ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ನ F 16 ಯುದ್ಧ ವಿಮಾನ ಹೊಡೆದುರುಳಿಸಿದ್ದಕ್ಕೆ ಸಾಕ್ಷ್ಯ ಬಿಡುಗಡೆ

By ಅನಿಲ್ ಆಚಾರ್
|
Google Oneindia Kannada News

ಪಾಕಿಸ್ತಾನವು ಫೆಬ್ರವರಿ 27ನೇ ತಾರೀಕು ಭಾರತದೊಂದಿಗೆ ನಡೆಸಿದ ಕಾದಾಟದಲ್ಲಿ ಅಮೆರಿಕ ನಿರ್ಮಿತ F 16 ಯುದ್ಧ ಕಳೆದುಕೊಂಡಿಲ್ಲ ಎಂದು ವಾದಿಸುತ್ತಲೇ ಬರುತ್ತಿತ್ತು. ಆ ವಾದಕ್ಕೆ ಪ್ರತಿಯಾಗಿ ಸೋಮವಾರದಂದು ಭಾರತೀಯ ವಾಯು ಸೇನೆ ರಾಡಾರ್ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಭಾರತದ ವಾಯು ದಾಳಿಯಲ್ಲಿ ಪಾಕಿಸ್ತಾನವು F 16 ಯುದ್ಧ ವಿಮಾನವನ್ನು ಕಳೆದುಕೊಂಡಿದೆ ಎನ್ನುವುದಕ್ಕೆ ವಿಶ್ವಾಸಾರ್ಹ ಸಾಕ್ಷ್ಯ ಇಲ್ಲಿದೆ ಎಂದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ, ಈ ಮಾಹಿತಿಯನ್ನು ಗೋಪ್ಯತಾ ಕಾರಣಕ್ಕೆ ಸಾರ್ವಜನಿಕವಾಗಿ ಹಂಚಿಕೊಳ್ಳಲು ಭಾರತೀಯ ವಾಯು ಸೇನೆಗೆ ನಿರ್ಬಂಧವಿದೆ ಎಂದು ಅಸಿಸ್ಟೆಂಟ್ ಚೀಫ್ ಆಫ್ ಏರ್ ಸ್ಟಾಫ್ (ಕಾರ್ಯಾಚರಣೆ) ಆರ್.ಜಿ.ಕೆ.ಕಪೂರ್ ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ, ಪಾಕಿಸ್ತಾನ ವಾಯು ಪಡೆಯ F 16 ದಾಳಿಯ ಸಂಪೂರ್ಣ ಮಾಹಿತಿ ಮತ್ತು ರೇಡಿಯೋ- ಟೆಲಿಫೋನಿ ವಿವರಗಳು ಭಾರತೀಯ ವಾಯು ಸೇನೆಗೆ ದೊರೆತಿದ್ದು, ಅದನ್ನು ಸಾಕ್ಷ್ಯವಾಗಿ ಸಾರ್ವಜನಿಕರ ಮುಂದೆ ಇಡಲು ಸಾಧ್ಯವಿಲ್ಲ. ಅದು ಭದ್ರತೆ ಹಾಗೂ ಗೋಪ್ಯತೆಗೆ ಸಂಬಂಧಿಸಿದ ವಿಷಯ ಎನ್ನಲಾಗಿದೆ.

IAF shows radar images of Pak F-16 being shot down in February

ಭಾರತೀಯ ವಾಯು ಸೇನೆಯು ಬಾಲಕೋಟ್ ದಾಳಿಯನ್ನೂ ಯಶಸ್ವಿಯಾಗಿ ಪೂರೈಸಿತು. ಅದರ ಮರು ದಿನ ಅಂದರೆ ಫೆಬ್ರವರಿ ಇಪ್ಪತ್ತೇಳರಂದು ಪಾಕಿಸ್ತಾನ ವಾಯು ಸೇನೆಯು ಭಾರತದ ಸೇನಾ ಪ್ರದೇಶಗಳ ಮೇಲೆ ನಡೆಸಿದ ಪ್ರತಿ ದಾಳಿಯನ್ನೂ ಹಿಮ್ಮೆಟ್ಟಿಸಿದ್ದೇವೆ ಎಂದು ಕಪೂರ್ ಹೇಳಿದ್ದಾರೆ.

ರಾಡಾರ್ ನಲ್ಲಿ ಸೆರೆಯಾದ ಚಿತ್ರದಲ್ಲಿ ವಿಂಗ್ ಕಮ್ಯಾಂಡರ್ ಅಭಿನಂದನ್ ವಿರುದ್ಧವಾಗಿ ಹಲವು F 16 ಯುದ್ಧ ವಿಮಾನಗಳು ಕಂಡುಬರುತ್ತವೆ. ಎರಡನೇ ಚಿತ್ರದಲ್ಲಿ, ಹತ್ತು ಸೆಕೆಂಡ್ ಗಳ ನಂತರ ಒಂದು F 16 ನಾಪತ್ತೆ ಆಗಿರುವುದು ಕಂಡುಬರುತ್ತದೆ. "ಅದು ಪಾಕಿಸ್ತಾನ ವಾಯು ಸೇನೆ ಕಳೆದುಕೊಂಡ F 16" ಎಂದು ಅಧಿಕಾರಿ ಹೇಳಿದ್ದಾರೆ.

ವರಸೆ ಬದಲಿಸಿದ ಪಾಕಿಸ್ತಾನ, F-16 ಯುದ್ಧ ವಿಮಾನ ಬಳಕೆ ಬಗ್ಗೆ ಹೇಳಿಕೆವರಸೆ ಬದಲಿಸಿದ ಪಾಕಿಸ್ತಾನ, F-16 ಯುದ್ಧ ವಿಮಾನ ಬಳಕೆ ಬಗ್ಗೆ ಹೇಳಿಕೆ

ಮಿಗ್ 21 ಯುದ್ಧ ವಿಮಾನವು F 16ಗಿಂತ ಬಹಳ ಹಳೆಯದು. ಅಂಥದ್ದರಲ್ಲಿ ಅತ್ಯಾಧುನಿಕ ಯುದ್ಧ ವಿಮಾನವನ್ನು ಮಿಗ್ ಹೊಡೆದುರುಳಿಸಿತ್ತು. ಆದರೆ ತಾನು ಯಾವುದೇ ಯುದ್ಧ ವಿಮಾನವನ್ನು ಕಳೆದುಕೊಂಡಿಲ್ಲ ಎಂದು ಪಾಕಿಸ್ತಾನ ಹೇಳುತ್ತಾ ಬಂದಿದೆ.

English summary
The Indian Air Force on Monday released radar images to rebut Pakistan’s claim that it hadn’t lost a US-manufactured F-16 fighter jet in the February 27 dogfight. The IAF said there was more credible evidence available to establish that Pakistan Air Force had lost one F-16 in the air action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X