 10 ಉಗ್ರರ ಹಿಟ್ ಲಿಸ್ಟ್

ವಿಪತ್ತು ಕಾಲದಲ್ಲಿ ಬಲಗೊಳಿಸಲು ಅತ್ಯಾಧುನಿಕ ಅಸ್ತ್ರ ಸ್ಪೈಸ್ ಬಾಂಬ್ ಮುಂದಿನ ಮೂರು ತಿಂಗಳಲ್ಲಿ ಭಾರತ ಸೇರಲಿದೆ. ರಿಯಲ್ ಟೈಮ್ ನಲ್ಲಿ ಎಲೆಕ್ಟ್ರೋ ಆಪ್ಟಿಕಲ್ ಇಮೇಜ್ ನೊಂದಿಗೆ ಹೊಂದಾಣಿಕೆ ನಡೆಸಿ ಸುಮಾರು 60 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ಧ್ವಂಸಗೊಳಿಸಬಲ್ಲ ಸಾಮರ್ಥ್ಯ ಈ ಸ್ಪೈಸ್ ಬಾಂಬ್ ಗಿದೆ. ಬಾಂಬಿನ ಕಂಪ್ಯೂಟರ್ ಮೆಮೋರಿಯಲ್ಲಿ ಗುರಿ, ಗುರಿ ಸಾಗಬೇಕಾದ ಪಥ ಸೇರಿದಂತೆ ಹಲವು ರಿಫರೆನ್ಸ್ ಮಾಹಿತಿಯನ್ನು ಫೀಡ್ ಮಾಡಲಾಗಿರುತ್ತದೆ. ಗುರಿ ಸಾಗುವ ಹಾದಿಯನ್ನು ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಲ್ಲ ನಿಪುಣ ಬಾಂಬ್ ಇದಾಗಿದೆ.

IAF to buy over 100 SPICE bombs, signs Rs 300 cr deal with Israel

ಎಂಕೆ 84, ಬಿಎಲ್ ಯು 109, ಎಪಿಡಬ್ಲ್ಯೂ ಹಾಗೂ ಆರ್ ಎ ಪಿ 2000 ಆಡ್ ಆನ್ ಕಿಟ್ ಕೂಡಾ ಹೊಂದಿರುತ್ತದೆ. ಐಎಎಫ್ ನ ಯುದ್ಧ ವಿಮಾನ ಮಿರಾಜ್ 2000 ಜೊತೆಗೆ ಸ್ಪೈಸ್ 2000 ಬಾಂಬ್ ಗಳನ್ನು ಹೊಂದಿಸಿ, ಜೈಷ್ ಎ ಮೊಹಮ್ಮದ್ ಮೇಲೆ ದಾಳಿ ಮಾಡಲಾಗಿತ್ತು. ನಿಖರವಾಗಿ ಗುರಿ ಮುಟ್ಟಬಲ್ಲ ಸಾಮರ್ಥ್ಯ, ವಿವಿಧ ರೀತಿ ಬಾಂಬ್ ಹಾಗೂ ಕ್ಷಿಪಣಿ ಹೊತ್ತೊಯ್ಯಬಲ್ಲ ತಾಕತ್ತನ್ನು ಮಿರಾಜ್ ಹೊಂದಿದೆ.

English summary
Buoyed by its success in the Balakot air strikes against a Jaish-e-Mohammed terrorist camp in Pakistan, Indian Air Force has signed a deal worth around Rs 300 crore for buying more than 100 SPICE bombs from Israel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X