• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ-ಪಾಕ್ ಒಟ್ಟಿಗೆ ದಾಳಿ ನಡೆಸಿದರೂ ಎದುರಿಸಲು ಭಾರತದ ವಾಯುಪಡೆ ಸಿದ್ಧ

|

ನವದೆಹಲಿ, ಸೆಪ್ಟೆಂಬರ್ 26: ಪಾಕಿಸ್ತಾನ ಹಾಗೂ ಚೀನಾಗಳಿಗೆ ಕಠಿಣ ಸಂದೇಶ ರವಾನಿಸಲು ಭಾರತದ ವಾಯುಪಡೆ ಮುಂದಾಗಿದೆ. ಒಂದು ವೇಳೆ ಪಾಕ್ ಹಾಗೂ ಚೀನಾ ಜತೆಗೂಡಿ ಭಾರತದ ವಿರುದ್ಧ ದಾಳಿಗೆ ಮುಂದಾದರೂ ಹಗಲು ಮತ್ತು ರಾತ್ರಿ ಎರಡೂ ಕಡೆ ದಾಳಿ ನಡೆಸಲು ವಾಯುಪಡೆ ಸನ್ನದ್ಧವಾಗಿದೆ.

ಪಾಕಿಸ್ತಾನ ಹಾಗೂ ಚೀನಾ ಗಡಿ ಸಮೀಪದ ಎರಡೂ ವಾಯುನೆಲೆಗಳಲ್ಲಿ ಭಾರತದ ವಾಯುಪಡೆ ಹಗಲು ರಾತ್ರಿ ತೀವ್ರ ಚಟುವಟಿಕೆಗಳನ್ನು ನಡೆಸುತ್ತಿದೆ. ಪಾಕಿಸ್ತಾನದಿಂದ 50 ಕಿ.ಮೀ. ದೂರ ಮತ್ತು ದೌಲತ್ ಬೇಗ್ ಓಲ್ಡಿ ನೆಲೆಗೆ ಅಂದಾಜು 80 ಕಿಮೀ ದೂರದಲ್ಲಿನ ಐಎಎಫ್‌ನ ಮುಂಚೂಣಿ ನೆಲೆಯಿಂದ ಕಾರ್ಯಾಚರಣೆ ನಡೆಸಲು ಐಎಎಫ್ ಸಿದ್ಧತೆ ನಡೆಸುತ್ತಿದೆ. ಯುದ್ಧ ವಿಮಾನಗಳು ಮತ್ತು ಸರಕು ಸಾಗಣೆ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ನಿರಂತರ ಹಾರಾಟ ನಡೆಸುತ್ತಿವೆ.

ಲಡಾಖ್ ಎತ್ತರದ ಪ್ರದೇಶದಲ್ಲಿ ಭಾರತದ ಹಿಡಿತ: ಚೀನಾ ಎದೆಯಲ್ಲಿ ನಡುಕ!

'ಇಂದು ನಮ್ಮ ಯುದ್ಧ ಸಾಮರ್ಥ್ಯ ಬೆಳೆದಿದೆ. ಮುಂಚೂಣಿ ನೆಲೆಗಳಿಂದ ನಾವು ರಾತ್ರಿ ಕೂಡ ಎಲ್ಲ ಬಗೆಯ ಕಾರ್ಯಾಚರಣೆಗಳನ್ನು ನಡೆಸಲು ಸಮರ್ಥರಾಗಿದ್ದೇವೆ' ಎಂದು ಐಎಎಫ್ ತಿಳಿಸಿದೆ. ಮುಂದೆ ಓದಿ.

ಯುದ್ಧ ವಿಮಾನಗಳ ಹಾರಾಟ

ಯುದ್ಧ ವಿಮಾನಗಳ ಹಾರಾಟ

ಭಾರತವು ಸುಖೋಯ್ 30ಎಂಕೆಐ, ಸಿ-130 ಸೂಪರ್ ಹರ್ಕ್ಯೂಲಸ್, ಇಲ್ಯುಶಿನ್-76 ಮತ್ತು ಆಂಟೊನ್- 32 ಸೇರಿದಂತೆ ಮುಂಚೂಣಿ ಯುದ್ಧ ವಿಮಾನಗಳನ್ನು, ಹೆಲಿಕಾಪ್ಟರ್ ಮತ್ತು ಸರಕು ಸಾಗಣೆ ವಿಮಾನಗಳನ್ನು ನಿಯೋಜಿಸಿದೆ.

