For Daily Alerts
ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಾಯುಸೇನೆಯ ಯೋಧ
ಸೋಲಾನ್(ಹಿಮಾಚಲ ಪ್ರದೇಶ), ಆಗಸ್ಟ್ 29: ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿಮಾಚಲ ಪ್ರದೇಶದ ಸೋಲಾನ್ ಜಿಲ್ಲೆಯಲ್ಲಿ ನಡೆದಿದೆ.
ಬ್ರೆಡ್ ತರಲು ಹೋದ 12 ರ ಹುಡುಗ ಏನಾದ? ಕಾಶ್ಮೀರದ ಕಟುವಾಸ್ತವ!
ಕರ್ತವ್ಯದ ಮೇಲಿದ್ದ 24 ವರ್ಷ ವಯಸ್ಸಿನ ಕೃಷ್ಣೇಂದು ಚೌಧರಿ ತಮ್ಮ ಸರ್ವಿಸ್ ರೈಫೆಲ್ ನಿಂದ ಮಂಗಳವಾರ ಸಂಜೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತದೇಹದ ಪಕ್ಕ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಚೌಧರಿ ಈಶಾನ್ಯ ರಾಜ್ಯವಾದ ತ್ರಿಪುರದ ಗೋಮ್ತಿ ಜಿಲ್ಲೆಯವರೆಂಬುದು ತಿಳಿದುಬಂದಿದೆ.
ಜಮ್ಮು ಕಾಶ್ಮೀರದ 5 ಜಿಲ್ಲೆಗಳಲ್ಲಿ ಮೊಬೈಲ್ ಸೇವೆ ಆರಂಭ
ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ಕಳಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರ ಹೆಚ್ಚನ ಮಾಹಿತಿ ಲಭ್ಯವಾಗಲಿದೆ.