ಏಕಪಕ್ಷೀಯ ಬದಲಾವಣೆ ಮಾಡಿದ್ದಲ್ಲಿ ಹುಷಾರ್: ಚೀನಾಗೆ ಎಚ್ಚರಿಕೆ ಸಂದೇಶ

ಲಡಾಖ್‌ಗೆ ಸಾಮಗ್ರಿ ಪೂರೈಕೆ

ಲಡಾಖ್‌ಗೆ ಸಾಮಗ್ರಿ ಪೂರೈಕೆ

ಜತೆಗೆ ಎಲ್‌ಎಸಿಯಲ್ಲಿನ ಗಡಿ ಉದ್ವಿಗ್ನತೆ ಇನ್ನೂ ನಿವಾರಣೆಯಾಗದ ಹಿನ್ನೆಲೆಯಲ್ಲಿ ಯುದ್ಧ ವಿಮಾನಗಳು ದಿನವಿಡೀ ಹಾರಾಟ ನಡೆಸುತ್ತಿವೆ. ಪೂರ್ವ ಲಡಾಖ್‌ನ ವಿವಿಧ ಭಾಗಗಳಲ್ಲಿನ ಸೇನಾ ಪಡೆಗಳಿಗೆ ಹೆಚ್ಚುವರಿ ಸೈನಿಕರು, ಆಹಾರ ಸಾಮಗ್ರಿ ಹಾಗೂ ಮದ್ದುಗುಂಡುಗಳನ್ನು ಪೂರೈಕೆ ಮಾಡುತ್ತಿದೆ.

ಸ್ಕರ್ದುದಲ್ಲಿ ಚೀನಾ ವಿಮಾನ

ಸ್ಕರ್ದುದಲ್ಲಿ ಚೀನಾ ವಿಮಾನ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರದೇಶದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್‌ನ ಸ್ಕರ್ದು ವಾಯುನೆಲೆಯಲ್ಲಿ ಜೂನ್ ತಿಂಗಳಲ್ಲಿ ಚೀನಾದ ತೈಲ ಪೂರೈಕೆ ವಿಮಾನ ಇಳಿದಿತ್ತು. ಹೀಗಾಗಿ ಈ ಭಾಗದಲ್ಲಿಪಾಕ್ ಪಡೆಗಳ ಜತೆಗೆ ಚೀನಾ ಕೈಜೋಡಿರುವ ಸಾಧ್ಯತೆ ಇರುವುದರಿಂದ ಎಲ್ಲ ರೀತಿಯ ಅಪಾಯಗಳನ್ನು ಎದುರಿಸಲು ಭಾರತೀಯ ವಾಯುಪಡೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಯುದ್ಧದ ಮನಸ್ಥಿತಿ ನಮಗಿಲ್ಲ ಎಂದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್

ರಫೇಲ್ ಯುದ್ಧ ವಿಮಾನ ಹಾರಾಟ

ರಫೇಲ್ ಯುದ್ಧ ವಿಮಾನ ಹಾರಾಟ

ರಫೇಲ್ ಯುದ್ಧ ವಿಮಾನಗಳು ಈಗಾಗಲೇ ಲಡಾಖ್‌ನ ಭಾಗಗಳಲ್ಲಿ ಹಾರಾಟ ನಡೆಸುತ್ತಿವೆ. ಇಲ್ಲಿನ ಪ್ರದೇಶಗಳನ್ನು ಪರಿಚಯ ಮಾಡಿಕೊಳ್ಳಲು ಹಾಗೂ ಪರ್ವತ ಪ್ರದೇಶ, ಸರೋವರಗಳಿರುವ ಈ ಭಾಗದಲ್ಲಿ ರಫೇಲ್ ಹಾರಿಸುವುದನ್ನು ಅಭ್ಯಾಸ ಮಾಡಲಾಗುತ್ತಿದೆ. ವಾಸ್ತವ ಗಡಿ ನಿಯಂತ್ರಣ ರೇಖೆ ಸಮೀಪ ರಫೇಲ್ ಬಳಕೆಯನ್ನು ವಾಯುಪಡೆ ಹೆಚ್ಚಿಸಿದೆ.

English summary
India Air Force said it is ready to undertake operations by day or night on both China and Pakistan fronts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X